Breaking News

ತಹಶೀಲ್ದಾರ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಆಚರಣೆ

Spread the love


ಮೂಡಲಗಿ : ಜಗತ್ತಿನ ಉದ್ಧಾರಕ್ಕಾಗಿ ಗಂಗಾ ಮಾತೆಯನ್ನೇ ಭೂಮಿಗೆ ತಂದ, ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗಯನ್ನೇ ಧರೆಗಿಳಿಸಿದ ಯೋಗಿ ಭರೀರಥರ ತತ್ವಾದರ್ಶಗಳು ಎಂದಿಗೂ ಪ್ರಸ್ತುತವಾಗಿವೆ ಎಂದು ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ ಹೇಳಿದರು.
ತಹಶೀಲ್ದಾರ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಪ್ರಯುಕ್ತ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿ ಮಾತನಾಡಿದರು.
ಸಮಾಜ ಮುಖಂಡರಾದ ಮುಖಂಡರಾದ ಭಗವಂತ ಉಪ್ಪಾರ ಹಾಗೂ ಹಣಮಂತ ಕಂಕಣವಾಡಿ ಅವರು ಕೊರೋನಾ ತಡೆಗಟ್ಟಲು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ತಹಶೀಲ್ದಾರ ಸಿಬ್ಬಂಧಿಗಳಿಗೆ ಹಾಗೂ ಪತ್ರಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ತಾಲೂಕಾ ಶಿರಸ್ತೆದಾರ ಪರುಶುರಾಮ ನಾಯಕ, ಯಶವಂತ ಉದ್ದಪ್ಪನವರ, ಎ ಎಸ್ ಲಾಡಖಾನ, ರುದ್ರನ್ನ ಯಡವನ್ನವರ, ಎಮ್ ಎಲ್ ಮಾಸ್ತಮರ್ಡಿ, ಭಾರತಿ ಕಾಳೆ, ಕರಿಷ್ಮಾ ನದಾಫ್, ಸುರೇಖಾ ಈರಕರ, ಗಿರಿಜಾ ಸೈದಾಪೂರ, ಸಿದ್ದು ಬಿಸ್ವಾಗರ, ಸುನೀಲ ದೇಸಾಯಿ, ಶಾನೂರ ಗಸ್ತಿ, ಮಲ್ಲು ಮುಗುಳಖೋಡ, ರಾಕೇಶ ಢವಳೇಶ್ವರ ಇದ್ದರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …