ಮೂಡಲಗಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಎಜುಕೇಷನ್ ಹಾಗೂ ಸೋಶಿಯಲ್ ಡೆವಲೆಪಮೆಂಟ ಸೊಸೈಟಿ ವತಿಯಿಂದ ಮಾ.24ರಂದು ಬೆ.10 ರಿಂದ ಸಾಯಂಕಾಲ 5ಗಂಟೆಯ ವರೆಗೆ ಪಟ್ಟಣದ ಮದರಸಾ ದಾರುಲ ಉಲೂಮ ಆವರಣದಲ್ಲಿ ಉಚಿತ ಬಿ.ಪಿ ಶುಗರ್ ಹಾಗೂ ಕಣ್ಣು ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಅರಭಾಂವಿ ಶಾಸಕ ಹಾಗೂ ಕೆ ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ವಿ. ಮುನ್ಯಾಳ, ಚಿಕ್ಕೋಡಿಯ ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎಸ್ ಎಸ್ ಗಡೇದ, ಜಿಲ್ಲಾ ಕುಷ್ಟ ರೋಗ ನಿವಾರಣಾಧಿಕಾರಿ ಡಾ ಚಾಂದನಿ ಡೇವಡಿ, ಸರ್ವೇಕ್ಷಣಾಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಎಮ್ ಎಸ್ ಕೊಪ್ಪದ, ಆರೋಗ್ಯ ಅಧಿಕಾರಿ ಡಾ. ಭಾರತಿ ಕೋಣಿ ಅತಿಥಿ ವೈಧ್ಯರಾಗಿ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಡಿ ಜಿ ಮಹಾತ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಡಿಪಿಓ ವಾಯ್ ಕೆ ಗದಾಡಿ, ಸಿ ಪಿ ಐ ವೆಂಕಟೇಶ ಮುರನಾಳ, ಪಿಎಸೈ ಹಾಲಪ್ಪ ಬಾಲದಂಡಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಭಾಗವಹಿಸುವರು ಪಟ್ಟಣ ಹಾಗೂ ಎಲ್ಲ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಖಿದಮತ್ ಸೋಶಿಯಲ್ ವೆಲಫೇರ ಕಮಿಟಿ ಸಂಘಟಕರು ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸುವ ದೂರವಾಣಿ ಸಂಖ್ಯೆ – 9448863320, 9731460763, 9481280786, 8497861437
Ad9 News Latest News In Kannada
