Breaking News
Home / ಗೋಕಾಕ / ತಾಲೂಕಾ ಕೂಲಿ ಕಾರ್ಮಿಕರ ಹಮಾಲರ ಕ್ಷೇಮಾವೃದ್ದಿ ವಿವಿದೋದ್ದೇಶಗಳ ಸಂಘವತಿಯಿಂದ ಸುಮಾರು 150 ಕುಟುಂಬಗಳಿಗೆಜೊತೆ ಬಟ್ಟೆ ವಿತರಣೆ

ತಾಲೂಕಾ ಕೂಲಿ ಕಾರ್ಮಿಕರ ಹಮಾಲರ ಕ್ಷೇಮಾವೃದ್ದಿ ವಿವಿದೋದ್ದೇಶಗಳ ಸಂಘವತಿಯಿಂದ ಸುಮಾರು 150 ಕುಟುಂಬಗಳಿಗೆಜೊತೆ ಬಟ್ಟೆ ವಿತರಣೆ

Spread the love

 

 

ಗೋಕಾಕ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಕಾಕ ತಾಲೂಕಿನ ಕೂಲಿ ಕಾರ್ಮಿಕರ ಹಮಾಲರ ಕ್ಷೇಮಾವೃದ್ದಿ ವಿವಿದೋದ್ದೇಶಗಳ ಸಂಘ,ಗೋಕಾಕ ಮತ್ತು ಗೋಕಾಕ ತಾಲೂಕಾ ಹಮಾಲಿ ಕಾರ್ಮಿಕರ ಯೂನಿಯನ್ ವಾಲ್ಮೀಕಿ ವೃತ್ತ ಗೋಕಾಕ ಇವರಿಂದ ದೀಪಾವಳಿ ನಿಮಿತ್ಯ ಎಲ್ಲ ಹಮಾಲರಿಗೆ ತಮ್ಮ ಹಣದಲ್ಲಿ ಕೂಡಿಟ್ಟ ಹಣದಿಂದ

ಸಂಘದ ಅದ್ಯಕ್ಷರಾದ ಬಸವರಾಜ ಆರೆನ್ನವರ ಇವರ ನೇತೃತ್ವದಲ್ಲಿ ಗೋಕಾಕದ ಕಾರ್ಮಿಕ ದುರೀಣರಾದ ಅಂಬಿರಾವ ಪಾಟೀಲ ಇವರ ಅಮೃತ ಹಸ್ತದಿಂದ ಸುಮಾರು 150 ಕುಟುಂಬಗಳಿಗೆ ಹಮಾಲರಿಗೆ ಒಂದು ಜೊತೆ ಬಟ್ಟೆ ಹಾಗು ಅವರ ಕುಟುಂಬಕ್ಕೆ ಸಾರಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಕಾರ್ಮಿಕ ನಿರಿಕ್ಷಕರಾದ ಪಾಂಡುರಂಗ ಮಾವರಕರ ಹಬ್ಬಗಳನ್ನು ಎಲ್ಲರೂ ಆಚರಿಸುವ ಹಾಗೆ ಹಮಾಲಿ ಕಾರ್ಮಿಕರ ಕುಟುಂಬವು ಸಹಿತ ದೀಪಾವಳಿಯನ್ನು ಸಂತೋಸದಿಂದ ಆಚರಿಸಬೇಕೆಂಬ ಅದ್ಯಕ್ಷರ ವಿಚಾರ ನಿಜಕ್ಕೂ ಶ್ಲಾಘನೀಯ ಇಂತಹ ಕಾರ್ಯ ಎಲ್ಲ ಹಮಾಲ ಸಂಘದ ಅದ್ಯಕ್ಚರುಗಳು ಮಾಡಬೇಕೆಂದರು.

ನಗರಸಭೆ ಸದಸ್ಯರಾದ ಶಾಸ್ರ್ತಿಗೊಲ್ಲರ, ಹಮಾಲ ಸಂಘದ ಉಪಾದಕ್ಷರಾದ ಯಲ್ಲಪ್ಪ ಮೇಸ್ತ್ರಿ, ಶೆಟ್ಟೆಪ್ಪಾ ಮೇತ್ರಿ, ಅಶೋಕ ಮೇಸ್ತ್ರಿ, ಹಾಗೂ ಕೂಲಿ‌ಕಾರ್ಮಿಕರ ಕುಟುಂಬಸ್ಥರು ಉಪಸ್ಥಿತರಿದ್ದರು.


Spread the love

About Ad9 Haberleri

Check Also

ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ:ಜಗದೀಶ ಶೆಟ್ಟರ್

Spread the love  ಗೋಕಾಕ: ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗಳಲ್ಲೂ ಬಿಜೆಪಿಗೆ …