"ಕುಂಚಕ್ಕೆ ಸಿಕ್ಕ ಕನ್ಯೆಯರು" ಬಣ್ಣದಲ್ಲಿ ಮಿಂದೆದ್ದ ಬಹಳಷ್ಟು ಚೆಲುವೆಯರು ವರ್ಮನ ಕೈ ಕುಂಚ ಕ್ಕೆ ಸಿಕ್ಕು ಬದುಕಿ ಬಾಳಿದರು.. ಅದೇ ಸೀರೆ,ಅದೇ ನೀರೆ ಕೆಂದುಟಿಯ ಕನ್ಯೆಯರು ಬಣ್ಣ ಮಾಸದಷ್ಟು ಕೆನ್ನೆ ರಂಗೇರಿ ಹೊಳೆಯುವರು ಬೆಡಗಿನ ವೈಯಾರಕ್ಕೆ ಬಣ್ಣದ ಕೈ ಸೋಕಿ, ಇಂದಿಗೂ ಜೀವಂತದಲ್ಲಿ ಮನ ಮನವ ಕಾಡುವರು ಕುಂಚಕ್ಕೆ ಬಣ್ಣವಾದ ಚೆಲುವ ಚೆನ್ನೆಯರು... ಅಶ್ವಿನಿ.ಜೆ.ವಿ.ಶೇಟ್