ಮೂಡಲಗಿ : ರಸ್ತೆಗಳ ಅಭಿವೃದ್ಧಿಗಾಗಿ ಆರ್‍ಡಿಪಿಆರ್ ಇಲಾಖೆಯಿಂದ 16 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಮಾರ್ಚ ತಿಂಗಳೊಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರದಂದು ಇಲ್ಲಿಗೆ ಸಮೀಪದ ಗುರ್ಲಾಪೂರ ಕ್ರಾಸ್ ಹತ್ತಿರ 1.30 ಕೋಟಿ ರೂ. ವೆಚ್ಚದ ಗುರ್ಲಾಪೂರ-ಇಟ್ನಾಳ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕಾಮಗಾರಿಗಳ ವಿವರ : ಯಾದವಾಡ-ಮಾನೋಮ್ಮಿ ರಸ್ತೆ ಸುಧಾರಣೆಗೆ 2.20 ಕೋಟಿ ರೂ, ಮುನ್ಯಾಳ ಗ್ರಾಮದಿಂದ ರಂಗಾಪೂರ ರಸ್ತೆ ಸುಧಾರಣೆಗೆ 1.10 ಕೋಟಿ ರೂ, ಹಳ್ಳೂರ ಕನ್ನಡ ಶಾಲೆಯಿಂದ ಮಹಾಲಿಂಗಪೂರ ರಸ್ತೆ ಸುಧಾರಣೆಗೆ 62.50 ಲಕ್ಷ ರೂ, ಬಳೋಬಾಳ ಗ್ರಾಮದಿಂದ ಸಂಗನಕೇರಿ-ಯಾದವಾಡ ಮುಖ್ಯ ರಸ್ತೆ ಸುಧಾರಣೆಗೆ 1.10 ಕೋಟಿ ರೂ, ಕೌಜಲಗಿ ಎನ್‍ಎಸ್‍ಎಫ್ ಶಾಲೆಯಿಂದ ಕೊಪ್ಪದ ರಸ್ತೆ ಸುಧಾರಣೆಗೆ 2 ಕೋಟಿ ರೂ, ಚಿಗಡೊಳ್ಳಿ ಗ್ರಾಮದಿಂದ ಬಸವನಗರ ರಸ್ತೆ ಸುಧಾರಣೆಗೆ 1.10 ಕೋಟಿ ರೂ, ಮೆಳವಂಕಿ ಗೌಡನ ಕ್ರಾಸ್‍ದಿಂದ ಬಸವನಗರ ರಸ್ತೆ ಸುಧಾರಣೆಗೆ 1.10 ಕೋಟಿ ರೂ, ರಡ್ಡೇರಹಟ್ಟಿ-ಯಾದವಾಡ ರಸ್ತೆ ಸುಧಾರಣೆಗೆ 55 ಲಕ್ಷ ರೂ, ನಾಗನೂರ-ಕಂಕಣವಾಡಿ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಹೊಸಟ್ಟಿ ಕ್ರಾಸದಿಂದ ಕುಲಗೋಡ ರಸ್ತೆ ಸುಧಾರಣೆಗೆ 1.65 ಕೋಟಿ ರೂ, ಕುಲಗೋಡದಿಂದ ಹುಣಶ್ಯಾಳ ಪಿವಾಯ್ ರಸ್ತೆ ಸುಧಾರಣೆಗೆ 55 ಲಕ್ಷ ರೂ, ವಡೇರಹಟ್ಟಿ-ಜೋಕಾನಟ್ಟಿ ರಸ್ತೆ ಸುಧಾರಣೆಗೆ 77 ಲಕ್ಷ ರೂ, ಖಾನಟ್ಟಿ-ಮುನ್ಯಾಳ ರಸ್ತೆ ಸುಧಾರಣೆಗೆ 30 ಲಕ್ಷ ರೂ, ನಾಗನೂರ-ಹನುಮಾನ ನಗರ ರಸ್ತೆ ಸುಧಾರಣೆಗೆ 55 ಲಕ್ಷ ರೂ, ಅಡಿಬಟ್ಟಿ ಬಸವನಗರ ರಸ್ತೆ ಕಾಮಗಾರಿಗೆ 30 ಲಕ್ಷ ರೂ, ಸೇರಿದಂತೆ ಒಟ್ಟು 16 ಕೋಟಿ ರೂ, ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸದಸ್ಯ ಆನಂದ ಟಪಾಲ, ಮುಖಂಡರಾದ ಮಹಾದೇವ ಮುಗಳಖೋಡ, ಶಂಕರ ಮುಗಳಖೋಡ, ಮಹಾದೇವ ರಂಗಾಪೂರ, ಹಣಮಂತ ಶಿವಾಪೂರ, ಮಹಾದೇವ ಮುಕ್ಕುಂದ, ಶಿವಬಸು ಹಂಚಿನಾಳ, ಆರ್.ಬಿ. ನೇಮಗೌಡರ, ರೇವಪ್ಪ ನೇಮಗೌಡರ, ಸಿದ್ದು ಗಡ್ಡೇಕರ, ಪ್ರಕಾಶ ಮುಗಳಖೋಡ, ಅನ್ವರ ನದಾಫ, ಸಿದ್ದಪ್ಪ ಮಗದುಮ್ಮ, ಪಾಂಡು ಮಹೇಂದ್ರಕರ, ಅಬ್ದುಲ್‍ಗಫಾರ ಡಾಂಗೆ, ಮರೆಪ್ಪ ಮರೆಪ್ಪಗೋಳ, ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.