Breaking News

ಮೂಡಲಗಿಯಲ್ಲಿ ಶಿವಶರಣ ಮೇದಾರ ಕೇತಯ್ಯಾನವರ ೮೯೩ನೇ ಜಯಂತಿ ಆಚರಣೆ

Spread the love


ಮೂಡಲಗಿ: ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ ಶಿವಶರಣ ಮೇದಾರ ಕೇತಯ್ಯಾ ಅವರ ೮೯೩ನೇ ಜಯಂತಿಯನ್ನು ಮೂಡಲಗಿ ಪಟ್ಟಣದಲ್ಲಿ ಮೇದಾರ ಸಮಾಜ ಭಾಂದವರು ಶೃದ್ಧಾ ಭಕ್ತಿಯಿಂದ ಆಚರಿಸಿದರು.

ಈಶ್ವರ ಗೊಳಶೆಟ್ಟಿ ಮತ್ತು ಶಿವಾಜಿ ಮೇದಾರ ಅವರು ಮೇದಾರ ಕೇತಯ್ಯಾ ಅವರ ಭಕ್ತಿ ಗೀತೆಯನ್ನು ಪ್ರಸ್ತುತ ಪಡಿಸಿ ಶ್ರೇಷ್ಠ ವಚನಕಾರ ಶಿವಶರಣ ಮೇದಾರ ಕೇತಯ್ಯಾ ಅವರ ಬಿದಿರುಬುಟ್ಟಿ ಕಾಯಕದ ಹಣದಿಂದ ದಾಸೋಹ ನಡೆಸಿ, ಪವಿತ್ರಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣ. ವೀರಶೈವ ತತ್ವವನ್ನು ಅನುಸರಿಸಿ ಜನರಿಗೆ ಬೋಧಿಸಿದ ವಚನಗಳನ್ನು, ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.


ಮೇದಾರ ಸಮಾಜ ಭಾಂದವರು ಶಿವಶರಣ ಮೇದಾರ ಕೇತಯ್ಯಾನವರ ಭಾವ ಚಿತ್ರಕ್ಕೆ ವಿಷೇಶ ಪೂಜೆ ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ಸಮಾರಂಭದಲ್ಲಿ ಸಮಾಜದ ಮುಖಂಡರಾದ ಸುಭಾಸ ಮೇದಾರ, ಭೀಮಶಿ ಮೇದಾರ, ರಮೇಶ ಮೇದಾರ, ಶಿವಾಜಿ ಮೇದಾರ, ಮಹೇಶ ಮೇದಾರ, ಸಾಗರ ಮೇದಾರ, ಆನಂದ ಮೇದಾರ, ಮಯೂರ ಮೇದಾರ, ದೀಪಕ ಮೇದಾರ, ಸಂದೀಪ ಮೇದಾರ, ಗೋಕಾಕ ತಾಲೂಕಾ ಮೇದಾರ ಸಮಾಜದ ಅಧ್ಯಕ್ಷ ರಾಜು ಮೇದಾರ ಡಾ.ಮಾರುತಿ ಮೇದಾರ,ಆನಂದ ಗಿರಡ್ಡಿ, ಶಿವಬಸು ಸುಣಧೋಳಿ, ಈಶ್ವರ ಗೊಳಶೆಟ್ಟಿ, ಸದಾಶಿವ ನಿಡಗುಂದಿ, ಶಿವಬಸು ಉದಗಟ್ಟಿ, ಮಾರುತಿ ನಾವಿ ಮತ್ತಿತರು ಇದ್ದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *