ಆಕ್ಷಿಮೀಟರ್ ಸಹಿತ ಮಾತ್ರೆಗಳು, ಇಂಜೆಕ್ಷನ್, ಸಲಾಯನ್, ಮಾಸ್ಕ್, ಸಾನಿಟೈಸರ್ ಸಹಿತ ಉಪಯುಕ್ತ ಸಲಕರಣೆಗಳ ಹಸ್ತಾಂತರ
ಬಾಲಚಂದ್ರ ಅವರು ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ
ಮೂಡಲಗಿ: ಕೊರೋನಾ ಎರಡನೇ ಅಲೆಗೆ ಬ್ರೇಕ್ ನೀಡಲು ಸಂಕಲ್ಪ ತೊಟ್ಟಿರುವ ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕಿನ ಸೋಂಕಿತರಿಗೆ ಔಷಧೀಯ ಕಿಟ್ ಗಳನ್ನು ವಿತರಿಸಲಾಯಿತು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕೊವಿಡ್ ಕಾಳಜಿ ಕೇಂದ್ರದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋಕಾಕ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ ಅವರು, ಸೋಂಕಿತರಿಗೆ ಅಗತ್ಯವಿರುವ ಔಷಧ ಕಿಟ್ಗಳನ್ನು ವಿತರಿಸುತ್ತಿರುವ ಶಾಸಕರ ಮಾನವೀಯತೆ ಮೆಚ್ಚುವಂತದ್ದು. ಈಗಾಗಲೇ ಅವಳಿ ತಾಲ್ಲೂಕಿನಲ್ಲಿ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ತೆರೆದು ಸ್ವಂತ ವೆಚ್ಚದಲ್ಲಿ ಆಕ್ಸಿಜನ್ ನೀಡುತ್ತಿದ್ದಾರೆ. ಗೋಕಾಕ್, ಮಲ್ಲಾಪೂರ.ಪಿ.ಜಿ. ಮೂಡಲಗಿ ಮತ್ತು ಯಾದವಾಡ ದಲ್ಲಿ ಅನುಕೂಲ ಕಲ್ಪಿಸಿಕೊಟ್ಟು ಪ್ರತಿ ಹಂತದಲ್ಲಿಯೂ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಮಾಡುತ್ತಿದ್ದಾರೆ. ಸೋಂಕಿತರಿಗೆ ಅಗತ್ಯವಾದ ಎಲ್ಲ ಬಗೆಯ ವಸ್ತುಗಳನ್ನು ನೀಡುತ್ತ, ಅವರ ಆರೈಕೆಗಾಗಿ ತಮ್ಮ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಇμÉ್ಟೂಂದು ಕಾಳಜಿ ಮಾಡುತ್ತಿರುವ ಅಪರೂಪದ ಶಾಸಕರು ಎಂದು ಹೇಳಿದರು.
ಹಿರಿಯ ತಜ್ಞ ವೈದ್ಯ ಡಾ. ಆರ್. ಎಸ್. ಬೆಂಚಿನಮರಡಿ ಮಾತನಾಡಿ, ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬಂದರೆ ಅಪಾಯಕಾರಿ ಆಗಬಹುದು. ಭಾರೀ ವೇಗದಲ್ಲಿ ಕೊರೋನಾ ಎರಡನೇ ಅಲೆ ಬೀಸುತ್ತಿದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮ ಕುಟುಂಬದ ಸದಸ್ಯರಕ್ಕಿಂತ ನಮ್ಮ ಹೆಮ್ಮೆಯ ಶಾಸಕರು ತಮ್ಮ ಆರೋಗ್ಯದ ಬಗ್ಗೆ ನೀಗಾ ಇಡುತ್ತಿದ್ದಾರೆ. ಅವಳಿ ತಾಲ್ಲೂಕಿನ ಜನರು ಸುರಕ್ಷಿತವಾಗಿ ಇರಬೇಕೆಂಬುದು ಅವರ ಆಶಯವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಕೊರೋನಾ ನಿಯಂತ್ರಣ ಸಾಧಿಸಲು ಎಲ್ಲರೂ ಬೆನ್ನೆಲುಬಾಗಿ ನಿಲ್ಲುವಂತೆ ಅವರು ಮನವಿ ಮಾಡಿಕೊಂಡರು.
ಬಿಇಓ ಎ.ಸಿ.ಮನ್ನಿಕೇರಿ, ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣಾ ಹಂದಿಗುಂದ, ಉಪ ತಹಶಿಲ್ದಾರ ಶಿವಾನಂದ ಬಬಲಿ, ಡಾ. ಭಾರತಿ ಕೋಣ , ಸಿಪಿಐ ವೆಂಕಟೇಶ ಮುರನಾಳ, ಸಬ್ ಇನ್ಸ್ ಪೆಕ್ಟರ್ ಹಾಲಪ್ಪ ಬಾಲದಂಡಿ. ದಲಿತ ಮುಖಂಡ ಮರೆಪ್ಪ ಮರೆಪ್ಪಗೋಳ, ಮೂಡಲಗಿ ವ್ಯಾಪ್ತಿಯ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು, ಆಶಾ- ಅಂಗನವಾಡಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೋಟ್- ಜೀವ ರಕ್ಷಕ ಔಷಧಿ ಮತ್ತು ಕೊರೋನಾ ಸೋಂಕಿತರಿಗೆ ಹಾಗೂ ಕೊರೋನಾ ಕಾಳಜಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಅತಿ ಉಪಯುಕ್ತ, ದಿನ ನಿತ್ಯ ಔಷಧಿಗಳನ್ನು ಪೂರೈಸಲಾಯಿತು.
ಪಲ್ಸ್ ಆಕ್ಷಿಮೀಟರ್, ಸಾನಿಟೈಸರ್, ಎನ್- 95 ಮಾಸ್ಕ್ ಗಳು, ಗ್ಲೌಸ್, ಸರ್ಜಿಕಲ್ ಮಾಸ್ಕ್,
ಇಂಜೆಕ್ಷನ್ ಗಳಾದ ಟಾಕ್ಸಿಮ್, ಪಿಪೆÇ್ಜ, ಡೆಕ್ಸಾನ್, ಮಾತ್ರೆಗಳಾದ ಫಾಬಿಪೆÇ್ಲ, ಅಜೀಥ್ರೋಮೈಸಿನ್, ಐವರ್ ಮಸಿಟಿನ್,ಡೊಲೋ-650, ಝಿಂಕ್, ಇಕೋಸ್ಪ್ರೇನ್, ಐವಿ-100 ಎಂ.ಎಲ್. ಸಲಾಯನ್ ಗಳನ್ನು ವಿತರಿಸಲಾಯಿತು.