Breaking News
Home / ಮೂಡಲಗಿ / ಏ.2ರಿಂದ 12ರವರಿಗೆ ಯಾದವಾಡಲ್ಲಿ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾಮಹೋತ್ಸವ ಜರುಗಲಿದೆ:ಶಿವಪ್ಪಗೌಡ ನ್ಯಾಯನಗೌಡರ

ಏ.2ರಿಂದ 12ರವರಿಗೆ ಯಾದವಾಡಲ್ಲಿ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾಮಹೋತ್ಸವ ಜರುಗಲಿದೆ:ಶಿವಪ್ಪಗೌಡ ನ್ಯಾಯನಗೌಡರ

Spread the love

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಯಾದವಾಡ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮೀತಿ ಆಶ್ರಯದಲ್ಲಿ ಏ.2 ರಿಂದ ಏ.12 ರವರಿಗೆ ವಿವಿಧ ಧಾರ್ಮಿಕ ಮತ್ತು ಗ್ರಾಮೀನ ಭಾಗದ ಸ್ಪರ್ಧೆಗಳು ಹಾಗೂ ಜಾನುವಾರಗಳ ಜಾತ್ರೆಯೊಂದಿಗೆ ಹನ್ನೋಂದು ದಿನಗಳ ಕಾಲ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಜಾತ್ರಾಮಹೋತ್ಸವ ಶ್ರೀ ಶಿವಯೋಗಿದೇವರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ಶಿವಪ್ಪಗೌಡ ಬ.ನ್ಯಾಮಗೌಡರ ಹೇಳಿದರು
ಅವರು ಶನಿವಾರಂದು ಯಾದವಾಡದಲ್ಲಿ ಜಾತ್ರಾಮಹೋತ್ಸವದ ಆಮಂತ್ರನ ಪತ್ರಿಕೆಯನ್ನು ಬಿಡುಗಡೆಗೋಳಿಸಿ ಮಾತನಾಡಿ, ಎ.2ರಂದು ಮುಂ 7ಗಂಟೆಗೆ ವರಗುರುವರೇಣ್ಯ ಚೌಕೇಶ್ವರ ಶಿವಯೋಇಗಳವರ ಕರ್ತ್ರು ಗದ್ದುಗೆಗೆ ಮಹಾರುದ್ರಾಭೀಷೇಕ ಮತ್ತು ರಾತ್ರಿ 8ಕ್ಕೆ ನಾಲ್ಕು ದಿನಗಳವರಿಗೆ ಸಕಲ ವಾದ್ಯ ವೈಭವಗಳೊಂದಿಗೆ ವಾಹನೋತ್ಸವ ಜರುಗುವುದು.
ಎ.3 ರಂದು ಮುಂಜಾನೆ ಶ್ರೀ ಈಶ್ವರ ದೇವರ ಹಾಗೂ ಘಟ್ಟಗಿ ಬಸವೇಶ್ವರ ಮಹಾಮಸ್ತಕಾಭಿಷೇಕ, ಜಲ ಸಂಶೋಧಕ ಶ್ರೀ ಈರಯ್ಯಾ ಸ್ವಾಮಿಗಳ ವೇದಘೋಷದೊಂದಿಗೆ 108 ಬಿಲ್ವಾರ್ಚನೆ ಹಾಗೂ ಪುಷ್ಫಾರ್ಚನೆ ಸದ್ಭಕ್ತರಿಂದ ಜರುಗುವುದು. ಏ.4 ಮುಂಜಾಣೆ ಗ್ರಾಮದ ಅದಿದೇವತೆಯಾದ ಶ್ರೀ ಹೊನ್ನಮ್ಮ ದೇವಿಯ ಉಡಿತುಂಬುವುದು. ಏ.5ರಂದು ಮುಂ 10ಕ್ಕೆ ಶ್ರೀ ಚೌಕೇಶ್ವರ ಮಠದಲ್ಲಿ ಕಳಸ ಪೂಜೆ ರಾತ್ರಿ 9 ಕ್ಕೆ ಶ್ರೀ ಚೌಕೇಶ್ವರ ಶೀವಯೋಗಿಗಳ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ರಥದ ಕಳಸಾರೋಹಣ ಸಕಲ ವಾಧ್ಯ ವೈಭವಗಳೊಂದಿಗೆ ಜರುಗುವುದು.
ಎ.6 ರಂದು ಸಂಜೆ 5 ಗಂಟೆಗೆ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಮಹಾರಥೋತ್ಸವ ಜರುಗುವುದು.
ಎ.7ರಂದು ಸಂಜೆ ಟಗರಿನ ಕಾಳಗ ಸ್ಪರ್ಧೆ, ಎ.8 ರಂದು ತೆರೆ ಬಂಡಿ ಸ್ಪರ್ದೇ, ಎ.9 ರಂದು ಒಂದು ನಿಮಿಷದ ಬಂಡಿ ಸ್ಫರ್ಧೆ, ಎ.11 ರಂದು ಮುಂಜಾಣೆ 9 ಕ್ಕೆ ದನಗಳ ಪಾಸ ಬರೆದುಕೊಳ್ಳುವುದು ಮತ್ತು ಸಂಜೆ ಪಾಸದ ದನಗಳ ಭಕ್ಷಿಸ ಕೊಡಲಾಗುವುದು ಅಂದು ನಿಕಾಲಿ ಜಂಗಿ ಕುಸ್ತಿ ಜರುಗುವುದು. ಏ.11 ರಂದು ಮುಂಜಾಣೆ ಕೂಡು ಗಾಡಿ ಬಂಡಿ ಸ್ಪರ್ಧೆ ಮತ್ತು ಜೋಡು ಕುದುರೆ ಬಂಡಿ ಸ್ಪರ್ಧೆ ಹಾಗೂ ಒಂದು ಎತ್ತಿನ ಕಲ್ಲು ಜಗ್ಗಿಸುವ ಸ್ಪರ್ಧೆಗಳು ಜರುಗುವವು. ಎ.12 ರಂದು ಸಂಜೆ ಶ್ರೀ ಶಿವಯೋಗಿ ದೇವರು ಸಾನ್ನಿಧ್ಯದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮಜರುಗಲಿದೆ ಎಂದು ಶಿವಪ್ಪಗೌಡ ನ್ಯಾಮಗೌಡರ ತಿಳಿಸಿದರು.
ಈ ಸಮಯದಲ್ಲಿ ಜಾತ್ರ ಕಮೀಟಿ ಯ ಸದಸ್ಯರಾದ ರಮೇಶ ಸಾವಳಗಿ, ಹನಂತ ಚಿಕ್ಕೇಗೌಡರ, ಚನ್ನಪ್ಪ ಕೆಂಜೋಳ, ಗೋಲಪ್ಪ ಕಾಗವಾಡ, ಮಹಾದೇವ ಶೆಟ್ಟರ, ಹನಮಂತ ಹ್ಯಾಗಾಡಿ, ಯಲ್ಲಪ್ಪ ಕನಾಳೆ, ಸುನೀಲ ನ್ಯಾಮಗೌಡರ, ಕಲ್ಮೇಶ ಗಾಣಗಿ, ಬಸಯ್ಯ ವಿಭೂತಿ, ಈರಣ್ಣ ಅರಕೇರಿ, ರಾಘು ಕೊಲ್ಲಾಪೂರ,ಮಲ್ಲಪ್ಪ ತಟ್ಟಿನ, ದುಂಡಪ್ಪ ಮೂಲಿಮನಿ, ಬಸವರಾಜ ಕೆಂಜೋಳ,ನವೀನ ಹುಂಡೇಕಾರ, ವಿನಾಐಕ ಕುಂಬಾರ, ಹರೀಶ ದೇಶಪಾಂಡೆ, ಸಂಜು ಮೂಲಿಮನಿ ಮತ್ತಿತರರು ಇದ್ದರು.


Spread the love

About Ad9 Haberleri

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ- ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್

Spread the loveಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ *ಮೂಡಲಗಿ*: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು …

Leave a Reply

Your email address will not be published. Required fields are marked *