Breaking News
Home / ಮೂಡಲಗಿ / ತಾಲೂಕಾ ಉದಯೋನ್ಮುಖ ಪತ್ರಕರ್ತ ಮಲ್ಲು ಬೋಳನವರ ದಶಮಾನೋತ್ಸವ

ತಾಲೂಕಾ ಉದಯೋನ್ಮುಖ ಪತ್ರಕರ್ತ ಮಲ್ಲು ಬೋಳನವರ ದಶಮಾನೋತ್ಸವ

Spread the love

ಮೂಡಲಗಿ : ಅದ್ಭುತವಾದ ಪತ್ರಿಕಾರಂಗ ಕ್ಷೇತ್ರದಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸಿ 11 ವರ್ಷಕ್ಕೆ ಪಾದರ್ಪಣೆ ಮಾಡಿರುವ ಮೂಡಲಗಿ ತಾಲೂಕಾ ಉದಯೋನ್ಮುಖ ಪತ್ರಕರ್ತ ಮಲ್ಲು ಬೋಳನವರ ಅವರ ಪತ್ರಿಕಾರಂಗದ ದಶಮಾನೋತ್ಸವ ಹಾಗೂ ಪರಿಸರ ಪ್ರೇಮಿಯಾದ ಈರಪ್ಪ ಢವಳೇಶ್ವರ ಅವರ ಹುಟ್ಟು ಹಬ್ಬವನ್ನು ಸರಳ ರೀತಿ ಆಚರಿಸಲಾಯಿತು.

ಶನಿವಾರದಂದು ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಪತ್ರಕರ್ತರಿಂದ ಮಲ್ಲು ಬೋಳನವಾರ, ಈರಪ್ಪ ಢವಳೇಶ್ವರ ಅವರಿಗೆ ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಅಲ್ತಾಫ್ ಹವಾಲ್ದಾರ, ಭೀಮಶಿ ತಳವಾರ, ಸುರೇಶ ಪಾಟೀಲ, ಭಗವಂತ ಉಪ್ಪಾರ, ಹಣಮಂತ ಕಂಕಣವಾಡಿ, ಯಾಕೋಬ ಸಣ್ಣಕ್ಕಿ ಹಾಗೂ ಅನೇಕರು ಉಪಸ್ಥಿತರಿದ್ದರು.

*ಮಲ್ಲು ಬೋಳನವರ ಅವರ ಕಿರು ಪರಿಚಯ :* ತಾಲೂಕಿನ ಹಳ್ಳೂರ ಗ್ರಾಮದಲ್ಲಿ 30/08/1993ರಲ್ಲಿ ಜನಿಸಿದರು. 2010ರಲ್ಲಿ ಹಾರೂಗೇರಿಯಲ್ಲಿ ತಮ್ಮ ಪದವಿ ಶಿಕ್ಷಣ ಕಲಿಯುವ ವೇಳೆ ವಾರ ಪತ್ರಿಕೆ ಮೂಲಕ ಪತ್ರಿಕಾರಂಗಕ್ಕೆ ಪ್ರವೇಶ ಮಾಡಿದರು. ನಂತರ ಹಂತ ಹಂತವಾಗಿ ಬೆಳಗಾವಿ ಜಿಲ್ಲಾ ವರದಿಗಾರರಾಗಿ ತಮ್ಮ ಸೇವೆ ಸಲ್ಲಿಸಿದರು.

ನಂತರ ಪ್ರಮುಖ ಸುದ್ದಿಗಳು ಹಾಗೂ ಸ್ಥಳೀಯ ಆಸಕ್ತಿದಾಯಕ ವಿಚಾರಗಳನ್ನು ಹೊತ್ತುಕೊಂಡು ಮೂಡಲಗಿ ತಾಲೂಕು ವಾರದಿಗಾರನ್ನಾಗಿ *”ಪ್ರಜಾವಾಹಿನಿ ದಿನ ಪತ್ರಿಕೆ ಹಾಗೂ ಕನ್ನಡ ಟುಡೆ ನ್ಯೂಸ್ ದಲ್ಲಿ, ವಿಜಯವಾಣಿ, ರಾಜ್ ನ್ಯೂಸ್ (ಟಿವಿ)”* ಗಳಲ್ಲಿ ಅವರ ವರದಿಗಳು ಸಮಾಜದ ಅಂಕು-ಡೊಂಕುಗಳ ಕೈಗನ್ನಡಿಯಾಗಿ ಸಮಾಜದ ಎಲ್ಲ ಆಗು-ಹೋಗುಗಳ ಬಗ್ಗೆ ಸ್ಪಷ್ಟ ಬೆಳಕನ್ನು ಚೆಲ್ಲುವ ಮೂಲಕ ಸಮಾಜ ಸುಧಾರಣೆಯಲ್ಲಿ ನನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸುತ್ತಿದ್ದಾರೆ.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …