Breaking News
Home / ಮೂಡಲಗಿ / ಕಾರ್ಮಿಕ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಬಸ್ ಪಾಸ್ ವಿರತಿಸಿದ : ಸರ್ವೋತ್ತಮ್ ಜಾರಕಿಹೊಳಿ

ಕಾರ್ಮಿಕ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಬಸ್ ಪಾಸ್ ವಿರತಿಸಿದ : ಸರ್ವೋತ್ತಮ್ ಜಾರಕಿಹೊಳಿ

Spread the love

ಮೂಡಲಗಿ: ಕಾರ್ಮಿಕ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೆಎಸ್‍ಆರ್‍ಟಸಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಿಂದ ಉಚಿತ ಪಾಸ್‍ಗಳನ್ನು ವಿತರಿಸಲಾಗುತ್ತಿದ್ದು, ನಮ್ಮ ತಾಲೂಕಿನ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ವಾಸಸ್ಥಳದಿಂದ 45 ಕಿ.ಮೀ ವ್ಯಾಪ್ತಿಯೊಳಗೆ ಪ್ರಯಾಣ ಮಾಡಬಹುದು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಸೋಮವಾರದಂದು ಪಟ್ಟಣದ ಪುಸರಭೆ ಆವರಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಜರುಗಿದ, ಬಸ್ ಪಾಸ್ ಮತ್ತು ಮದುವೆ ಧನಸಹಾಯದ ಮಂಜೂರತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಇರುವ ಸಮರ್ಥ ಕಟ್ಟಡ ಕಾರ್ಮಿಕ ಸಂಘ ಉತ್ತಮವಾಗಿ ತಾಲೂಕಿನಲ್ಲಿರುವ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವಂತ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಅರ್ಹ ಫಲಾನುಭವಿಗಳಿಗೆ ಮಾಹಿತಿ ಮುಟ್ಟಿಸುವಂಕ ಕಾರ್ಯ ಶ್ಲಾಘನೀಯವಾಗಿದ್ದು, ತಾಲೂಕಿನ ಕಾರ್ಮಿಕರಿಗೆ ನಾವು ಯಾವಾಗಲೂ ಬೆಂಬಲವಾಗಿರುತ್ತೇವೆ ಎಂದರು.

ನ್ಯಾಯವಾಧಿ ಲಕ್ಷ್ಮಣ ಅಡಿಹುಡಿ ಮಾತನಾಡಿ, ಕಾರ್ಮಿಕರು ಇಲಾಖೆಯಿಂದ ಗುರುತಿನ ಚೀಟಿ ಮಾತ್ರ ಪಡೆದುಕೊಂಡ ನಂತರ ಆ ಚೀಟಿಯಿಂದ ಸಿಗುವಂತ ಇಲಾಖೆಯ ಸೌಲಭ್ಯಗಳನ್ನು ಸರಿಯಾಗಿ ಪಡೆದುಕೊಳ್ಳತ್ತಿಲ್ಲ ಆದರಿಂದ ತಾವುಗಳು ಇಲಾಖೆಯಿಂದ ಸಿಗುವಂತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಪರಿಸರ ಪ್ರೇಮಿ ಈರಪ್ಪ ಢವೇಳಶ್ವರ ಹಾಗೂ ಸಮರ್ಥ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಸುಭಾಸ ಗೋಡ್ಯಾಗೊಳ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಮಾತ್ರವಲ್ಲದೇ ಅವರ ಮಕ್ಕಳ ಶಿಕ್ಷಣಕ್ಕೂ ಕೂಡಾ ಧನಸಹಾಯ ನೀಡುತ್ತಿದ್ದು, ಇದರ ಬಗ್ಗೆ ಸಾಕಷ್ಟು ಕಾರ್ಮಿಕರಿಗೆ ಮಾಹಿತಿ ಇಲ್ಲದೇ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಈಗಾಗಲೇ ಪಟ್ಟಣದ ಕೂಳಚೆ ಪ್ರದೇಶದಲ್ಲಿ ಇರುವಂತ ಬಡ ಜನರಿಗೆ ಮನೆಗಳು ಬಂದಿದ್ದು, ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾದ ಕಾರ್ಮಿಕರು ಸಹ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಪೋಳ್, ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಪುಸರಭೆ ಸದಸ್ಯ ಸಿದ್ದಪ್ಪ ಮಗದುಮ್ಮ, ಮುಖಂಡಾರ ಮರೇಪ್ಪ ಮರೇಪ್ಪಗೊಳ, ರಾಜು ಪೂಜೇರಿ, ಶಾಸಕರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ್ಟ, ಈರಪ್ಪ ಮಾಲೋಜಿ, ಮಂಜುನಾಥ ರೇಳೆಕರ, ರಮೇಶ ಉಪ್ಪಾರ ಹಾಗೂ ಅನೇಕರು ಇದ್ದರು.


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *