Breaking News

ಶ್ರೀ ಶಿವಲಿಂಗೇಶ್ವರ ನಗರ ಹಾಗೂ ಗ್ರಾಮೀಣ ಸಮಗ್ರ ಅಭಿವೃದ್ದಿ ಸಂಸ್ಥೆಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

Spread the love

 

ಮೂಡಲಗಿ : ರಾಜ್ಯದಲ್ಲಿ ಎಲ್ಲೆಡೆ ಕೋರೊನಾ ಅಟ್ಟಹಾಸದ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸುವಂತ ವಾರಿಯರ್ಸ್‍ಗಳಿಗೆ ದಿನಸಿ ಸಾಮಗ್ರಿಗಳ ಆಹಾರ ಕಿಟ್‍ಗಳನ್ನು ನೀಡುತ್ತಿರುವ ಶ್ರೀ ಶಿವಲಿಂಗೇಶ್ವರ ನಗರ ಹಾಗೂ ಗ್ರಾಮೀಣ ಸಮಗ್ರ ಅಭಿವೃದ್ದಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಗ್ರಾಮದ ಮುಖಂಡ ಎಸ್.ಬಿ.ಗುದಗನ್ನವರ ಹೇಳಿದರು.
ಸಮೀಪದ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಿವಲಿಂಗೇಶ್ವರ ನಗರ ಹಾಗೂ ಗ್ರಾಮೀಣ ಸಮಗ್ರ ಅಭಿವೃದ್ದಿ ಸಂಸ್ಥೆಯಿಂದ ಹಮ್ಮಿಕೊಂಡಿದರುವ ವಾರಿಯರ್ಸ್‍ಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರಿಗೆ, ಪತ್ರಕರ್ತರಿಗೆ, ನಿರ್ಗತಿಕರಿಗೆ, ಆಹಾರ ಕಿಟ್ ನೀಡಿ ಅವರಿಗೆ ಮತ್ತಷ್ಟು ಕೆಲಸ ಮಾಡಲು ಧೈರ್ಯ ತುಂಬವಂತ ಕಾರ್ಯ ಮಾಡುವುದು ಒಳ್ಳೆಯ ಸಂಗತಿಯಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸಲಿಂಗಪ್ಪ ನಿಂಗನೂರ ಮಾತನಾಡಿ, ಕೋವಿಡ್ ಅಟ್ಟಹಾಸದಿಂದ ಜನ ಸಾಮಾನ್ಯರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಸ್ಥೆಯಿಂದ ಜಾಗೃತಿ ಮೂಡಿಸುವಂತ ಪತ್ರಕರ್ತರಿಗೆ ಹಾಗೂ ಮನೆಮನೆ ಭೇಟಿ ಜನರ ಆರೋಗ್ಯ ವಿಚಾರ ಮಾಡುವ ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮದಲ್ಲಿ ನಿರ್ಗತಿಕರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸಿದ್ದಪ್ಪ ದುರದುಂಡಿ ಮಾತನಾಡಿ ದಾನಗಳಲ್ಲಿ ಅನ್ನದಾನ ಶ್ರೇಷ್ಠ ಇಂತಹ ಅನ್ನದಾನಗಳಲ್ಲಿ ಆಹಾರ ಸಾಮಗ್ರಿ ಹಾಗೂ ದಿನಸಿ ಸಾಮಗ್ರಿಗಳ ಕಿಟ್ ವಿತರಿಸುತ್ತಿರುವುದರಿಂದ ಇವರ ಹಿರಿಮೆ ನಮ್ಮೆಲ್ಲರಿಗೆ ಆಶಾದಾಯಕವಲ್ಲದೇ ಇವರ ಪ್ರವೃತಿ ಶ್ರೇಷ್ಠವಾದದು. ಹಾಗೂ ಯಾವುದೇ ಸಭೆ ಸಮಾರಂಭಗಳಲ್ಲಿ ಅವರ ಒಂದು ಸಹಕಾರ ನಮ್ಮೆಲ್ಲರಿಗೆ ಆದರ್ಶ ಮಾರ್ಗವಾಗಿದೆ ಎಂದರು.
ವಿತರಣಾ ಕಾರ್ಯಕ್ರಮದಲ್ಲಿ ಮುಖಂಡರಾದ ಚೇತನ ರಡೇರಟ್ಟಿ, ಗೋಪಾಲ ನಿಂಗನೂರ, ಶಿವಬಸು ತುಪ್ಪದ, ಕೃಷ್ಣಾ ಕಂಬಾರ, ಅಡಿವೆಪ್ಪ ಲಂಗೋಟಿ, ಶಿವಪ್ಪ ಜೋಡಟ್ಟಿ, ಶಿವನಪ್ಪ ತುಪ್ಪದ, ಮಹಾಲಿಂಗಯ್ಯ ಪೂಜೇರಿ, ಪರಯ್ಯಾ ಮಹಾಲಿಂಗಪುರ, ಮಹಾಂತೇಶ ರಡೇರಟ್ಟಿ, ವಿಠ್ಠಲ ಮೆಳವಂಕಿ, ರಾಜು ಸೋನಾರ, ಶ್ರೀಶೈಲ ತುಪ್ಪದ, ಮಾರುತಿ ಉದ್ದನ್ನವರ, ಪ್ರಕಾಶ ಅಂಬಾಜಿಗೋಳ, ಹಾಗೂ ಕಾರ್ಯಕರ್ತರು, ಪತ್ರಕರ್ತರು ಇದ್ದರು.
.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …