Breaking News
Home / ರಾಷ್ಟ್ರೀಯ / ದೆಹಲಿ ರೈತ ಹೋರಾಟಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಬೆಂಬಲ: ಹುದ್ದೆಯಿಂದ ಕಿತ್ತರೂ ಪರವಾಗಿಲ್ಲ ಎಂದ ಗವರ್ನರ್!

ದೆಹಲಿ ರೈತ ಹೋರಾಟಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಬೆಂಬಲ: ಹುದ್ದೆಯಿಂದ ಕಿತ್ತರೂ ಪರವಾಗಿಲ್ಲ ಎಂದ ಗವರ್ನರ್!

Spread the love

ದೆಹಲಿ ರೈತ ಹೋರಾಟಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಬೆಂಬಲ: ಹುದ್ದೆಯಿಂದ ಕಿತ್ತರೂ ಪರವಾಗಿಲ್ಲ ಎಂದ ಗವರ್ನರ್!

ನಾಯಿ ಸತ್ತಾಗ ಸಂತಾಪ ಸೂಚಿಸಲಾಗುತ್ತದೆ. ಆದರೆ 250 ರೈತರು ಸಾವನ್ನಪ್ಪಿದರೂ

ಯಾರೂ ಸಂತಾಪ ವ್ಯಕ್ತಪಡಿಸಲಿಲ್ಲ. ನನ್ನನ್ನು ರಾಜ್ಯಪಾಲರ ಹುದ್ದೆಯಿಂದ ಕಿತ್ತು ಹಾಕಿದರೂ ಪರವಾಗಿಲ್ಲ, ನಾನು ರೈತರ ಬೆಂಬಲಕ್ಕೆ ನಿಲ್ಲುವೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.

ಈ ಆಂದೋಲನವು ಹೀಗೆ ಮುಂದುವರಿದರರೆ

ಪಶ್ಚಿಮ ಯುಪಿ, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಬಿಜೆಪಿ ಸೋಲುತ್ತದೆ ಎಂದು ಖಾಸಗಿ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರಶ್ನೆಯೊಂದಕ್ಕೆ

ಉತ್ತರಿಸಿದ ಅವರು, “ನನ್ನ ಹೇಳಿಕೆಯಿಂದ ಹಾನಿ ಉಂಟಾಗುತ್ತದೆ ಎಂದು ಸರ್ಕಾರ ಭಾವಿಸಿದರೆ, ನಾನು ನನ್ನ ಸ್ಥಾನದಿಂದ ಇಳಿಯುತ್ತೇನೆ. ನಾನು ರಾಜ್ಯಪಾಲ ಅಲ್ಲದಿದ್ದರೂ ಈ ಬಗ್ಗೆ ಮಾತನಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯ ಕಾನೂನು ಖಾತರಿ ನೀಡಿದರೆ, ರೈತರು ತಮ್ಮ ಪಟ್ಟು ಸಡಿಲಿಸಲಿದ್ದಾರೆ. ರೈತರ ವಿರುದ್ಧ ಬಲವನ್ನು ಪ್ರಯೋಗಿಸಬೇಡಿ. ಅವರನ್ನು ದೆಹಲಿಯಿಂದ ಖಾಲಿ ಕೈಯಿಂದ ಮನೆಗೆ ಕಳುಹಿಸಬಾರದು ಎಂದು ಪ್ರಧಾನಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಸತ್ಯ ಪಾಲ್‌ ಹೇಳಿದ್ದರು.


Spread the love

About Ad9 Haberleri

Check Also

ದಿನಕ್ಕೊಂದರಂತೆ ವಂಚನೆಯ ಮೆಸೇಜ್‌ಗಳು

Spread the loveWhatsApp Tips and Tricks: ದಿನಕ್ಕೊಂದರಂತೆ ವಂಚನೆಯ ಮೆಸೇಜ್‌ಗಳು ವಾಟ್ಸ್‌ಆಯಪ್​ನಲ್ಲಿ ಹರಿದಾಡುತ್ತಿರುತ್ತದೆ. ಅನ್‌ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್, …