Breaking News
Home / ಮೂಡಲಗಿ / ಸತತ ಹಾಗೂ ನಿರಂತರ ಮಾರ್ಗದರ್ಶನ ಉನ್ನತ ವಿಚಾರ ಧಾರೆಗಳ ಮೂಲಕ ಪ್ರಯತ್ನಿನಿಸಿದಾಗ ಮಾತ್ರ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

ಸತತ ಹಾಗೂ ನಿರಂತರ ಮಾರ್ಗದರ್ಶನ ಉನ್ನತ ವಿಚಾರ ಧಾರೆಗಳ ಮೂಲಕ ಪ್ರಯತ್ನಿನಿಸಿದಾಗ ಮಾತ್ರ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

Spread the love

 

ಮೂಡಲಗಿ: ಸತತ ಹಾಗೂ ನಿರಂತರ ಮಾರ್ಗದರ್ಶನ ಉನ್ನತ ವಿಚಾರ ಧಾರೆಗಳ ಮೂಲಕ ಪ್ರಯತ್ನಿನಿಸಿದಾಗ ಮಾತ್ರ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಓರ್ವ ನಿಯೋಜಿತ ಶಿಕ್ಷಕರಿಂದ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರಾರಂಭಗೊಂಡ ಶಾಲೆಯು, ಸದ್ಯ ಸುಸಜ್ಜಿತ ಎಲ್ಲ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಸಕಲ ವ್ಯವಸ್ಥೆಹೊಂದಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ನಗರ ಪ್ರದೇಶದ ಶಾಲೆಯಾಗಿದೆ ಎಂದರು.
ಹಳೇಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ತಮ್ಮಯ ಜೀವನ ರೂಪಿಸಿಕೊಂಡಿದ್ದಾರೆ. ಪ್ರಸಕ್ತ ಶಾಲೆಯಲ್ಲಿರುವ ವಿದ್ಯಾರ್ಥಿ ಸಮೂಹ, ಸಾಧನೆಗೈದಿರುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆಯ ಗುರಿಯತ್ತ ಹೆಜ್ಜೆಯನ್ನೀಡಬೇಕು. ಬೆಳೆಯುತ್ತಿರುವ ಮೂಡಲಗಿ ಪಟ್ಟಣವು ಶಿಕ್ಷಣ, ಸಹಕಾರ, ಆರ್ಥಿಕವಾಗಿ ಮುನ್ನಡೆಯುತ್ತಿದ್ದು, ಶಿಕ್ಷಣಕ್ಕಾಗಿ ಸುತ್ತಮುತ್ತಲಿನ ಮಕ್ಕಳು ಇಲ್ಲಿಗೆ ಬಂದು ಶಿಕ್ಷಣ ಪಡೆದು ಯಶಸ್ವಿ ಭವ್ಯ ಭವಿಷ್ಯತ್ತಿನ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರ, ಪಾಲಕ-ಪೋಷಕರ, ಕೊಡುಗೈ ದಾನಿಗಳ, ಶಿಕ್ಷಣ ಪ್ರೇಮಿಗಳಿಂದಾಗಿ ಶೈಕ್ಷಣಿಕವಾಗಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಂಕ್ರಯ್ಯ ಹಿರೇಮಠ, ಸದಾಶಿವ ತಲಬಟ್ಟಿ, ತಮ್ಮಣ್ಣ ಕೆಂಚರಡ್ಡಿ ಮಾತನಾಡಿ, ಮಕ್ಕಳಿಗೆ ಜ್ಞಾನಾರ್ಜನೆಯ ಜೊತೆಗೆ ಉತ್ತಮ ಸಂಸ್ಕಾರಯುತ ಮೌಲ್ಯಯುತ ಜೀವನ ರೂಪಿಸಬೇಕು. ಇಂದಿನ ಸ್ಪರ್ಧಾತ್ಮಕ ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ಮೌಲ್ಯಯುತ ಜೀವನದ ಕೊರತೆಯಾಗುತ್ತಿದೆ. ಉತ್ತಮ ಆದರ್ಶಯುತ ಜೀವನ ಶೈಲಿಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸಬೇಕು. ಸರಕಾರಿ ಶಾಲೆಯಲ್ಲಿಯು ಉತ್ತಮ ಗುಣಮಟ್ಟದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿರುವದು ಪ್ರಶಂಸಾರ್ಹವಾಗಿದೆ ಎಂದು ತಿಳಿಸಿದರು.
ಪಾಲಕರಾದ ಎ.ಜೆ ಗಿರೆನ್ನವರ, ವಿದ್ಯಾರ್ಥಿಗಳ ಅನಿಸಿಕೆಗಳನ್ನು ನಿರ್ಮಲಾ ಮುರ್ಚಿಟ್ಟಿ, ವಿದ್ಯಾಶ್ರೀ ಕೋತಿನ ಹಾಗೂ ಎಸ್.ಡಿ ಮಾದರ ಶಿಕ್ಷಕರ ಹಿತನುಡಿಗಳನ್ನಾಡಿದರು.
ಕರ್ನಾಟಕ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾದ ಮೌಲಾಲಿ ತುಂಬಗಿ ವಿದ್ಯಾರ್ಥಿಗೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸತ್ಕಾರ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆವಹಿಸಿದ್ದ ಭೂ ದಾನಿ ಪುರಸಭೆ ಸದಸ್ಯ ಸಂತೋಷ ಸೋನವಾಲಕ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಪುರಸಭೆ ಸದಸ್ಯ ಎ.ಜಿ ಡಾಂಗೆ, ಶಾಲಾ ಸಲಹಾ ಸಮಿತಿ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಮತ್ತಪ್ಪ ಮಾಲಗಾರ, ಎಸ್.ಆರ್ ಹೆಗಡೆ, ಬಸಪ್ಪ ಜಕಾತಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರವನ್ನು ಟಿ.ಜಿ ಘಂಟಿ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಮ್ ಎಮ್ ದಬಾಡಿ ಸ್ವಾಗತಿಸಿ ಜ್ಯೋತಿಲಕ್ಷ್ಮಿ ಕೆ.ಜಿ ವಂದಿಸಿದರು.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …

Leave a Reply

Your email address will not be published. Required fields are marked *