ಮೂಡಲಗಿ: ಘಟಪ್ರಬಾ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ-ಉಪಾಧ್ಯಕ್ಷರು ನಿಧನರಾದ ಪ್ರಯುಕ್ತ ತೇರವಾದ ಸ್ಥಾನಕ್ಕೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ತಾಲೂಕಿನ ಜೋಕಾನಟ್ಟಿಯ ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ರಂಗಾಪೂರದ ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ ಅವರನ್ನು ಪಟ್ಟಣದ ಸೌಹಾರ್ದ ಸಹಕಾರಿ ಸಭಾ ಭವನದಲ್ಲಿ ಮಂಗಳವಾರ ದಂದು ಸತ್ಕರಿಸಿ ಗೌರವಿಸಿದರು.
ಸತ್ಕಾರ ಮಾಡಿ ಮಾತನಾಡಿದ ಸಾಯಿ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಮರಿಯೆಪ್ಪ ಮರಿಯಪ್ಪಗೋಳ ಮಾತನಾಡಿ, ಈ ಭಾಗದ ರೈತರ ಆಶಾಕಿರಣವಾದ ಘಟಪ್ರಭಾ ಶುಗರ್ಸ್ ಕಾರ್ಖಾನೆಗೆ ನಮ್ಮ ವರೆ ಅದ ಆತ್ಮೀಯರನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಾರಕಿಹೊಳಿ ಸಹೋದರ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಇವರನ್ನು ನೇಮಕ ಮಾಡಿದ್ದಾರೆ
ಈ ಸಂಧರ್ಭದಲ್ಲಿ ನಿರ್ದೇಶಕರಾದ ಹಣಮಂತ ಹವಳೆವಗೋಳ, ಶಿವು ಚಂಡಕಿ, ಮುಖಂಡರಾದ ಮಹೇಶ್ ಹಳ್ಳೂರ, ಯಮನಪ್ಪ ಮೇತ್ರಿ, ಸುರೇಶ ಬೈಬಲ್, ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಶ್ರೀಧರ್ ಹವಳೆವಗೋಳ ಮತ್ತು , ಸಿಬ್ಬಂದಿಗಳು ಉಪಸ್ಥಿತರಿದ್ದರು.