Breaking News

ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ 253 ‘ಎಂ ಎಲ್ ಹೆಚ್ ಪಿ ಹುದ್ದೆ’ ನೇಮಕಕ್ಕೆ ಅರ್ಜಿ ಆಹ್ವಾನ

Spread the love

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ( ಎಂ ಎಲ್ ಹೆಚ್ ಪಿ ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಡಿಯ ಬೀದರ್, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಿಗೆ ಆನ್ ಲೈನ್ ಮೂಲಕ ಎನ್ ಹೆಚ್ ಎಂ ಯೋಜನೆಯಡಿಯಲ್ಲಿ ಹೆಲ್ತ್ ಆಂಡ್ ವೆಲ್ ನೆಸ್ ಸೆಂಟರ್ ಗಳಿಗೆ ಗುತ್ತಿಗೆ ಆಧಾರದ ಮೇಲೆ ಎಂ ಎಲ್ ಹೆಚ್ ಪಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು – 253

ವಿದ್ಯಾರ್ಹತೆ – ಮಾನ್ಯತೆ ಪಡೆದ ವಿವಿಯಿಂದ ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ ಎನ್ ಸಿ/ಐ ಎನ್ ಸಿ ಯಿಂದ ನೊಂದಣಿ ಹೊಂದಿರಬೇಕು.

ಮಾಸಿಕ ಸಂಭಾವನೆ – ರೂ.24,200(ಪ್ರತಿ ತಿಂಗಳಿಗೆ) ಜೊತೆಗೆ ಹೆಚ್ಚುವರಿಯಾಗಿ ಪರ್ಫಾರ್ಮೆನ್ಸ್ ಬೇಸ್ ಇನ್ಸೆಂಟಿವ್ ರೂ.8,000 ವೆರೆಗೆ ನೀಡಲಾಗುತ್ತದೆ.

ವಯೋಮಿತಿ – ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಎಸ್ ಸಿ, ಎಸ್ ಟಿ ಹಾಗೂ ಪ್ರವರ್ಗ 1, ಮಾಜಿ ಸೈನಿಕರಿಗೆ 40 ವರ್ಷ. 2ಎ, 2ಬಿ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ

ಅರ್ಜಿ ಸಲ್ಲಿಸುವ ವಿಧಾನ – ಆನ್ ಲೈನ್ ಮೂಲಕವೇ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು http://techkshetra.info/ ಲಿಂಕ್ ಕ್ಲಿಕ್ ಮಾಡುವ ಮೂಲಕ ಸಲ್ಲಿಸಬೇಕು.

ಆಯ್ಕೆಯ ವಿಧಾನ – ಆನ್ ಲೈನ್ ಮುಖಾಂತರವೇ ಲಿಖಿತ ಪರೀಕ್ಷೆಯನ್ನು ದಿನಾಂಕ 15-02-2020ರಂದು ನಡೆಸಲಾಗಿತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳ ಮೂಲಕ ದಾಖಲೆ ಪರಿಶೀಲನೆಗೆ ದಿನಾಂಕ 17-02-2020 ಮತ್ತು 18-02-2020ರಂದು ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭ ಮತ್ತು ಮುಕ್ತಾಯದ ಅವಧಿ – ದಿನಾಂಕ 18-01-2020ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-02-2020 ಆಗಿರುತ್ತದೆ.

ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ https://www.karnataka.gov.in/hfw/Pages/home.aspx ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಸೇರಿದಂತೆ ನೋಟಿಫಿಕೇಷನ್ ಗಾಗಿ http://techkshetra.info/ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.


Spread the love

About Ad9 News

Check Also

ಕೊರೊನಾ : ಜನರ ರಕ್ಷಣೆ ಮಾಡುತ್ತಿರುವ ಪೋಲಿಸರಿಗೆ ರಕ್ಷಣೆ ಕೊಡದ ಸರಕಾರ

Spread the love ವಿಶ್ವದಲ್ಲೆಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ರಾತ್ರಿ ಹಗಲು ಬಿಸಿಲು ಅನ್ನದೆ ತಮ್ಮ …