ಗಜ಼ಲ್
ಬೆಳದಿಂಗಳ ತಂಪು ಚಂದಿರನಲ್ಲಿ
ನಿನ್ನನ್ನೇ ಹುಡುಕಾಡಿದೆ ಸಖ
ಹೊಳೆಯುವ ಕಂಗಳ ಬೆಳಕನ್ನು
ಎಲ್ಲೆಲ್ಲೂ ತಡಕಾಡಿದೆ ಸಖ//
ಮುಂಜಾನೆಯ ನೇಸರನಿಗೆ
ಏಕೋ ಮುನಿಸು ಬಂದಿದೆ
ಸಂಜೆಯಲಿ ನಿನಗಾಗಿ ದಾರಿ
ಕಾದು ಮಿಡುಕಾಡಿದೆ ಸಖ//
ತಂಗಾಳಿಯ ತಂಪೇಕೋ ಕಾದ
ಬಿಸಿಲಾದಂತೆ ಭಾಸವಾಗುತಿದೆ
ಮುಂಗೋಳಿ ಕೂಗಿದರೂ ನೀ
ಇಲ್ಲಿಗೇಕೋ ಬರದಾದೆ ಸಖ//
ನದಿಯಲ್ಲಿ ಜೋರು ಅಲೆಗಳ
ಏರಿಳಿತಗಳೇಳುತಿವೆ ಇಂದು
ಹದಿಹರೆಯದ ಹೆಣ್ಣಮನದ
ಬಯಕೆ ಅರಿಯದಾದೆ ಸಖ//
ಜಲ ಳ ಮೃದು ಮನದಿ
ಬಿರುಸಾದ ಬಿರುಗಾಳಿ ಬೀಸುತಿದೆ
ಒಲುಮೆಯ ಗೆಳತಿಯ ಮರೆತು
ಏಕೆ ದೂರ ಸರಿದುಹೋದೆ ಸಖ//
ಆನಂದಜಲ,ಶಿಕ್ಷಕಿ
ತುರುವೇಕೆರೆ