
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 1 ರಿಂದ ಫೇಶಿಯಲ್ ರೇಕಗ್ನಿಷನ್ ವ್ಯವಸ್ಥೆ ಜಾರಿಗೆ ತರಲು ಟಿಟಿಡಿ ಕ್ರಮಕೈಗೊಂಡಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಟೋಕನ್ ವಿತರಣೆ, ಲಡ್ಡು ವಿತರಿಸುವ ಸ್ಥಳಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುವುದು.
ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ದೇವಾಲಯದಲ್ಲಿ ಟೋಕನ್ ಇಲ್ಲದೆ ದರ್ಶನ ಪಡೆಯುವ ಸ್ಥಳ, ಹೆಚ್ಚಿನ ಟೋಕನ್ ವಿತರಿಸುವ ಸ್ಥಳ, ಲಡ್ಡು ವಿತರಣೆ ಸ್ಥಳ, ಕೊಠಡಿ ಹಂಚಿಕೆ, ಹಣ ಮರುಪಾವತಿ ಮೊದಲಾದ ಕಡೆಗಳಲ್ಲಿ ಫೇಸ್ ರೇಕಗ್ನಿಷನ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ.
ಕೆಲವರು ಪದೇ ಪದೇ ಟೋಕನ್, ಲಡ್ಡು ಪಡೆಯುವ ಮೂಲಕ ಭಕ್ತಾದಿಗಳಿಗೆ ತೊಂದರೆ ಕೊಡುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
Ad9 News Latest News In Kannada