ಮೂಡಲಗಿ: ಪಟ್ಟಣದಲ್ಲಿ ಮಾಸ್ಕ ಇಲ್ಲದೆ ಓಡಾಡುವ ಸಾರ್ವಜನಿಕರಿಗೆ ಮೂಡಲಗಿ ಪೊಲೀಸರು ದಂಡ ಹಾಕುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡುತ್ತಿದ್ದಾರೆ.
ಸಾರ್ವಜನಿಕರ ಬೇಕಾಬಿಟ್ಟಿ ವರ್ತನೆಯಿಂದ ಕೊರೋನಾ ನಿಯಮ ಉಲ್ಲಂಘನೆಯಾಗುತ್ತಿದೆ. ಹಲವಾರು ಬಾರಿ ನಾನಾ ತರಹದ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಇದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತಾಗುವುದು.
ಆದರಿಂದ ಇದಕ್ಕೆ ಕಡಿವಾನಕ್ಕೆ ಕಠಿಣ ಕ್ರಮದ ಅವಶ್ಯಕತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಕೊರೋನಾ ನಿಯಮ ಪಾಲನೆಯೇ ಸುರಕ್ಷಾ ಮಂತ್ರವಾಗಿದೆ ಜನ ಎಚ್ಚೆತ್ತುಕೊಳ್ಳದಿದ್ದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಕೊಳ್ಳಬೇಕು.
100 ಜನರಿಗೆ ಬಿತ್ತು ದಂಡ
ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ ಎಚ್.ವೈ ಬಾಲದಂಡಿ ಹಾಗೂ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರು.