ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ ಬೆಳಗಾವಿ ಜಿಲ್ಲೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆ ಯಾದ ಮಲ್ಲಿಕಾರ್ಜುನ ಕಬ್ಬೂರ್ ಅವರಿಗೆ ಸತ್ಕರಿಸಿ ಮಾತನಾಡಿದ ಸಾಯಿ ಬ್ಯಾಂಕ್ ಅಧ್ಯಕ್ಷ ಮರಿಯಪ್ಪ ಮಾರಿಯೆಪ್ಪಗೋಳ ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ, ಬೆಳಗಾವಿ ಜಿಲ್ಲೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಮಲ್ಲಿಕಾರ್ಜುನ ಭೀಮಪ್ಪಾ ಕಬ್ಬೂರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ನಮ್ಮ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮದ ಮಲ್ಲಿಕಾರ್ಜುನ ಭೀಮಪ್ಪಾ ಕಬ್ಬೂರ್ ಇವರನ್ನು ಅಧಿಕಾರೇತರ ಸದ್ಯಸರಾಗಿ ಆಯ್ಕೆ ಮಾಡಿ ಸರ್ಕಾರ ಆದೇಶಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಅವರ ಪ್ರಯತ್ನದಿಂದ ಒಕ್ಕಲುತನ ಹುಟ್ಟುವಳಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂರ್ಬದಲ್ಲಿ ಯಮನಪ್ಪಾ ಮೇತ್ರಿ, ಹಣಮಂತ ಹವಳೆವಗೋಳ, ಸುರೇಶ ಬೈಬಲ್, ರಾಮು ಝಂಡೆಕುರಬರ, ಚಿನ್ನಪ್ಪಾ ಝಂಡೆಕುರಬರ, ಅನಿಲ್ ಖಾನಟ್ಟಿ, ಮಹಾದೇವ ಸೂಣದೋಳಿ, ಶ್ರೀಧರ ಹವಳೆವಗೋಳ, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು,
