Breaking News
Home / ರಾಜ್ಯ>ಬೆಳಗಾವಿ / ಪ್ರಾಣಿ ಪಕ್ಷಿ ಸಂಕುಲವನ್ನು ಉಳಿಸೋಣ

ಪ್ರಾಣಿ ಪಕ್ಷಿ ಸಂಕುಲವನ್ನು ಉಳಿಸೋಣ

Spread the love

 

ಹಳ್ಳೂರಿನ ಸಮಾಜ ಸೇವಕರು ಹಾಗೂ ಯುವ ಸಂಘಟಕರಾದ ಸಿದ್ದಣ್ಣ ದುರದುಂಡಿ ಅವರು ಪಕ್ಷೀ ಸಂಕುಲವನ್ನು ಉಳಿಸಿ ಬೆಳೆಸಲು ವಿಶೆಷ ಅಭಿಯಾನ ಹಮ್ಮಿಕೊಂಡಿದ್ದಾರೆ. ತಮ್ಮ ಮುಂದೆ ಇರುವಂತ ಕೈತೋಟದಲ್ಲಿ ಗುಬ್ಬಿಗಳಿಗೆ ನೀರುನಿಸುವ ಕಾರ್ಯ ಹಾಗೂ ಮನೆಯ ಮೇಲ್ಚಾವಣಿ ಮೇಲೆ ದವಸ ಧಾನ್ಯಗಳನ್ನು ಪಕ್ಷೀ ಸಂಕುಲ ಬೆಳೆಸಲು ಮೂಂದಾಗಿದ್ದಾರೆ. ಯಾಕೆಂದರೆ..!! ಈ ಉರಿ ಬಿಸಿಲಿನ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ.


ಹಾಗಾಗಿ ಸಾವಿಗೆ ಈಡಾಗುತ್ತಿದ್ದಾವೆ. ಇತ್ತೀಚಿನ ವೈಜ್ಞಾನಿಕ ಸಮೀಕ್ಷೆ ಯೋಂದರ ಪ್ರಕಾರ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆ ಯಾಗಲು ಪ್ರಮುಖ ಕಾರಣ.!! ಪೆಟ್ರೊಲ್ ದಹನವಾದಾಗ ಬರುವ ಮೀಥೈಲ್ ನೈಟ್ರೇಟ್ ನಂತಹ ರಾಸಾಯಿನಿಕಗಳು ಕೆಲವು ಕೀಟಗಳನ್ನು ಕೊಲ್ಲುತ್ತವೆ. ಈ ಕೀಟಗಳನ್ನು ಗುಬ್ಬಿಗಳು ತಮ್ಮ ಮರಿಗಳಿಗೆ ತಿನ್ನಿಸುತ್ತಿದ್ದವು. ಇದೂ ಗುಬ್ಬಿಗಳ ಕಣ್ಮರೆಗೆ ಕಾರಣವಾಗಿದೆ. ಮನೆ ನಿರ್ಮಾಣದ ಶೈಲಿ ಬದಲಾಯಿತು. ಎಲ್ಲವೂ ಕಾಂಕ್ರೀಟ್ ಮಯವಾಗಿಬಿಟ್ಟಿತು. ಹೀಗಾಗಿ ಗೂಡು ಕಟ್ಟಲು ಗುಬ್ಬಿಗಳಿಗೂ ಸೂಕ್ತ ಜಾಗವಿಲ್ಲದಂತಾಯಿತು. ಈ ಹಿಂದೆ ಮನೆಗಳ ಮುಂದೆ ಧಾನ್ಯಗಳನ್ನು ಒಣಗು ಹಾಕುತ್ತಿದ್ದರು ಧಾನ್ಯಗಳನ್ನು ಕೇರುತ್ತದ್ದರು ಅಳಿದುಳಿದ ಧಾನ್ಯಗಳು ಗುಬ್ಬಿಗಳಿಗೆ ಆಹಾರವಾಗುತ್ತಿತ್ತು ಈಗ ಇವೆಲ್ಲಾ ಸಂಪುರ್ಣ ನಿಂತಿವೆ. ಹಿಂದಿನ ಕಾಲದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಗೋಣಿ ಚೀಲದಲ್ಲಿ ಧಾನ್ಯಗಳಿರುತ್ತಿದ್ದವು. ಹಾಗೂ ಅವನ್ನು ಹೊರಗೆ ಇರಿಸುರುತ್ತಿದ್ದವು ಇದರಿಂದ ಧಾನ್ಯ ಆಯುವದು ಗುಬ್ಬಿಗಳಿಗೆ ಸುಲಭವಾಗುತ್ತಿತ್ತು. ಈಗ ಎಲ್ಲವೂ ಪ್ಲಾಸ್ಟಿಕ್ ಕವರ್ ಗಳಲ್ಲಿ ಬಂದಿಯಾಗಿದೆ. ಮೊಬೈಲ್ ವಿಕಿರಣಗಳಿಂದ ತೊಂದರೆ ಎಂದು ಹೇಳಲಾಗುತ್ತದೆಯಾದರೂ ಇದಕ್ಕೆ ಈವರೆಗೂ ವೈಜ್ಞಾನಿಕ ಆಧಾರಗಳು ಸಿಕ್ಕಿಲ್ಲ. ಗುಬ್ಬಿಗಳಿಗೆ ಬೇಕಾದ ಅವಾಸ್ಥಾನ ಇಲ್ಲದು ಗಿಡ – ಮರಗಳ ಸಂಖ್ಯೆ ಕಡಿಮೆಯಾಗಿದ್ದು ಮನೆಯ ಹಿಂದೆ ಮುಂದೆ ಕೈತೋಟಗಳು ಕ್ಷೀಣಿಸಿದ್ದುಇಂತವೂ ಅವುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿವೆ. ಆದ್ದರಿಂದ ನಾವೆಲ್ಲ ಸಮಾನ ಮನಸ್ಕರರು ಹಾಗೂ ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಕರು ಸೇರಿ ಮಡಿಕೆಗಳು ಪನತಿಗಳನ್ನು ಮರಕ್ಕೆ ಕಟ್ಟುವ ಮೂಲಕ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದ್ದೆವೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತೀ ಮುಖ್ಯ. ನಾವು ನಮ್ಮ ಮನೆಗಳ ಮುಂದೆ ಮಡಿಕೆಗಳು ಮತ್ತು ಪನತಿಗಳಲ್ಲಿ ಉಪಯೋಗಿಸಿಕೊಂಡು ಪಕ್ಷಿಗಳಿಗೆ ನೀರುಣಿಸುವ ಹಾಗೂ ನಮ್ಮ ನಮ್ಮ ಮನೆಗಳ ಮೇಲ್ಚಾವಣಿಗಳ ಮೇಲೆ ದವಸ ಧಾನ್ಯಗಳನ್ನು ಇಟ್ಟು ಪಕ್ಷೀ ಸಂಕುಲವನ್ನು ಉಳಿಸೋಣ. ನಿಮ್ಮಿಂದ ಸಾಧ್ಯವಾದರೆ ತಮ್ಮ ತಮ್ಮ ಮನೆಗಳ ಮುಂದೆ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಸಮಯ ಬಿಡುವು ಮಾಡಿಕೊಂಡು ಪಕ್ಷಿ ಸಂಕುಲಗಳನ್ನ ಸಾಯುವ ಹೊತ್ತಿನಲ್ಲಿ ಅವುಗಳನ್ನ ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಪ್ರಾಣಿ-ಪಕ್ಷಿ ಸಂಕುಲಗಳನ್ನ ಉಳಿಸೋಣ ಬೆಳಿಸೋಣ?? ಇಂತಿ ತಮ್ಮ ವಿಶ್ವಾಸಿ ಸಿದ್ದಣ್ಣ ದುರದುಂಡಿ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಜಿಲ್ಲೆ.


Spread the love

About Ad9 Haberleri

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …