Breaking News

ಗುರ್ಲಾಪೂರ-ಮೂಡಲಗಿ ರಸ್ತೆ ಕಾಮಗಾರಿ ಎರಡು ತಿಂಗಳೊಳಗೆ ಪೂರ್ಣ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love


ಮೂಡಲಗಿ : ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದ್ದ ಗುರ್ಲಾಪೂರದಿಂದ ಮೂಡಲಗಿವರೆಗಿನ ರಸ್ತೆ ಕಾಮಗಾರಿಯು ಎರಡು ತಿಂಗಳೊಳಗೆ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಪಟ್ಟಣದ ಹೊರವಲಯದ ಗುರ್ಲಾಪೂರ ಕ್ರಾಸ್ ಬಳಿ ಕರ್ನಾಟಕ ನೀರಾವರಿ ನಿಗಮದ ಅನುದಾನದಡಿ 4.90 ಕೋಟಿ ರೂ. ವೆಚ್ಚದಲ್ಲಿ ಗುರ್ಲಾಪೂರ ಕ್ರಾಸ್‍ದಿಂದ ಮೂಡಲಗಿವರೆಗಿನ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೂಡಲಗಿ ಪಟ್ಟಣಕ್ಕೆ ಜನ ಸಂಚಾರಕ್ಕೆ ಅನುಕೂಲವಾಗಲು ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮೂಡಲಗಿ ಪಟ್ಟಣದ ಸರ್ವಾಂಗೀಣ ಪ್ರಗತಿಗಾಗಿ ಮತ್ತು ಸುಂದರ ನಗರವನ್ನಾಗಿಸಲು ಸರ್ಕಾರದ ವಿವಿಧ ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸುಗಮ ಸಂಚಾರದ ಹಿನ್ನೆಲೆಯಲ್ಲಿ ರಸ್ತೆಗಳನ್ನು ದುರಸ್ತಿಗೊಳಿಸಲಾಗುತ್ತಿದೆ. ನಾಗರೀಕರಿಗೆ ಅಗತ್ಯವಿರುವ 2.80 ಕಿ.ಮೀ ಉದ್ದದ ಗುರ್ಲಾಪೂರ-ಮೂಡಲಗಿ ರಸ್ತೆಯನ್ನು ಕೈಗೆತ್ತಿಕೊಂಡಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಕಾಲೇಜು ರಸ್ತೆಯವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ. ಮುಖ್ಯ ರಸ್ತೆಯಿಂದ ತಹಶೀಲ್ದಾರ ಕಛೇರಿವರೆಗಿನ ರಸ್ತೆಯನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಗುರ್ಲಾಪೂರ ಕ್ರಾಸ್ ಬಳಿ ನೀರಾವರಿ ಇಲಾಖೆಯಿಂದ ಸುಸಜ್ಜಿತ ಪ್ರವಾಸಿ ಮಂದಿರವನ್ನು ನಿರ್ಮಿಸಲು ಉದ್ಧೇಶಿಸಲಾಗಿದ್ದು, ಇದಕ್ಕಾಗಿ 4.45 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಇದರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮುಖಂಡರಾದ ನಿಂಗಪ್ಪ ಫಿರೋಜಿ, ರವೀಂದ್ರ ಸೋನವಾಲ್ಕರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ಪುರಸಭೆ ಮಾಜಿ ಅಧ್ಯಕ್ಷರಾದ ರಾಮಣ್ಣಾ ಹಂದಿಗುಂದ, ರವಿ ಸಣ್ಣಕ್ಕಿ, ಪ್ರಮುಖರಾದ ಅಜೀಜ ಡಾಂಗೆ, ಮಲ್ಲು ಢವಳೇಶ್ವರ, ಡಾ. ಎಸ್.ಎಸ್. ಪಾಟೀಲ, ಅನ್ವರ ನದಾಫ, ಸಿದ್ದು ಗಡೇಕರ, ಪ್ರಕಾಶ ಮುಗಳಖೋಡ, ಮಲೀಕ ಹುಣಶ್ಯಾಳ, ಮಹಾದೇವ ರಂಗಾಪೂರ, ಪುರಸಭೆ ಸದಸ್ಯರಾದ ಆನಂದ ಟಪಾಲ, ಶಿವು ಚಂಡಕಿ, ಅಬ್ದುಲಗಫಾರ ಡಾಂಗೆ, ಹುಸೇನಸಾಬ ಶೇಖ, ಸುಭಾಸ ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಸತ್ತೆವ್ವ ಅರಮನಿ, ಜಿಎಲ್‍ಬಿಸಿ, ಕಂಕಣವಾಡಿ ಉಪವಿಭಾಗದ ಸಹಾಯಕ ಅಭಿಯಂತರ ವಿನೋದ, ಗುತ್ತಿಗೆದಾರ ಬಸವರಾಜ ಗಂಗರಡ್ಡಿ, ಗುರ್ಲಾಪೂರ-ಮೂಡಲಗಿ ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
ಕೋಟ್ : ಕಳೆದೊಂದು ವಾರದಿಂದ ನಿರಂತರ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಣ್ಣಸಣ್ಣ ಸೇತುವೆಗಳು ಜಲಾವೃತಗೊಂಡಿವೆ. ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳ ನೀರು ಹೆಚ್ಚಾಗಿ ಬರುತ್ತಿದ್ದರಿಂದ ನದಿ ತೀರದ ಗ್ರಾಮಗಳ ಜನರು ಸುರಕ್ಷಿತರಾಗಿರಬೇಕು. ಪ್ರವಾಹ ಭೀತಿಯನ್ನು ಎದುರಿಸಲಿಕ್ಕೆ ನಾವೆಲ್ಲ ಸನ್ನದ್ಧರಾಗಿದ್ದೇವೆ. ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು.
ಬಾಲಚಂದ್ರ ಜಾರಕಿಹೊಳಿ, ಶಾಸಕ.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …