ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ೨೬ ಕೇಂದ್ರಗಳಲ್ಲಿ ಪ್ರಥಮ ಭಾಷಾ ಪರೀಕ್ಷೆಗೆ ಒಟ್ಟು ೭೧೭೫ ವಿದ್ಯಾರ್ಥಿಗಳ ಪೈಕಿ ೭೧೪೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೩೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ವಲಯ ವ್ಯಾಪ್ತಿಯಲ್ಲಿ ಪ್ರಥಮ ಪರೀಕ್ಷೆಗಳು ಸುಗಮ ರೀತಿಯಲ್ಲಿ ಜರುಗಿವೆ ಎಂದು ಬಿಇಒ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.
ಶುಕ್ರವಾರದಂದು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿಗಳಾದ ಅನಿಲಕುಮಾರ ಗಂಗಾಧರ, ಸಹಾಯಕ ಯೋಜನಾಧಿಕಾರಿ ಸದಾಶಿವ ಹಚಡದ, ವಿಷಯ ಪರಿವೀಕ್ಷಕರಾದ ಸಂಗಮೇಶ ಹೂಗಾರ ಅವರನ್ನಳಗೊಂಡ ತಂಡವು ವಲಯದ ಮಲ್ಲಾಪೂರ ಪಿಜಿ, ಅರಬಾವಿಮಠ, ಕಲ್ಲೋಳ್ಳಿ, ನಾಗನೂರ, ಮೂಡಲಗಿ ಪಟ್ಟಣದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಮೇಲುಸ್ತುವಾರಿವಹಿಸಿದ್ದರು. ಮೂಡಲಗಿ ವಲಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ಹಾಜರಾತಿ ಕಂಡುಬoದಿರುತ್ತದೆ. ಪರೀಕ್ಷೆಗಳು ಪಾವಿತ್ರö್ಯತೆಯಿಂದ ಜರುಗಿವೆ. ಪರೀಕ್ಷಾ ಮಂಡಳಿಯ ನಿಯಮಾನುಸಾರ ಪರೀಕ್ಷೆ ಪ್ರಾರಂಭಗೊAಡಿರುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಇಒ ಅಜಿತ ಮನ್ನಿಕೇರಿ, ಚಿಕ್ಕೋಡಿ ಡೈಟ್ ಉಪನ್ಯಾಸಕರು ಹಾಗೂ ಪರೀಕ್ಷಾ ತಾಲೂಕಾ ವೀಕ್ಷಣಾಧಿಕಾರಿ ಸುಭಾಸ ಚೌಗಲಾ ಅವರುಗಳು ಕೌಜಲಗಿ, ಕುಲಗೋಡ, ಯಾದವಾಡ, ಅವರಾದಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳು ಜರುಗಲು ಮೇಲ್ವಿಚಾರಣೆ ನಡೆಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವೈಧ್ಯಕೀಯ ಸೌಲಭ್ಯ, ಪರೀಕ್ಷಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋ ಬಸ್ತ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ಪರಿಕ್ಷೆಗಳು ಯಶಸ್ವಿಯಾಗಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.