Breaking News
Home / ಮೂಡಲಗಿ / ಜಯ ಕರ್ನಾಟಕ ಜನರಪ ವೇದಿಕೆ ವತಿಯಿಂದ ವೈದ್ಯ ಹಾಗೂ ಪತ್ರಕರ್ತರ ದಿನಾಚಾರಣೆ

ಜಯ ಕರ್ನಾಟಕ ಜನರಪ ವೇದಿಕೆ ವತಿಯಿಂದ ವೈದ್ಯ ಹಾಗೂ ಪತ್ರಕರ್ತರ ದಿನಾಚಾರಣೆ

Spread the love


ಮೂಡಲಗಿ: ವೈದ್ಯರು ವೃತ್ತಿಬದ್ಧತೆ ಮೈಗೂಡಿಸಿಕೊಂಡು ಹಲವು ಸವಾಲುಗಳನ್ನು ಎದುರಿಸಿ, ಹಲವಾರು ಜೀವ ಉಳಿಸಿ ಜನರ ಮನದಲ್ಲಿ ದೇವರೆನಿಸಿಕೊಂಡಿದ್ದಾರೆ ಹಾಗೂ ಪತ್ರಕರ್ತರು ಸಹ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರರಾಗಿದ್ದಾರೆ ಎಂದು ಜಯ ಕರ್ನಾಟಕ ಜನರಪ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚ್ಚರಡ್ಡಿ ಹೇಳಿದರು.
ಮೂಡಲಗಿ ತಾಲೂಕಾ ಜಯ ಕರ್ನಾಟಕ ಜನಪರ ವೇದಿಕೆಯಿಂದ ಪಟ್ಟಣದ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜ ಸಭಾಂಗಣದಲ್ಲಿ ಶುಕ್ರವಾರರಂದು ಜರುಗಿದ ವೈದ್ಯ ಹಾಗೂ ಪತ್ರಕರ್ತರ ದಿನಾಚಾರಣೆಯ ನಿಮಿತ್ಯ ವೈದ್ಯರಿಗೆ ಮತ್ತು ಪತ್ರಕರ್ತರಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಕೊರೋನಾ ಸಂಕಷ್ಟದಲ್ಲಿ ತಮ್ಮ ಜೀವದ ಹಂಗು ತೊರೆದು ಸೋಂಕಿತರ ಪ್ರಾಣ ಉಳಿಸುವ ಏಕೈಕ ಗುರಿಯೊಂದಿಗೆ ಸಮಯ ನಿಗಧಿ ಇಲ್ಲದೆ ಮಾಡಿರುವ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಆದರೆ ಕೆಲವು ಸಂದರ್ಭಗಳಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದಿರುವುದು ವಿಷಾದಕರ ಸಂಗತಿಯಾಗಿದೆ. ಜನರು ದೇವರನ್ನು ಹೇಗೆ ಪೂಜಿಸುತ್ತಾರೋ ಹಾಗೆ ಇಂದಿನ ದಿನಮಾನಗಳಲ್ಲಿ ವೈದ್ಯರನ್ನು ಪೂಜಿಸುವಂತಾಗಿದೆ ಎಂದರು.


ವೈದ್ಯ ಎಸ್ ಎಸ್ ಪಾಟೀಲ ಮಾತನಾಡಿ, ಸಮಾಜ ಸೇವೆಯಾಗಿ ಜನರ ಜೀವ ಉಳಿಸು ಆರೋಗ್ಯ ಕ್ಷೇತ್ರದ ಆಸ್ಪತ್ರೆಗಳ ನಡುವೆ ಪೈಪೋಟಿ ಹೆಚ್ಚಾಗಿ ಇಂದು ವ್ಯಾವಹಾರಿಕ ಕ್ಷೇತ್ರವಾಗಿದೆ. ಓರ್ವ ವೈದ್ಯರ ಅಭಿಪ್ರಾಯಕ್ಕೂ ಮತ್ತೊರ್ವ ವೈದ್ಯರ ಅಭಿಪ್ರಾಯಕ್ಕೂ ಭಿನ್ನತೆ ಇರುವುದರಿಂದ ರೋಗಿಗಳಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಆಸ್ಪತ್ರೆಗಳು ವ್ಯಾವಹಾರಿಕ ಕೇಂದ್ರಗಳಾದಂತೆ ನೋಡಿಕೊಂಡು ಬಡವರ ಕುರಿತಾದ ವಾಸ್ತದ ಅರಿವು ಬರಬೇಕು ಆಗ ಮಾತ್ರ ಆರೋಗ್ಯ ಕ್ಷೇತ್ರವೂ ಆರೋಗ್ಯ ಪೂರ್ಣವಾಗಿರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಕರ್ತ ಮಲ್ಲು ಬೋಳನವರ ಮಾತನಾಡಿ, ಪತ್ರಿಕೆಗಳು ಸಮಾಜಕ್ಕೆ ಆಲಾರಂನಂತೆ ಕಾರ್ಯ ನಿರ್ವಹಿಸುತ್ತವೆ, ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುವಂತ ಕಾರ್ಯ ಮಾಡಿತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜಾಗೃತಿ ಮೂಡಿಸುವಂತ ಜವಾಬ್ಧಾರಿಯನ್ನು ಪತ್ರಕರ್ತರೇ ನಿರ್ವಹಿಸಿದ್ದಾರೆ ಎಂದರು.
ವೈದ್ಯದರಾದ ಭಾರತಿ ಕೋಣ , ಸಂದೀಪ ಕನಕರಡ್ಡಿ, ಸಂಜಯ ಶಿಂಧಿಹಟ್ಟಿ, ಮಾತನಾಡಿ, ಸಂಘಟನೆಗಳು ಹೋರಾಟ, ಸಭೆ-ಸಮಾರಂಭಗಳನ್ನು ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಶಿವನಗೌಡ ಪಾಟೀಲ, ಅಪ್ಪಸಾಬ ನಧಾಪ್, ರೇಖಾ ನಾವಿ, ರುಕ್ಮವ್ವ ದಳವಾಯಿ, ಮುತ್ತು ಧಾರವಾಡ, ಹಣಮಂತ ಶಾಂತಗಿರಿ, ರವಿ ಧಾರವಾಡ ಹಾಗೂ ಪತ್ರಕರ್ತರು ಇದ್ದರು.


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …