Breaking News
Home / ಬೆಳಗಾವಿ / ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ

ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ

Spread the love

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ

ಮಹತ್ತರವಾದ ಪುಣ್ಯದ ಬೆಲೆಯನ್ನು ತೆತ್ತು ನೀನು ಈ ಮಾನವ ಶರೀರವೆಂಬ ನೌಕೆಯನ್ನು ಕೊಂಡುಕೊಂಡಿದ್ದಿಯೇ, ದುಖಃ ಸಾಗರವನ್ನು ದಾಟುವದಕಾಗಿ ಆ ಶರೀರ ಎಂಬ ನೌಕೆ ಮುರಿದು ಹೋಗುವ ಮುನ್ನ ಓ ಸಾಯಿನಾಥನೇ ನಿನ್ನ ಭಕ್ತಿ ಭಂಡಾರದಲ್ಲಿ ಮುಕ್ತಿಯನ್ನು ನೀಡು ಎಂದು ಖಜ್ಜಿಡೋಣ ಯ ಶ್ರೀ ಶಂಕ್ರಾಚಾರ್ಯ ಅಧೂತ ಆಶ್ರಮದ ಶ್ರೀ ಕೃಷ್ಣಾನಂದ ಶರಣರು ಹೇಳಿದರು.
ತಾಲೂಕಿನ ಪಾರಿಜಾತ ಕುಲಗೋಡ ಗ್ರಾಮದಲ್ಲಿ ಶ್ರೀ ಸಾಯಿ ಜಾತ್ರಾ ಮಹೋತ್ಸವ ಹಾಗೂ 5ನೇ ವಾರ್ಷಿಕೋತ್ಸವ ಅಂಗವಾಗಿ ಪೊಲೀಸ್ ಠಾಣೆಯ ಆವರಣದಲ್ಲಿ ಆರ್.ಎಮ್ ಯಡಹಳ್ಳಿ ಪೌಂಡೆಶನ ಆಶ್ರಯದಲ್ಲಿ ಏರ್ಪಡಿಸಿದ
“ಸಾಯಿ ಉತ್ಸವ” ಸಮಾರಂಭದಲ್ಲಿ ಮಾತನಾಡಿ, ಹನುಮಾನ ದೇವರು ಪಾದ ಇಟ್ಟ ಈ ಪುಣ್ಯದ ಭೂಮಿ ಕುಲಗೋಡ ಗ್ರಾಮವು ಬಹಳ ಪವಿತ್ರವಾದ ಸ್ಥಳವಾಗಿದರಿಂದ ಈ ಗ್ರಾಮದಲ್ಲಿ ಸಾಯಿ ಉತ್ಸವ ಹೇಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ, ಮನುಷನಿಗೆ ಅನೂಕಲತೆ ಹೆಚ್ಚಾದ್ದಾಗ ಸೋಮಾರಿಯಾಗುತ್ತಾನೆ, ಅವಕಾಶಗಳ ಹೆಚ್ಚಿದಂತೆ ಅವಿದ್ಯೆಯನಾಗುತ್ತಾನೆ, ಆದಾಯ ಹೆಚ್ಚಿದಂತೆ ಅಹಂಕಾರಿಯಾಗುತ್ತಾನೆ, ಅಧಿಕಾರಿ ಹೆಚ್ಚಿದಂತೆ ಅಲ್ಪನಾಗೂತ್ತಾ ಹೋಗುತ್ತಾನೆ ಇವೆಲ್ಲವನ್ನು ಮೀರಿ ದೇವರ ಭಕ್ತಿ ಆರಾಧನೆ, ದಾನ-ಧರ್ಮ ಮಾಡಿ ಮನುಷ್ಯ ಜೀವನವನ್ನು ಭಕ್ತಿ ಭಂಡಾರದಲ್ಲಿ ತೇಲುವಂತ ರೀತಿಯಲ್ಲಿ ಮನುಷ್ಯ ಮಾಡಿದ್ದರೆ ಆ ಮನುಷ್ಯನಿಗೆ ದೇವನು ಯಾವುದೇ ಸಮಯದಲ್ಲಿ ಒಲೆಯುತ್ತಾನೆ, ಅದೇ ರೀತಿ ಕುಲಗೋಡ ಗ್ರಾಮದ ಸಾಯಿ ಸಮೀತಿ ಮತ್ತು ಆರ್.ಎಮ್ ಯಡಹಳ್ಳಿ ಪೌಂಡೆಶನ ಮಾಡುತ್ತಿರುವ ಕಾರ್ಯಗಳಿಂದ ದೇವ ಲೋಕವೇ ಭೂ ಸ್ಪರ್ಶ ಮಾಡಿ ಶ್ರೀ ಸಾಯಿ ಬಾಬಾ ಉತ್ಸವಕ್ಕೆ ಮೆರುಗು ತಂದಿದ್ದೆ ಎಂದ ಅವರು ಪವಾಡ ಪುರುಷರ ದರ್ಶನದಿಂದ ಮನುಷ್ಯ ಸಂಸ್ಕಾರವಂತರಾಗುವದರ ಜೋತೆಗೆ ಶ್ರದ್ಧೆಯನ್ನು ಹೃದಯದಲ್ಲಿ ಬಂದರೆ ಜೀವನ ಪಾವನವಾಗುವದು ಎಂದರು.

ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸಾಯಿ ಭಕ್ತ ರಾಜು ಯಡಹಳ್ಳಿ ಅವರು ತಮ್ಮ ಖರ್ಚಿನಿಂದ ಪ್ರತಿವರ್ಷ ಕುಲಗೋಡ ಗ್ರಾಮದ ಸುಮಾರು ನಾಲ್ಕೈದು ಬಸ್ಸುಗಳಲ್ಲಿ ಕರೆದು ಕೊಂಡು ಬಡ ಜನರನ್ನು ಸಾಯಿ ದರ್ಶನ ಮಾಡಿಸುತ್ತಿರುವುದು ಶ್ಲಾಘನಿಯವಾದದ್ದರು, ನಮ್ಮ ಕೈ ಬೆರಳಗಳು ಒಂದೇ ತರನಾಗಿ ಇಲ್ಲ ಕೈಗಳು ಮಾಡಬೇಕಾದ ಕೆಲಸ ಕಾರ್ಯಗಳಿಗೆ ವಿಗ್ನವಾಗಿರುವುದರಿಂದ ಮನುಷ್ಯ ಜೀವನವೂ ಕೂಡಾ ಕೈ ಬೆರಳಗಳಂತೆ ಇದೆ. ಶರಣರು ಮಾಡಿರುವ ಕಾರ್ಯಗಳಿಗೆ ಇಂದು ಅವರನ್ನು ನೆನಪಿಕೊಳ್ಳುತ್ತೆವೆ ಆದರಿಂದ ದಾನ-ಧರ್ಮದಂತಹ ಕಾಯಕ ಕೆಲಸಗಳ್ನು ಮಾಡಿ ತಮ್ಮ ಹೆಸರನ್ನು ಉಳಿಸುವಂತೆ ಮಾಡಿಕೊಳ್ಳಬೇಕು, ಶರಣರ ಪ್ರವಚ, ದೇವರ ಆರಾಧನೆ ಮಾಡುವ ಮೂಲಕ ದೇವರು ಒಲಿಸುವಂತ ಕೆಲಸ ಮಾಡಬೇಕೆಂದು ಹೇಳಿದರು.
ಪಿಎಸ್‍ಐ ಎಚ್.ಕೆ.ನೇರಳೆ ಮಾತನಾಡಿ, ಮನುಷ್ಯ ಜೀವಂತವಾಗಿರುವಾಗ ಇರುವ ಜನ ಸತ್ತ ಮೇಲೆ ಸೇರುವ ಜನ ಆ ವ್ಯಕ್ತಿಯ ಬಗ್ಗೆ ಮಾತನಾಡು ಮಾತುಗಳೇ ಆ ವ್ಯಕ್ತಿಯ ಸಾಧನೆ ಎಂತಹದು ಎಂದು ತಿಳಿಯುತ್ತದೆ. ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಮಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲರು ಹಾಗೆ ವಿದ್ಯಾರ್ಥಿಗಳು ತಮ್ಮ ಗುರಿ ಇಟ್ಟುಕೊಂಡು ಮುನ್ನುಗಿದ್ದರೆ ಅವರ ಬಾಳು ಉಜ್ವಲವಾಗುವುದು ಎಂದು ಹೇಳಿದರು.

ಭೀಮಶಿ ಪೂಜೇರಿ, ಶಿವಲಿಂಗ ಗೋದ್ದಿಹೊಳಗಿ, ಸುನೀಲ ಒಂಟಗೋಡಿ, ಕಾರ್ಯಕ್ರಮದ ರೂವಾರಿ ಹಾಗೂ ಅಧ್ಯಕ್ಷ ರಾಜು ಯಡಹಳ್ಳಿ, ತಮ್ಮಣ್ಣ ದೇವರ, ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ಮಲೇಶ, ಲಕ್ಷ್ಮಣ ಬಡಕಲ್ಲ, ಜಯಾನಂದ ಡಿ.ಪಾಟೀಲ, ಸುಭಾಸ ಒಂಟಗೂಡಿ, ಜಗದೀಶ ನಾಯಕ, ರಾಜು ಹೊಸಮನಿ, ಶಂಕರ ಹಾದಿಮನಿ,


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …