Breaking News
Home / ಮೂಡಲಗಿ / ಉಪ್ಪಾರ ಸಮಾಜದಿಂದ ಅ.21ರಂದು ಸಾಂಕೇತಿಕವಾಗಿ ಸುಮಾರು ಹತ್ತು ಸಾವಿರ ಜನ

ಉಪ್ಪಾರ ಸಮಾಜದಿಂದ ಅ.21ರಂದು ಸಾಂಕೇತಿಕವಾಗಿ ಸುಮಾರು ಹತ್ತು ಸಾವಿರ ಜನ

Spread the love


ಮೂಡಲಗಿ: ಉಪ್ಪಾರ ಸಮಾಜವನ್ನು ಎಸಿ-ಎಸ್ಟಿಗೆ ಸೇರಿಸಬೇಕೆಂಬ ಉದ್ದೇಶದಿಂದ ಅನೇಕ ವರ್ಷಗಳ ಕಾಲದಿಂದಲೂ ಹೋರಾಟ ಮಾಡುತ್ತಾ ಬಂದಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಇಲ್ಲಿಯವರೆಗೂ ಸ್ಪಂದಿಸಿಲ್ಲ ಆದರಿಂದ ತಾಲೂಕಿನ ಉಪ್ಪಾರ ಸಮಾಜದಿಂದ ಅ.21ರಂದು ಸಾಂಕೇತಿಕವಾಗಿ ಸುಮಾರು ಹತ್ತು ಸಾವಿರ ಜನ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸೇರಿ ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದೆಂದು ಎಂದು ಸಮಾಜ ಹಿರಿಯ ಮುಖಂಡ ಬಿ ಬಿ ಹಂದಿಗುಂದ ಹೇಳಿದರು.
ಶನಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.21ರಂದು ಪಟ್ಟಣದ ಈರಣ್ಣ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಕಲ್ಮೇಶ್ವರ ವೃತ್ತಕ್ಕೆ ಆಗಮಿಸಿ ಕೆಲ ಕಾಲ ಪ್ರತಿಭಟಿಸಿ, ತಹಶೀಲ್ದಾರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು. ದೀಪವಾಳಿ ನಂತರ ದಿನಗಳಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನಿಂದ ಸುಮಾರು 25 ಸಾವಿರ ಜನರು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಮಾಜದ ಸಂಘಟನೆಯ ತಾಲೂಕಾಧ್ಯಕ್ಷ ಶಿವಬಸು ಹಂದಿಗುಂದ ಹಾಗೂ ಮುಖಂಡ ಬಸವರಾಜ ಖಾನಪ್ಪನ್ನವರ ಮಾತನಾಡಿ, ಸ್ವತಂತ್ರದ ಹೋರಾಟ ಸಂದರ್ಭದಲ್ಲಿ ಸಹ ಉಪ್ಪಾರ ಸಮಾಜ ಜನರು ಹೋರಾಟ ಮಾಡಿದ್ದಾರೆ ಆದರೂ ಸಹ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ಮಾತ್ರ ನೀಡಿ ಮತಗಳನ್ನು ಪಡೆದುಕೊಳ್ಳುತ್ತಾರೆ ಹೊರೆತು, ಉಪ್ಪಾರ ಸಮಾಜ ಜನರಿಗೆ ಯಾವುದೇ ಬೇಡಿಕೆಗಳನ್ನು ಈಡೇರಿಸುವಂತ ಕಾರ್ಯ ಮಾಡಿಲ್ಲ. ಆದರಿಂದ ಮುಂದಿನ ದಿನಮಾನಗಳಲ್ಲಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರು ವರೆಗೂ ಪಾದಯಾತ್ರೆ ಮೂಲಕ ನೇರವಾಗಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದು ಆದರಿಂದ ತಾವುಗಳು ಶಿಘ್ರವಾಗಿ ನಮ್ಮ ಸಮಾಜವನ್ನು ಎಸಿ-ಎಸ್ಟಿಗೆ ಸೇರಿಸಬೇಕು ಇಲ್ಲಾದರೇ ಚುನಾವಣೆ ಸಂದರ್ಭದಲ್ಲಿ ಮತವನ್ನು ಚಲಾಯಿಸುವುದನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕುಶಾಲ ಗೋಡೆನ್ನವರ, ರಾಮಣ್ಣ ಹಂದಿಗುಂದ, ಶಿವಪ್ಪ ಮರ್ದಿ, ಸುಭಾಷ ಪೂಜೇರಿ, ಬಿ ಎಸ್ ತಿಗಡಿ, ಲಕ್ಷ್ಮಣ ಬಂಡ್ರೋಳಿ, ಶಿವಪ್ಪ ಅಟಮಟ್ಟಿ, ಸಾಬಪ್ಪ ಬಂಡ್ರೋಳಿ, ಶಂಭುಲಿಂಗ ಮುಕ್ಕನ್ನವರ, ಬಾಳಪ್ಪ ಹುದ್ದಾರ, ಹಣಮಂತ ಕಂಕಣವಾಡಿ ಹಾಗೂ ಸಮಾಜದ ಬಾಂಧವರು ಇದ್ದರು.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …

Leave a Reply

Your email address will not be published. Required fields are marked *