Breaking News
Home / ಮೂಡಲಗಿ / ನ.29 ರಂದು ಶ್ರೀ ಸಿದ್ಧಲಿಂಗ ಯತಿರಾಜರ ಮತ್ತು ಚಂಪಮ್ಮತಾಯಿಯವರ ಪುಣ್ಯಾರಾಧನೆ

ನ.29 ರಂದು ಶ್ರೀ ಸಿದ್ಧಲಿಂಗ ಯತಿರಾಜರ ಮತ್ತು ಚಂಪಮ್ಮತಾಯಿಯವರ ಪುಣ್ಯಾರಾಧನೆ

Spread the love


ಮೂಡಲಗಿ: ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಅಧಿಪತಿಗಳಾದ ಶ್ರೀ ನಿಜಗುಣದೇವರ ಗುರುಗಳಾದ ಸಿದ್ಧಿಪುರುಷ ಮಧುರಖಂಡಿಯ ಕಮರಿಮಠಾಧೀಶ ಶ್ರೀ ಸಿದ್ಧಲಿಂಗ ಯತಿರಾಜರ ಮತ್ತು ಮಾತೋಶ್ರೀ ಚಂಪಮ್ಮತಾಯಿಯವರ ಪುಣ್ಯಾರಾಧನೆ ಕಾರ್ಯಕ್ರಮವು ದಿ. 29 ರಂದು ಮುಂಜಾನೆ 9 ಗಂಟೆಗೆ ಶ್ರೀಮಠದಲ್ಲಿ ಜರುಗಲಿದೆ.
ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ ಕೃಪೆಯನ್ನು ಹೊಂದಿ ದೇವಿಯ ಅನುಗ್ರಹದಿಂದ ವಾಕಸಿದ್ಧಿ ಹಾಗೂ ಪವಾಡ ಪುರುಷರಾಗಿದ್ದ ಸಿದ್ಧಲಿಂಗ ಮಹಾರಾಜರು ಅನ್ನದಾಸೋಹ, ಜ್ಞಾನದಾಸೋಹ ನಡೆಸುತ್ತ ಮುಗಳಖೋಡದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರ ಜೊತೆ ಇಡೀ ಭಾರತ ದೇಶವನ್ನು ಕಾಲ್ನಡೆಗೆಯಲ್ಲಿ ಸಂಚರಿಸಿ ತೀರ್ಥಯಾತ್ರೆ ಮಾಡಿ ಭಕ್ತರಪಾಲಿಗೆ ಕಾಮಧೇನು ಕಲ್ಪವೃಕ್ಷ ಆಗಿದ್ದರು.
ಶ್ರೀಮಠದ ಅಧಿಪತಿ ನಿಜಗುಣ ದೇವರು ಪಾವನ ಸನ್ನಿಧಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಗಾಳೇಶ್ವರಮಠ ತೊಂಡಿಕಟ್ಟಿಯ ಪೂಜ್ಯ ಶ್ರೀ ಅಭಿನವ ವೆಂಕಟೇಶ ಮಹಾರಾಜರು ವಹಿಸುವರು. ಯರಝವರ್ಿಯ ಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮಿಜಿ, ಶಿರೋಳದ ಯಮುನಾನಂದ ಸ್ವಾಮಿಗಳು ಆಗಮಿಸುವರು. ಬೆಳಿಗ್ಗೆ ಗದ್ದುಗೆಗೆ ಮಹಾರುದ್ರಾಭಿಷೇಕ ಸುಮಂಗಲಿಯರ ಕಳಸ ಆರತಿ, ವಾದ್ಯ ವೈಭವದೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ, ಶಿವಾನುಭಾವ, ಬಸಪ್ಪ ಸೋಮನಟ್ಟಿ ಇವರಿಂದ ಅನ್ನದಾಸೋಹ ಜರುಗಲಿದೆ. ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಇವರಿಂದ ಸಂಗೀತ ಸೇವೆ, ಮಲ್ಲಪ್ಪ ಲಕ್ಷ್ಮೇಶ್ವರ ಇವರಿಂದ ಚಿಂತನ ಸೇವೆ ಜರುಗಲಿದೆ.
ಮಾತೋಶ್ರೀ ಚಂಪಮ್ಮತಾಯಿಯವರ ಪುಣ್ಯ ಸ್ಮರಣೋತ್ಸವ
ಸದ್ಗುರು ಸಿದ್ದಲಿಂಗ ಯತಿರಾಜರ ಶಿಷ್ಯರಾದ ಮುಧುರಖಂಡಿಯ ಮಾತೋಶ್ರೀ ಚಂಪಮ್ಮತಾಯಿಯವರು ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ದಿ.29 ಜರುಗಲಿದೆ.
ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅಭಿಷೇಕ, ಮಹಾತ್ಮರಿಂದ ಸಭೆ, ಭಜನಾ ಕಾರ್ಯಕ್ರಮ, ಮಹಾಪ್ರಸಾದ ಜರುಗಲಿದ್ದು ಭಕ್ತ ಸಮೂಹವು ಪಾಲ್ಗೊಳ್ಳಬೇಕೆಂದು ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ನಿಜಗುಣ ದೇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …

Leave a Reply

Your email address will not be published. Required fields are marked *