ಜಮಖಂಡಿ: ರಸ್ತೆ ಸುಧಾರಣೆಗೆಂದು ಇದ್ದ 7 ಕೋಟಿ ರೂಗಳಲ್ಲಿ ಭಾರಿ ಪ್ರವಾಹ ಹಾಗೂ ಮಳೆಯಿಂದಾಗಿ ಹಾನಿಗೊಳಗಾದ 82 ಗ್ರಾಮಿಣ ರಸ್ತೆ ಸುಧಾರರಣೆಗೆ, ಸೇತುವೆ ಪುನರ್ ನಿರ್ಮಾಣಕ್ಕೆ 2 ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು ಮುಂದು ವರೆಸಲಾಗಿದೆ, ಅನುಧಾನದ ಲಭ್ಯತೆ ಹಾಗೂ ಕಾಮಗಾರಿಗಳ ಪ್ರಗತಿ ಅನುಸಾರವಾಗಿ ಉಳಿದ ಅನುದಾನ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಅವರು ರಸ್ತೆ ಸುಧಾರಣೆಗೆಂದು ಇದ್ದ7 ಕೋಟಿ ಅನುದಾನದ ಬಗ್ಗೆ ಸದನದ ಗಮನ ಸೆಳೆದಿದ್ದರು.
ಗುರುದೇವ ರಾನಡೆ ಭವನ ಪುರ್ಣಗೊಳಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ 50 ಲಕ್ಷ ರೂ ಅನುಮೋದನೆ ನೀಡಲಾಗಿದೆ ಈ ನಿಟ್ಟಿನಲ್ಲಿ 24 ಲಕ್ಷ ರೂಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆಗೊಳಿಸಲಾಗಿದೆ, ಉಳಿದ ಅನುದಾನವನ್ನು ಕಾಮಗಾರಿ ಅನುಸಾರವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಯುವ ಸಬಲೀಕರಣ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಈ ಕುರಿತು ಸದನದಲ್ಲಿ ಗುರುದೇವ ರಾನಡೆ ಸಾಂಸ್ಕೃತಿಕ ಭವನ ಪೂರ್ಣಗೊಳಿಸುದರ ಕುರಿತು ಗಮನ ಸೆಳೆದಿದ್ದರು.
ಕಂಕನವಾಡಿ ಗುಹೇಶ್ವರ ದೇವಸ್ತಾನಕ್ಕೆ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 11 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ, ಅನುದಾನ ಲಭ್ಯತೆ ಹಾಗೂ ತಾಂತ್ರಿಕ ಶಕ್ಯತೆ ಅನುಸಾರವಾಗಿ ಪರಿಶಿಲಿಸಿ ಕಾಮಗಾರಿ ಪ್ರಾರಂಭೀಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
2019-20ನೇ ಸಾಲಿಗೆ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಗುವುದು, ದ್ವಿತೀಯ, ಅಂತಿಮ ಹಂತದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಬಗ್ಗೆ ಪರಿಶಿಲನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ತಿಳಿಸಿದ್ದಾರೆ.
ಆಲಮಟ್ಟಿ 524 ಮೀ ಹಿನ್ನಿರಲ್ಲಿ ಮುಳುಗಡೆಯಾಗುವ ಚಿಕ್ಕಪಡಸಲಗಿ ಬ್ಯಾರೇಜ್ನ್ನು ನಿರ್ಮಾಣ ಮಾಡುವಲ್ಲಿ 99.50 ಕೋಟಿಯ ಅಂದಾಜು ಮೊತ್ತದ ಪ್ರಸ್ತಾವನೆ ತಯಾರಿಸಲಾಗಿದೆ, 530.70 ಮೀ. ಗೆ ವಿನ್ಯಾಸಗೊಳಿಸಲಾಗಿದೆ, ನಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಮಂಡಿಸಲು ಯೋಜಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಸದನದಲ್ಲಿ ಶಾಸಕ ಆನಂದ ನ್ಯಾಮಗೌಡ ಚುಕ್ಕೆಗುರುತಿಲ್ಲದ ಪ್ರಶ್ನೆಗಳಮೂಲಕ ಸದನದಲ್ಲಿ ಗಮನ ಸೆಳೆದರು
Ad9 News Latest News In Kannada
