Breaking News
Home / Uncategorized / ಮೂಡಲಗಿ ನಗರದಲ್ಲಿ ಪ್ರಾರಂಭವಾಗುತಿರುವ ತಾಲೂಕು ಗ್ರಾಮಪಂಚಾಯತ ಕಾರ್ಯಾಲಯ

ಮೂಡಲಗಿ ನಗರದಲ್ಲಿ ಪ್ರಾರಂಭವಾಗುತಿರುವ ತಾಲೂಕು ಗ್ರಾಮಪಂಚಾಯತ ಕಾರ್ಯಾಲಯ

Spread the love


ಮೂಡಲಗಿ: ನೂತನ ಮೂಡಲಗಿ ತಾಲೂಕಿನಲ್ಲಿ 20 ಗ್ರಾಮ ಪಂಚಾಯತಗಳು 48 ಹಳ್ಳಿಗಳು ಒಳಪಡುತ್ತವೆ. ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ಸ್ವಾಧೀನಡಿಸಿಕೊಂಡಿದ್ದು, ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದರು.

        ಅವರು ಪಟ್ಟಣನದಲ್ಲಿ ನೂತನ ತಾಲೂಕು ಪಂಚಾಯತ ಕಾರ್ಯಾಲಯವನ್ನು ಪ್ರಾರಂಭಿಸುವ ಸಲುವಾಗಿ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಉಪಸ್ಥಿತಿಯಲ್ಲಿ ಫೇಬ್ರುವರಿ ತಿಂಗಳಲ್ಲಿ ಪ್ರಾರಂಭಗೊಳ್ಳುವದು. ಮೂಡಲಗಿ ತಾಲೂಕು ವ್ಯಾಪ್ತಿಯ ಜನತೆಗೆ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ಅನುಕೂಲವಾಗುವದು. ಪ್ರಮುಖವಾಗಿ ಅಭಿವೃದ್ಧಿ ಕೆಲಸಗಳನ್ನು ತುರ್ತಾಗಿ ಕೈಗೋಳ್ಳಲು ಸಹಾಯಕವಾಗುವದು. ಈಗಿರುವ ಸಿಬ್ಬಂದಿಗಳ ಹಾಗೂ ಸ್ಥಳೀಯ ಇತರೆ ಇಲಾಖೆಗಳ ಪರಸ್ಪರ ಸಹಕಾರದಿಂದ ಕಛೇರಿಗೆ ಬೇಕಾಗುವ ಅಗತ್ಯ ಸಲಕರಣೆಗಳನ್ನು ನಿರ್ಮಾಣ ಮಾಡಲಾಗುವದು ಎಂದು ಹೇಳಿ ಸ್ಥಳೀಯರು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು.

          ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ನಗರದಲ್ಲಿ ತಹಶಿಲ್ದಾರ, ಬಿಇಒ, ಆರೋಗ್ಯ ಕೇಂದ್ರಗಳು, ಸಿಡಿಪಿಒ, ಕೋರ್ಟ್, ಎಪಿಎಮ್.ಸಿ ಪೋಲಿಸ್ ಇಲಾಖೆಗಳು ಇರುತ್ತವೆ. ದಕ್ಷಿಣ ಭಾರತದಲ್ಲಿಯೇ ಪ್ರಖ್ಯಾತಿ ಹೊಂದಿರುವ ದನಗಳ ಪೇಟೆ ಇದ್ದು ಈಗಾ ಪ್ರಾರಂಭಗೊಳ್ಳುತ್ತಿರುವ ತಾಪಂ ಕಛೇರಿಯಿಂದಾಗಿ ಎಲ್ಲ ಇಲಾಖೆಗಳಿಗೆ ಸಹಾಯಕವಾಗುವದು. ನಗರದ ಹಾಗೂ ತಾಲೂಕಿನ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದರು.

ಈ ಸಂದರ್ಭದಲ್ಲಿ ತಾಪಂ ಗೋಕಾಕನ ಸಹಾಯ ನಿರ್ಧೇಶಕರಾದ ಎಸ್.ಎಚ್ ದೇಸಾಯಿ, ನೂತನ ಮೂಡಲಗಿ ತಾಪಂ ಸಹಾಯಕ ನಿರ್ಧೇಶಕ ಸಂಗಮೇಶ ರೊಡ್ಡನವರ, ಕಛೇರಿ ವ್ಯವಸ್ಥಾಪಕ ಹಣಮಂತ ತಾಳಿಕೋಟಿ, ಹಿರಿಯ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ಪಿಡಿಒ ಹನಮಂತ ಬಸಳಿಗುಂದಿ, ಗಂಗಾಧರ ಮಲ್ಹಾರಿ, ಆರ್ ಎನ್ ಗುಜನಟ್ಟಿ, ಎಸ್ ಎಲ್ ಬಬಲಿ, ಎ.ಆರ್ ಗಚ್ಚಿ, ಆರತಿ ಪತ್ತಾರ, ಶಿವಲೀಲಾ ದಳವಾಯಿ, ಪೂಜಾ ನಾವಿ, ಶಿವಾನಂದ ಸಂಪಗಾರ, ಉದಯಕುಮಾರ ಬೆಳ್ಳೊಂಡಗಿ, ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ, ಡಿಎಸ್‍ಎಸ್ ಯುವ ಮುಖಂಡ ಈರಪ್ಪ ಢವಳೇಶ್ವರ, ರವಿ ಮರೆನ್ನವರ, ಕೆಂಪಣ್ಣ ಪಡದಾಳೆ, ಶ್ರೀಶೈಲ ತಡಸನವರ, ಎಸ್ ಎಸ್ ದೇವರ, ಶಿವಾನಂದ ಗುಡಸಿ ಉಪಸ್ಥಿತರಿದ್ದರು.

ವರದಿ: ಕೆ.ವಾಯ್ ಮೀಶಿ


Spread the love

About Ad9 Haberleri

Check Also

ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯಿಂದ ಪ್ರಜಾಪ್ರಭುತ್ವ ದಿನಾಚರಣೆ

Spread the love ಗೋಕಾಕ: ಇಲ್ಲಿಯ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿಯಿಂದ ಅಂತರರಾಷ್ಟ್ರೀಯ …