ಮೂಡಲಗಿ:ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಮಾ. ೩೧ ರಿಂದ ಪ್ರಾರಂಭವಾಗತ್ತವೆ. ಮೂಡಲಗಿ ಶೈಕ್ಷಣಿಕ ವಲಯದಿಂದ ಕನ್ನಡ ಮಾದ್ಯಮದಲ್ಲಿ ಒಟ್ಟು ೬೩೯೫ ವಿದ್ಯಾರ್ಥಿಗಳು, ಆಂಗ್ಲ ಮಾದ್ಯಮದದಲ್ಲಿ ೭೦೪ ಹಾಗೂ ಉರ್ದು ಮಾದ್ಯಮದಲ್ಲಿ ೬೨ ಒಟ್ಟು ೭೧೬೧ ಮಕ್ಕಳು ವಲಯ ವ್ಯಾಪ್ತಿಯ ೨೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಅವರು ಪತ್ರಿಕಾಘೋಷ್ಠಿಯಲ್ಲಿ ತಿಳಿದರು.
ಅವರು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ಎಸ್.ಎಸ್.ಸಿ ವಿದ್ಯಾರ್ಥಿಗಳ ಪೂರ್ವಬಾವಿ ಪತ್ರಿಕಾಘೋಷ್ಠಿಯಲ್ಲಿ ಶೈಕ್ಷಣಿಕ ವಲಯದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಮೂಡಲಗಿ ಶೈಕ್ಷಣಿಕ ವಲಯವು ಶಿಕ್ಷಣದ ಪ್ರತಿ ಕಾರ್ಯಚಟುವಟಿಕೆಗಳಲ್ಲಿ ಯಶಸ್ವಿಯಾಗಲು ಮುಖ್ಯವಾಗಿ ಪ್ರತಿದಿನ ಶಾಲಾವಧಿ ಪೂರ್ವದಲ್ಲಿ ವಿಶೇಷ ತರಗತಿಗಳ ಆಯೋಜನೆ, ಗುಂಪು ಅಧ್ಯಯನ, ವಿಯಾರ್ಥಿಗಳ ಮನೆ ಭೆಟಿ, ವಿದ್ಯಾರ್ಥಿಗಳಿಗಾಇ ಸಾಮಾಜಿಕ ಜಾಲತಾಣಗಳ ಬಳಕೆ, ಪ್ರತಿ ಶನಿವಾರ ಶಿಕ್ಷಕರ ನಡೆ ಮಕ್ಕಳ ಮನೆ ಕಡೆ, ಗೈರು ಮಕ್ಕಳ ಮನೆ ಬೇಟಿ, ಮಕ್ಕಳಿಗೆ ಪ್ರೇರಣಾ ಕಾರ್ಯಾಗಾರ, ಸರಣಿ ಪರೀಕ್ಷೆ ಹಾಗೂ ವಿಶ್ಲೇಷಣೆ ಮಾಡುವದರ ಜೊತೆಗೆ ಸಂಪನ್ಮೂಲ ಶಿಕ್ಷಕರಿಂದ ಮಾಹಿತಿ ಒದಗಿಸುವಿಕೆ ಕಾರ್ಯ ಮಾಡಿದೆ.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಸಂಪನ್ಮೂಲ ಶಿಕ್ಷಕರ ಬಳಕೆ, ೩೯ ತಜ್ಞ ಶಿಕ್ಷಕರಿಂದ ಮಕ್ಕಳಿಗೆ ವಿಷಯ ಮನವರಿಕೆ, ತಾಲೂಕಿನ ಎಲ್ಲ ಪ್ರೌಢ ಶಾಲೆಗಳಿಗೆ ೨ ಹಂತದ ತಂಡ ಭೇಟಿ, ಪ್ರಗತಿ ಪರಿಶೀಲನೆ, ರೇಡಿಯೋ ಪಾಠ ಪುನರಮಣನ, ೧೦ ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿಯೇ ವಸತಿ ಸಹಿತ ವಿಷಯಗಳ ಅಧ್ಯಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಯಂದಿರ ಸಭೆ, ದೀರ್ಘ ಉತ್ತರ, ವಿಷಯಾಧಾರಿತ ಕ್ವಿಜ್, ಚಿತ್ರ ಬರೆ-ಸೂತ್ರ ರಚಿಸಿ ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳ ಮೂಲಕ ವಲಯದ ೮೪ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ ಸಂವಹನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ಪರೀಕ್ಷಾ ಭಯ ಹಾಗೂ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶೈಕ್ಷಣಿಕ ವರ್ಷದ ಆರಂಭದಿoದ ವಿದ್ಯಾರ್ಥಿ ಸ್ನೇಹಿಯಾಗಿ ಪಠ್ಯಪುಸ್ತಕ ಹಾಗೂ ಹೆಚ್ಚುವರಿ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾಥಿಗಳನ್ನು ಪರೀಕ್ಷೆಗೆ ತಯಾರಿ ಮಾಡಲಾಗಿದೆ.
ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ನಿಟ್ಟಿನಲ್ಲಿ ೨೬ ಪರೀಕ್ಷಾ ಮುಖ್ಯ ಅಧಿಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಉಪಮುಖ್ಯ ಅಧಿಕ್ಷಕರು, ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಧಿಕಾರಿ ಹಾಗೂ ಪರೀಕ್ಷಾ ಮಂಡಳಿಯ ನಿಯಮಾನುಸಾರ ೪ ಸಿಸಿ ಕ್ಯಾಮೆರಾಗಳ ಅಳವಡಿಕೆ, ಆಸನದ ವ್ಯವಸ್ಥೆ, ಪಂಚಾಯತಿಗಳಿoದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿವಿಧ ಇಲಾಖೆಯ ಮುಖ್ಯಸ್ಥರಿಗೆ ಪತ್ರ ನೀಡುವಿಕೆ, ವೈಧ್ಯಕೀಯ ಸೇವೆ, ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ ಕಲಂ ೧೪೪ ಸೆಕ್ಷನ್ ಜಾರಿ ಇರುವದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋ ಬಸ್ತನ ವ್ಯವಸ್ಥೆಯನ್ನು ಮಾಡಿಕೊಂಡಿರುವದಾಗಿ ಸುದ್ದಿ ಘೋಷ್ಠಿಯಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ತಾಲೂಕಾ ನೋಡಲ್ ಅಧಿಕಾರಿ ಸತೀಶ ಬಿ.ಎಸ್, ಶಿಕ್ಷಣ ಸಂಯೋಜಕರಾದ ಟಿ. ಕರಿಬಸವರಾಜು, ಆರ್.ವಿ ಯರಗಟ್ಟಿ ಹಾಜರಿದ್ದರು.