ಮೂಡಲಗಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರಾದಿ ಗ್ರಾಪಂ ಅಧ್ಯಕ್ಷೆ ಸವಿತಾ ಚಂದ್ರಶೇಖರ ನಾಯಿಕ ತಿಳಿಸಿದರು.
ತಾಲೂಕಿನ ಅವರಾದಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 18 ಕೋಟಿ ರೂ ವೆಚ್ಚದ ಅವರಾದಿ-ತಿಮ್ಮಾಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಕಾಮಗಾರಿಯಿಂದ ಅವರಾದಿಯಿಂದ ಹಳೇಯರಗುದ್ರಿ, ಹೊಸಯರಗುದ್ರಿ ಮೂಲಕ ತಿಮ್ಮಾಪೂರ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.
ಶಾಸಕ ಹಾಗೂ ನಮ್ಮೆಲ್ಲರ ನೆಚ್ಚಿನ ನಾಯಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಇಷ್ಟು ದೊಡ್ಡಮೊತ್ತದ ಕಾಮಗಾರಿಯನ್ನು ನೆರವೇರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. 18 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಯನ್ನು ನನ್ನಿಂದ ನೆರವೇರಿಸಲು ಅನುವು ಮಾಡಿಕೊಟ್ಟ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸದಾ ಋಣ ಯಾಗಿರುವುದಾಗಿ ಸವಿತಾ ನಾಯಿಕ ಇದೇ ಸಂದರ್ಭದಲ್ಲಿ ತಿಳಿಸಿದರು.
ಅವರಾದಿಯಿಂದ ತಿಮ್ಮಾಪೂರವರೆಗಿನ 10 ಕಿ.ಮೀ ರಸ್ತೆಯು ಹದಗೆಟ್ಟಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ವಿಷಯವನ್ನು ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ಅವರಾದಿ ಹಾಗೂ ಸುತ್ತಮುತ್ತಲಿನ ಮುಖಂಡರುಗಳು ತಂದಾಗ ಲೋಕೋಪಯೋಗಿ ಇಲಾಖೆಯಿಂದ ಈ ಕಾಮಗಾರಿಗೆ ಅನುದಾನ ನೀಡಿದರು. ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದಾರೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಂ. ಪಾಟೀಲ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ನಿಂಗಪ್ಪಗೌಡ ನಾಡಗೌಡ, ಗ್ರಾಪಂ ಉಪಾಧ್ಯಕ್ಷ ಸಂಜುಗೌಡ ಪಾಟೀಲ, ನ್ಯಾಯವಾದಿ ಮಲ್ಲನಗೌಡ ಪಾಟೀಲ, ಕಲ್ಲಪ್ಪ ರಂಜಣಗಿ, ಶ್ರೀಶೈಲ ಭಜಂತ್ರಿ, ಮಾರುತಿ ಹರಿಜನ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಸಿದ್ಧಾರೂಢ ಮಬನೂರ, ಎಚ್.ಎಸ್. ಪಾಟೀಲ, ಅರ್ಜುನಗೌಡ ಪಾಟೀಲ, ತಮ್ಮಾಣೆಪ್ಪ ಬಿ.ಪಾಟೀಲ, ರಾಮಣ್ಣಾ ಕಾಳಶೆಟ್ಟಿ, ಶಂಕರ ಹವಳೆಪ್ಪಗೋಳ, ಹನಮಂತಗೌಡ ಚನ್ನಾಳ, ಭೀಮಶಿ ಬಿ.ಪಾಟೀಲ, ಸಂಗಪ್ಪ ಕಂಟಿಕಾರ, ಹನಮಂತ ಡೊಂಬರ, ಚತ್ರಪ್ಪ ಮೇತ್ರಿ, ಪಿಡಿಓ ಶಿವಲೀಲಾ ದಳವಾಯಿ, ಗುತ್ತಿಗೆದಾರ ಸುಧಾಕರ ಶೆಟ್ಟಿ ಸೇರಿದಂತೆ ಅವರಾದಿ, ಹಳೇಯರಗುದ್ರಿ, ಹೊಸಯರಗುದ್ರಿ ಮತ್ತು ತಿಮ್ಮಾಪೂರ ಗ್ರಾಮಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್ : ಲೋಕೋಪಯೋಗಿ ಇಲಾಖೆಯ ಎಸ್‍ಎಚ್‍ಡಿಪಿ ಯೋಜನೆಯಡಿ ಒಟ್ಟು 22 ಕೋಟಿ ರೂ.ಗಳ ಪ್ಯಾಕೇಜ್ ಬಿಡುಗಡೆಯಾಗಿದ್ದು, ಇದರಲ್ಲಿ 18 ಕೋಟಿ ರೂ. ಅವರಾದಿಯಿಂದ ತಿಮ್ಮಾಪೂರವರೆಗಿನ ರಸ್ತೆ ಕಾಮಗಾರಿ ಹಾಗೂ 4 ಕೋಟಿ ರೂ. ವೆಚ್ಚದ ಕೌಜಲಗಿಯಿಂದ ಕಳ್ಳಿಗುದ್ದಿವರೆಗಿನ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಅವರಾದಿಯಿಂದ ತಿಮ್ಮಾಪೂರವರೆಗೆ 10 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಇದರಲ್ಲಿ 5 ಸಿ.ಡಿ ಕಾಮಗಾರಿಗಳು ಬರಲಿದ್ದು, ತ್ವರಿತಗತಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ನಿರ್ವಹಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಅರಭಾವಿ ಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಬರುವ ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಲು ಸಹ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ.
Home / ಮೂಡಲಗಿ / ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ ಅನುದಾನ ಮಂಜೂರು : ಸವಿತಾ ನಾಯಿಕ
Tags belagavitimes Fast9news inmudalagi nammbelagavi yuvabharath
Check Also
ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …