Breaking News
Home / ರಾಜ್ಯ / ಜೂ. 7 ಕ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷಿಸಿದ್ದವರಿಗೆ ಬಿಗ್ ಶಾಕ್ ಜೂ. 30 ರವರೆಗೆ ಮನೆವಾಸ ಮುಂದುವರಿಕೆ ಸಾಧ್ಯತೆ?

ಜೂ. 7 ಕ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷಿಸಿದ್ದವರಿಗೆ ಬಿಗ್ ಶಾಕ್ ಜೂ. 30 ರವರೆಗೆ ಮನೆವಾಸ ಮುಂದುವರಿಕೆ ಸಾಧ್ಯತೆ?

Spread the love

ಬೆಂಗಳೂರು: ಜೂನ್ 30 ರವರೆಗೆ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕೆಂದು ಕೇಂದ್ರ ಗೃಹ ಇಲಾಖೆಯಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ.

ಕೇಂದ್ರ ಗೃಹ ಇಲಾಖೆ ಪತ್ರ ಬರೆದ ಹಿನ್ನೆಲೆಯಲ್ಲಿ ಜೂನ್ 7 ರ ನಂತರ ಲಾಕ್ಡೌನ್ ವಿಸ್ತರಣೆ ಮಾಡುವ ಕುರಿತು ಚರ್ಚೆ ನಡೆಸಲಾಗುವುದು. ಈಗಾಗಲೇ ಲಾಕ್ಡೌನ್ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಜೂನ್ 5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಸ್ತುವಾರಿ ಸಚಿವರು, ಅಧಿಕಾರಿಗಳ ಸಭೆ ನಡೆಸಲಿದ್ದು, ಸಭೆಯಲ್ಲಿ ಲಾಕ್ಡೌನ್ ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ರಾಜ್ಯದಲ್ಲಿ ಲಾಕ್ ಡೌನ್ ನಂತರದಲ್ಲಿ ಸೋಂಕು ಇಳಿಮುಖವಾಗುತ್ತಿದೆ. ದೆಹಲಿ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಸುದೀರ್ಘ ಲಾಕ್ ಡೌನ್ ನಿಂದ ಸೋಂಕು ಇಳಿಮುಖವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲು ಚಿಂತನೆ ನಡೆದಿದೆ. ರಾಜ್ಯದಲ್ಲಿ ಕೂಡ ಕೊರೋನಾಗೆ ಕಡಿವಾಣ ಹಾಕಲು ಇನ್ನಷ್ಟು ದಿನ ಬಿಗಿಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

About Ad9 Haberleri

Check Also

ರಾಜ್ಯದ ‘ಪೊಲೀಸ್ ಪೇದೆ’ಗಳಿಗೆ ಗುಡ್ ನ್ಯೂಸ್: ‘ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆ’ಗೆ ಗ್ರೀನ್ ಸಿಗ್ನಲ್

Spread the love   ಬೆಂಗಳೂರು :ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ಗಳ ಪತಿ-ಪತಿ …