Breaking News
Home / ಮೂಡಲಗಿ / ಸಂತ್ರಸ್ತರಿಗೆ ಪರಿಹಾರದ ಅಭಯ ನೀಡಿದ ಯುವ ಮುಖಂಡ ಸರ್ವೋತ್ತಮ

ಸಂತ್ರಸ್ತರಿಗೆ ಪರಿಹಾರದ ಅಭಯ ನೀಡಿದ ಯುವ ಮುಖಂಡ ಸರ್ವೋತ್ತಮ

Spread the love

 

*ತಿಗಡಿ, ಸುಣಧೋಳಿ, ಹುಣಶ್ಯಾಳ ಪಿವೈ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿದ ಸರ್ವೋತ್ತಮ ಜಾರಕಿಹೊಳಿ*

 


*ಮೂಡಲಗಿ-* ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭರವಸೆ ನೀಡಿದರು.
ತಾಲೂಕಿನ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂತ್ರಸ್ತರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.


ಬಹುತೇಕ ಕಡೆಗಳಲ್ಲಿ ನದಿ ತೀರದ ಸಂತ್ರಸ್ತರು ಸೂರು ಸಮಸ್ಯೆಯನ್ನು ಮುಂದೆ ಮಾಡಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸುವುದಾಗಿ ಹೇಳಿದ ಅವರು, ನಿಮ್ಮ ನೋವುಗಳಿಗೆ ನಮ್ಮ ಕುಟುಂಬವು ಸದಾ ಸ್ಪಂದಿಸುತ್ತದೆ. ನೀರಿನ ಮಟ್ಟವು ಇಳಿಕೆಯಾಗುವಷ್ಟರಲ್ಲಿ ಮತ್ತೇ ಈಗ ಏರಿಕೆಯಾಗಿದೆ. ಆದ್ದರಿಂದ ಸಂತ್ರಸ್ತ ಕುಟುಂಬಗಳು ಸುರಕ್ಷಿತವಾಗಿ ಕಾಳಜಿ ಕೇಂದ್ರಗಳಲ್ಲಿ ವಾಸ ಮಾಡುವಂತೆ ಅವರು ಕೋರಿದರು.


ಸರ್ವೋತ್ತಮ ಜಾರಕಿಹೊಳಿ ಅವರು ನೀರಿನ ಹೆಚ್ಚಳದಿಂದ ಹಾಳಾಗಿರುವ ತಿಗಡಿ ಸೇತುವೆಯ ರಸ್ತೆಯನ್ನು ಪರಿಶೀಲಿಸಿದರು.
ನಂತರ ಸುಣಧೋಳಿ, ಪಿ.ವೈ. ಹುಣಶ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಸೂಚಿಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಊಟೋಪಚಾರವನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಶ್ರೀ ಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ಮುಖಂಡರಾದ ಎ.ಟಿ. ಗಿರಡ್ಡಿ, ಎಂ.ಎಂ.ಪಾಟೀಲ, ವೈ.ಆರ್.ಪಾಟೀಲ, ಹಣಮಂತ ಅಂಬಿ, ಗುರುರಾಜ ಪಾಟೀಲ, ಸುಭಾಸ ಕಮತಿ, ಪ್ರಕಾಶ ಪಾಟೀಲ, ಗೋಪಾಲ ಬಿಳ್ಳೂರ, ಬಸಪ್ಪ ಗಿರಡ್ಡಿ, ಅರ್ಜುನ ಜಿಡ್ಡಿಮನಿ, ಬಸು ಸಾರಾಪೂರ, ಹಣಮಂತ ರಡ್ಡೇರಟ್ಟಿ, ಬಸು ಖಿಲಾರಿ, ಜಿ.ಆರ್ ಗಿರಡ್ಡಿ, ರಂಗಪ್ಪ ಕಳ್ಳಿಗುದ್ದಿ, ರಾಜು ಉಪ್ಪಾರ, ನರೇಂದ್ರ ನಾಡಗೌಡ, ದುಂಡಪ್ಪ ಪಾಟೀಲ, ಅಲ್ಲಪ್ಪ ಖಾನಪ್ಪನವರ, ಬಸಪ್ಪ ಬಾರಕಿ, ಸಿ. ಎಲ್. ನಾಯಿಕ, ಹಣಮಂತಗೌಡ ಪಾಟೀಲ, ಹಣಮಂತ ನಾಯಿಕ, ತಿಗಡಿ ಗ್ರಾ.ಪಂ.ಅಧ್ಯಕ್ಷೆ ಮುತ್ತೆವ್ವ ಲಗಳಿ, ಸುಣಧೋಳಿ ಗ್ರಾ. ಪಂ. ಅಧ್ಯಕ್ಷ ಸಿದ್ದಪ್ಪ ದೇವರಮನಿ, ಹುಣಶ್ಯಾಳ ಪಿವೈ ಗ್ರಾ.ಪಂ.ಅಧ್ಯಕ್ಷ ಜಗದೀಶ ಡೊಳ್ಳಿ, ರಾಮಪ್ಪ ಪೂಜೇರಿ, ಶಿವಕುಮಾರ ಅಂಗಡಿ, ನೀಲಪ್ಪ ಕೇವಟಿ, ಬಸು ಕುರಿಬಾಗಿ, ರಫೀಕ ಲಾಡಖಾನ, ಆಯಾ ಗ್ರಾ.ಪಂ.ಉಸ್ತುವಾರಿ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು, ಪ್ರಮುಖರು, ಉಪಸ್ಥಿತರಿದ್ದರು.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …

Leave a Reply

Your email address will not be published. Required fields are marked *