Breaking News
Home / ಬೆಳಗಾವಿ / ಮೂಡಲಗಿಯ ಪ್ರಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೋನ ಅಡ್ಡಗಾವಲು…!

ಮೂಡಲಗಿಯ ಪ್ರಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೋನ ಅಡ್ಡಗಾವಲು…!

Spread the love

ಮೂಡಲಗಿ ತಾಲೂಕಿನ ಸಾರ್ವಜನಿಕರಿಗೆ ಬೇಸರದ ಸಂಗತಿ

ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೋನ ಅಡ್ಡಗಾವಲು…!

ಮೂಡಲಗಿ ನಗರದಲ್ಲಿ ಶನಿವಾರದಂದು ನಡೆಯಬೇಕಿದ್ದ ಪ್ರಪ್ರಥಮ ಬಾರಿಗೆ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದುಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಾ ಅಧ್ಯಕ್ಷ ಶಿದ್ರಾಮ ದ್ಯಾಗಾನಟ್ಟಿ ಹೇಳಿದರು.

ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೀನಾ ಮೂಲದಿಂದಲೇ ವಿಶ್ವದ ಎಲ್ಲ ದೇಶಗಳಿಗೆ ಹಬ್ಬಿದ ಕೊರೋನಾ ವೈರಸ್ ವಿಶ್ವದೆಲ್ಲಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೋನ ನಮ್ಮ ದೇಶದಲ್ಲಿ ಮೊದಲ ಬಲಿಯನ್ನು ಕರ್ನಾಟಕದ ಕಲಬುರ್ಗಿಯಲ್ಲಿ ಬಲಿ ಪಡೆದುಕೊಂಡ ನಂತರ ರಾಜ್ಯ ಸರಕಾರ ಒಂದು ವಾರ ಕಾಲ ಅಘೋಷಿತ ಬಂದ್ ಜಾರಿ ಮಾಡಿದೆ. ಆದ್ದರಿಂದ ಜಾತ್ರೆ, ಸಿನಿಮಾ, ಮಾಲ್, ಕ್ಲಬ್, ಸಮಾರಂಭಗಳು, ಮದುವೆಗಳು ನಿಷೇಧಿಸಿಸಲಾಗಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದರು.

ರಾಜ್ಯ ಸರಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರೂ ಸಹ ತಮ್ಮದೇ ಆದ ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ. ಆದರಿಂದ ನಮ್ಮ ನಗರದಲ್ಲಿ ಅಂತಹ ಘೋರವಾದ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ನಗದಲ್ಲಿ ನಡೆಯಬೇಕಾಗ ಪ್ರಪ್ರಥಮ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೂಂದುಡಲಾಗಿದೆ ಆದರಿಂದ ಎಲ್ಲ ಕನ್ನಡಿಭಿಮಾನಿಗಳು ಸಹಕರಿಸಬೇಕೆಂದು ಹೇಳಿದರು.

ಬಾಕ್ಸ್ ನ್ಯೂಸ್ : ಸಾಹಿತ್ಯ ಸಮ್ಮೇಳನಕ್ಕೆ ತಯಾರಿ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸಿದ್ದ ಮಾಡಿ ನಗದಲ್ಲಿ ಪ್ರಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಕೆಲವು ದಿವಸಗಳ ಹಿಂದೆ ಸಭೆ ಮಾಡಿ ನುಡಿ ಜಾತ್ರೆಗೆ ಸಕಲ ಸಿದ್ದತೆ ಮಾಡಿಕೊಳ್ಳಬೇಕೆಂದು ನುಡಿ ಜಾತ್ರೆಯ ದಿನಾಂಕವನ್ನು ನೇಮಕ ಮಾಡಲಾಗಿತ್ತು ಅದೇ ರೀತಿಯಲ್ಲಿ ಮಾರ್ಚ 14 2020 ರಂದು ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಎಲ್ಲ ತರಹದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು.

ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಸ್ವಚ್ಛಗೊಳಿಸಿ ವೇದಿಕೆ ಸಿದ್ದ ಮಾಡಿ, ಶನಿವಾರ ಮುಂಜಾನೆ 7:30ಕ್ಕೆ ಧ್ವಜಾರೋಹನ ಕಾರ್ಯಕ್ರಮದ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಚಾಲನೆ ನೀಡಬೇಕೆಂದು ಶುಕ್ರವಾರ ಸಂಜೆ ಎಲ್ಲ ಕಾರ್ಯಕ್ರಮದ ಹಾಗೂ ಸಾರ್ವಜನಿಕರಿಗೆ ಸಹಿ ಭೋಜನದ ವ್ಯೆವಸ್ಥೆಯ ಸಿದ್ದತೆ ಮಾಡಿಕೊಂಡಿದ್ದರು. ಆದರೆ ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನಲೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಮೂಂದೂಡಲಾಗಿದೆ. ಆದರೆ ಎಲ್ಲ ತರಹದ ಕಾರ್ಯಕ್ರಮಗಳನ್ನು ಸಿದ್ದತೆ ಮಾಡಿಕೊಂಡ ಪರಿಷತ್‍ಗೆ ಹಾಗೂ ನಗದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲ್ಲಿರುವ ಸಾಹಿತ್ಯ ಸಮ್ಮೇಳನ ನೋಡಬೇಕೆಂದು ಕಾತುರದಲ್ಲಿ ಇರುವಂತ ಸಾರ್ವಜನಿಕರಿಗೆ ಸ್ವಲ್ಪ ಬೇಸರದ ಸಂಗತಿಯಾಗಿದೆ.


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …