Breaking News
Home / ಮೂಡಲಗಿ / ಹೋಲ್ ಸೇಲ್ ಫರ್ಟಿಲೈಜರ್ಸ್ ಡೀಲರಗಳು ಕೆಲವು ರಸಗೊಬ್ಬರಗಳ ಜೊತೆಗೆ ಲಿಂಕ್‍ ರೈತರಿಗೆ ಮತ್ತಷ್ಟೋ ದರ ದುಭಾರಿ : ಲಖನ್ ಸವಸುದ್ದಿ

ಹೋಲ್ ಸೇಲ್ ಫರ್ಟಿಲೈಜರ್ಸ್ ಡೀಲರಗಳು ಕೆಲವು ರಸಗೊಬ್ಬರಗಳ ಜೊತೆಗೆ ಲಿಂಕ್‍ ರೈತರಿಗೆ ಮತ್ತಷ್ಟೋ ದರ ದುಭಾರಿ : ಲಖನ್ ಸವಸುದ್ದಿ

Spread the love

ಮೂಡಲಗಿ : ರಾಯಬಾಗ ತಾಲೂಕಿನ ಮಲ್ಟಿ ಸ್ಟೇಟ್ ಕೃಷ್ಣಾ ಗೋದಾವರಿ ಸೊಸಾಯಿಟಿ ಹಾಗೂ ಘಟಪ್ರಭಾ ಫರ್ಟಿಲೈಜರ್ಸ್ ಪ್ರೈ ಲಿಮಿಟೆಡ್ ಮತ್ತು ಹೋಲ್ ಸೇಲ್ ಫರ್ಟಿಲೈಜರ್ಸ್ ಡೀಲರಗಳಾದ ರಾಯಬಾಗ ತಾಲೂಕಿನ ನಂದಿಕುರಳಿ, ಹುಬ್ಬರವಾಡಿದಲ್ಲಿ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ರೈತರ ಬಿತ್ತನೆ ವೇಳೆಯಲ್ಲಿ ರಸಗೊಬ್ಬರಗಳ ಅಭಾವ ಸೃಷ್ಠಿ ಮಾಡಿ ರೈತರಲ್ಲಿ ಗೊಂದಲ್ಲ ಸೃಷ್ಠಿಸಿ ಹೆಚ್ಚಿನ ದರದಲ್ಲಿ ಮಾರಾಟವ ದಂಧೆಯಲ್ಲಿ ಡೀಲರಗಳು ತೊಡಗಿಕೊಂಡಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಲಖನ್ ಸವಸುದ್ದಿ ಆರೋಪಿಸಿದರು.

ಶುಕ್ರವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಲ್ ಸೇಲ್ ಫರ್ಟಿಲೈಜರ್ಸ್ ಡೀಲರಗಳು ಕೆಲವು ರಸಗೊಬ್ಬರಗಳ ಜೊತೆಗೆ ಇತರೆ ಲಿಂಕ್‍ಗಳನ್ನು ನೀಡುತ್ತಿದ್ದು, ಇದರಿಂದ ರೈತರಿಗೆ ಮತ್ತಷ್ಟೋ ದರ ದುಭಾರಿಯಾಗಿದೆ. ಯೂರಿಯಾ ಜೊತೆಗೆ ಲಿಂಕ್ ಎಂದು ರಸಗೊಬ್ಬರದ ದರಕಿಂತ ಹೆಚ್ಚಿನ ದರವಾಗಿದ್ದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರಸಗೊಬ್ಬರ ಜೊತೆಗೆ ಲಿಂಕ್ ಮಾರಾಟ ಮಾಡುತ್ತಿರುವುದು ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಕಾಯಕವನ್ನು ಡೀಲರ್ ಹಾಗೂ ಕೆಲವು ಕಂಪನಿ ಅಧಿಕಾರಿಗಳು ತೊಂಡಿಗಿಕೊಂಡಿದ್ದು ರೈತರನ್ನು ಸಂಕಷ್ಟಕ್ಕೆ ಸಿಲಿಕಿಸುವ ಸಂಚು ರೂಪಿಸುತ್ತಿದ್ದಾರೆ ಎಂದರು.

ಈ ಡೀಲರ್‍ಗಳಿಂದ ರಾಯಬಾಗ, ಗೋಕಾಕ, ಮೂಡಲಗಿ, ಅಥಣಿ ಮತ್ತು ಕಾಗವಾಡ ತಾಲೂಕಿನ ಅನೇಕ ರೈತರು ನಮ್ಮ ಗಮನಕ್ಕೆ ತಂದ ಕೂಡಲೇ ಸಮಗ್ರವಾಗಿ ದಾಖಲಾತಿ ಪಡೆದು ಈಗಾಗಲೇ ಕೃಷಿ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿ, ಜಂಟಿ ನಿರ್ದೇಶರಿಗೆ ಈ ದಂಧೆಯ ಬಗ್ಗೆ ತನಿಖೆ ಮಾಡಿ ಲಿಂಕ್ ಯಾವ ಕಾರಣಕ್ಕಾಗಿ ನೀಡುತ್ತಾರೆ ಹಾಗೂ ಅದು ಕೃಷಿ ಇಲಾಖೆಯಲ್ಲಿ ಅನುಮೋದನೆಯಾಗಿದೆಯಾ ಎಂದು ಪರೀಶಿಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ಭೇಟಿಯಾಗಿ ದಾಖಲೆ ಸಹಿತ ದೂರ ನೀಡಿದರು ಇಲ್ಲಿಯವರೆಗೂ ಯಾವುದೇ ಪ್ರಯೋಜನೆವಾಗಿಲ್ಲ. ಆದರಿಂದ ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಡೀಲರ್ ಹಾಗೂ ದಂಧೆಯಲ್ಲಿ ಭಾಗಿಯಾದ ಕಂಪನಿ ಅಧಿಕಾರಿಗಳ ವಿರುದ್ದ ಕ್ರಮಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಂಡಬೇಕೆಂದು ಆಗ್ರಹಿಸಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೇ ಹೋದಲ್ಲಿ ಎಲ್ಲ ದಾಖಲಾತಿಗಳನ್ನು ಬೆಂಗಳೂರಿನ ಲೋಕಾಯುಕ್ತರಿಗೆ ದೂರ ನೀಡಬೇಕಾಗುತ್ತದೆ ಆದರಿಂದ ಶೀಘ್ರವಾಗಿ ತನಿಖೆ ಕೈಗೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಸುಭಾಷ ಲೋಕನ್ನವರ, ರೈತ ಮುಖಂಡ ಹಣಮಂತ ಮುಗಳಖೋಡ ಇದ್ದರು.


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *