Breaking News

ನ್ಯಾಯವಾಧಿ ಲಕ್ಷ್ಮಣ ಅಡಿಹುಡಿಯವರಿಗೆ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ

Spread the love

ಮೂಡಲಗಿ: ಸ್ವಾಮಿ ವಿವೇಕಾನಂದರ ನಡೆ-ನುಡಿಗಳು ಇಂದಿನ ಯುವಕರಿಗೆ ದಾರಿ ದೀಪವಾಗಿವೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನ್ಯಾಯವಾಧಿ ಲಕ್ಷ್ಮಣ ಅಡಿಹುಡಿ ಯುವಕರಿಗೆ ಕಿವಿಮಾತು ಹೇಳಿದರು.

ಇತ್ತಿಚ್ಚೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ, ವಿಜಯಪುರ ಜಿಲ್ಲಾ ಹಾಗೂ ತಾಲೂಕಾ ಘಟಕ ಮುದ್ದೇಬಿಹಾಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯುಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 160ನೇ ಜಯಂತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಂಘಟೆಯವರು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದರಿಂದ ಸಾಧಕರಿಗೆ ಮತ್ತೊಷ್ಟು ಸಮಾಜ ಸೇವೆಯಲ್ಲಿ ಕಾಯಕ ಮಾಡುವಂತೆ ಪ್ರೇರಣೆ ನೀಡುತ್ತಿರು ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕರ್ನಾಟಕ ಪ್ರತಿ ಜಿಲ್ಲೆಗಳಿಂದ ಒಬ್ಬರಂತೆ ಸಾಧಕರನ್ನು ಗುರುತಿಸಿ, ಈ ಕಾರ್ಯಕ್ರಮದಲ್ಲಿ ಅವರನ್ನು ಸತ್ಕರಿಸಿ ಇಂದಿನ ಯುವಕರಿಗೆ ಸಾಧಕರ ಬಗ್ಗೆ ಪರಿಚಯ ಮಾಡಿಸುವ ಮೂಲಕ ಯುವಕರಿಗೆ ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವಗಳನ್ನು ಮೂಡಿಸುವಂತ ಕಾರ್ಯ ಪ್ರತಿ ಜಿಲ್ಲೆಯಲ್ಲಿ ಆಯೋಜಿಸುವಂತ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲಜ್ಞಾನಮಥ ಬಬಲಾದಿಯ ಅಪ್ಪಯ್ಯ ಮಹಾಸ್ವಾಮಿಗಳು, ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಪ್ರತಾಪಲಿಂಗಯ್ಯ, ಮಾಜಿ ಸಚಿವ ಸಿ ಎಸ್ ನಾಡಗೌಡ್ರ, ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹಾಗೂ ಅನೇಕರು ಉಪಸ್ಥಿತರಿದ್ದರು.

 


Spread the love

About Ad9 News

Check Also

ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

Spread the love ಮೂಡಲಗಿ: ಪಟ್ಟಣದ ತಾ.ಪಂ ಕಾರ್ಯಲಯದಲ್ಲಿ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿಗೆ ಚಾಲನೆ …

Leave a Reply

Your email address will not be published. Required fields are marked *