Breaking News

ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ರೈತ ಸಂಘದಿಂದ ಬೆಂಬಲ

Spread the love

*ಗೋಕಾಕ:* ಅರಭಾವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು, ರೈತರ ಪರವಾದ ಯೋಜನೆಗಳು ಸೇರಿದಂತೆ ರೈತರ ಬಹುಬೇಡಿಕೆಗಳ ಹೋರಾಟಕ್ಕೆ ಅವರ ಸ್ಪಂದನೆ ಮೆಚ್ಚಿ ಕರ್ನಾಟಕ ರಾಜ್ಯ ರೈತ ಸಂಘ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸಿದೆ.
ರೈತರ ಮಹತ್ವಾಕಾಂಕ್ಷಿ ಯೋಜನೆಗಳಾದ ಕಲ್ಮಡಿ ಏತ ನೀರಾವರಿ, ರಾಮಲಿಂಗೇಶ್ವರ ಏತ ನೀರಾವರಿ ಜಾರಿಗೆ ತರುವಲ್ಲಿ ಬಾಲಚಂದ್ರ ಅವರ ಪಾತ್ರ ಬಹುದೊಡ್ಡದು. ಜತೆಗೆ ಘಟಪ್ರಭಾ ಎಡದಂಡೆ, ಬಲದಂಡೆಗೆ ಜನರು, ಜಾನುವಾರುಗಳಿಗೆ ನೀರು ಬಿಡಿಸುವಲ್ಲಿ ಅವರ ಕಾರ್ಯ ಶ್ಲಾಘನೀಯ. ಹೀಗಾಗಿ ಬಾಲಚಂದ್ರ ಅವರ ರೈತರ, ಜನಪರ ಕಾಳಜಿಯನ್ನು ಮೆಚ್ಚಿ ರೈತ ಸಂಘವು ಅವರಿಗೆ ಬೆಂಬಲ ಸೂಚಿಸಲು ನಿರ್ಧರಿಸಿದೆ.
ಕೇವಲ ಶಾಸಕರಾದರೇ ಅಷ್ಟೆ ಸಾಲದು ರೈತಪರ ಚಿಂತನೆಗಳನ್ನು ಮಾಡುವ ಮೂಲಕ ನೀರಾವರಿ ಯೋಜನೆಗಳನ್ನು ವ್ಯವಸ್ಥಿತವಾಗಿ ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಅಂತಹ ಪ್ರಾಮಾಣಿಕ ಪ್ರಯತ್ನದಲ್ಲಿ ಬಾಲಚಂದ್ರ ಅವರು ಯಶಸ್ವಿಯಾಗಿದ್ದು, ರೈತಪರ ಹೋರಾಟಗಾರರಿಗೆ ಸದಾ ಸ್ಪಂದಿಸುವ ಕೆಲಸವನ್ನು ಈ ಹಿಂದೆಯೂ ಮಾಡಿದ್ದಾರೆ ಹಾಗೆಯೇ ಮುಂದೆಯೂ ಮಾಡುತ್ತಾರೆ ಎನ್ನುವ ವಿಶ್ವಾಸದಿಂದ ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡಿದ್ದೇವೆ ಎಂದು ರೈತ ಸಂಘಟನೆ ತಿಳಿಸಿದೆ.
ಸಿಬಿಸಿ ಕೆನಾಲ್ ಹಿಡಕಲ್ ಜಲಾಶಯದಿಂದ ನೀರು ಬಿಡಿಸಿದ್ದಾರೆ. ಕಾಲುವೆ ನೀರಾವರಿಯ ಕಾಮಗಾರಿ ಸ್ಥಳಕ್ಕೆ ಸ್ವತಃ ತಾವೇ ಹೋಗಿ ಕಾಮಗಾರಿಗಳನ್ನು ಹಾಗೂ ದುರಸ್ತಿ ಕಾರ್ಯಗಳನ್ನು ವೀಕ್ಷಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕಾರ್ಯವನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಆಹಾಕಾರ ತಪ್ಪಿಸಲು ಜನತೆಗೆ ಸಮರ್ಪಕ ಕುಡಿಯುವ ನೀರಿನ ಸಲುವಾಗಿ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಘಟಪ್ರಭಾ ಎಡದಂಡೆ ಮತ್ತು ಘಟಪ್ರಭಾ ಬಲದಂಡೆಯ ಕಾಲುವೆಯ ಟೆಲ್ ಎಂಡ್ ರೈತರಿಗೆ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸುವಲ್ಲಿ ಬಾಲಚಂದ್ರ ಜಾರಕಿಹೊಳಿಯವರ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ರೈತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ನಾಯಕನಾಗಿರುವುದರಿಂದ ಯಾವುದೇ ಪಕ್ಷ ಭೇದವಿಲ್ಲದೇ ಪಕ್ಷಾತೀತವಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಅರಬಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ, ರೈತರಿಗಾಗಿ ಬಿಜೆಪಿ ಸರ್ಕಾರ ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಜತೆಗೆ ರಾಜ್ಯ ಬಿಜೆಪಿ ಸರ್ಕಾರವು ರೈತರ ಮಕ್ಕಳಿಗಾಗಿ ವಿಶೇಷ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇಂತಹ ಹತ್ತು ಹಲವಾರು ಯೋಜನೆಗಳನ್ನು ಬಿಜೆಪಿ ಸರ್ಕಾರ ನೀಡಲು ಮಾತ್ರ ಸಾಧ್ಯ. ಮುಂದೆಯು ಕೂಡ ಬಿಜೆಪಿ ರೈತರ ಪರವಾಗಿ ನಾನಾ ಯೋಜನೆಗಳನ್ನು ಜಾರಿಗೆ ತರಲು ಯೋಜಿಸಿದೆ. ಮಾತ್ರವಲ್ಲ, ರೈತರ ಅಭಿವೃದ್ಧಿಗಾಗಿ, ಆರ್ಥಿಕ ಸಬಲತೆಗಾಗಿ ಬಿಜೆಪಿ ಸರ್ಕಾರ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದರು.
ಅರಬಾವಿ ಕ್ಷೇತ್ರದಲ್ಲಿನ ರೈತರು ಯಾವುದೇ ಸಮಸ್ಯೆಗಳನ್ನು ಹೊತ್ತು ತಂದರು ಅವುಗಳಿಗೆ ಪರಿಹಾರ ಹುಡುಕುವ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇನೆ. ರೈತ ದೇಶದ ಬೆನ್ನೆಲುಬು ಆಗಿರುವುದರಿಂದ ರೈತ ಸಮುದಾಯದ ಆರ್ಥಿಕ ವೃದ್ಧಿಗಾಗಿ ಯಾವುದೇ ಯೋಜನೆಗಳು ಬಂದರೂ ಅವುಗಳ ಸಮರ್ಪಕ ಅನುಷ್ಠಾನಕ್ಕಾಗಿ ನಾನು ಶ್ರಮ ವಹಿಸಿದ್ದೇನೆ. ಜತೆಗೆ ನೈಜ ಫಲಾನುಭವಿಗಳಿಗೆ ಆ ಯೋಜನೆಗಳ ಲಾಭ ದೊರೆಯುವಂತೆ ಮಾಡಿದ್ದೇನೆ. ಮುಂದೆಯೂ ಕೂಡ ಅಂತಹ ಯೋಜನೆಗಳು ಜಾರಿಯಾದರೆ ರೈತರಿಗೆ ದೊರಕುವಂತೆ ಮಾಡುತ್ತೇನೆ. ಈ ಸಂದರ್ಭದಲ್ಲಿ ರೈತ ಸಂಘದ ಸದಸ್ಯರು ನನಗೆ ಬೆಂಬಲ ನೀಡಿರುವುದು ಮತ್ತಷ್ಟು ಶಕ್ತಿ ನೀಡಿದಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉ.ಕ.‌ಅಧ್ಯಕ್ಷ ಗಣಪತಿ ಇಳಗೇರ, ಜಿಲ್ಲಾ ರೈತ ಸಂಘದ ಸಂಚಾಲಕ ಮಹಾದೇವ ಗೊಡೇರ, ಜಿಲ್ಲಾ ಕಾರ್ಯಾಧ್ಯಕ್ಷ ಮುತ್ತಪ್ಪ ಬಾಗಣ್ಣವರ, ಸಂಘಟನೆ ಪ್ರಮುಖರಾದ ಮುತ್ತಪ್ಪ ಬೇಟಗೇರಿ, ಮಹಾಂತೇಶ ರಡ್ಡೆರಹಟ್ಟಿ, ಮಾರುತಿ ತಳಕಟ್ನಾಳ, ವಿಠಲ ಲಂಗೋಟಿ, ಪ್ರಕಾಶ ಹಾಲಣ್ಣವರ, ಶಿವನಗೌಡ ತಳಕಟ್ನಾಳ, ಪರಸಪ್ಪ ಕುರಿ ಸೇರಿದಂತೆ ರೈತ ಸಂಘಟನೆಯ ಪ್ರಮುಖರು ಬೆಂಬಲ ಸೂಚಿಸಿದರು.
———-


Spread the love

About Ad9 News

Check Also

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ! ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ

Spread the love ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ …

Leave a Reply

Your email address will not be published. Required fields are marked *