Breaking News

ಕವಿತೆಗೂ ರಾಗದ ಕೊರತೆ ನೀನಿಲ್ಲದೇ ನಗುವಿಗೂ ಭಾವದ ಕೊರತೆ ನೀನಿಲ್ಲದೇ

Spread the love

ಝಲ್

ಕವಿತೆಗೂ ರಾಗದ ಕೊರತೆ ನೀನಿಲ್ಲದೇ
ನಗುವಿಗೂ ಭಾವದ ಕೊರತೆ ನೀನಿಲ್ಲದೇ

ಸವಿ ಸಂಜೆಯಲಿ ಸೌಂದರ್ಯದ ಸುಳಿವಿಲ್ಲ
ಮನಸಿಗೂ ಸೌಖ್ಯದ ಕೊರತೆ ನೀನಿಲ್ಲದೇ

ವೇದನೆಯ ತಂಗುದಾಣವಾಗಿದೆ ಹೃದಯ
ನಲಿವಿಗೂ ತಾಣದ  ಕೊರತೆ ನೀನಿಲ್ಲದೇ

ಸಹಿ ಇರದ ಪತ್ರಗಳಾಗಿವೆ ಪ್ರತಿ ಹಗಲಿರುಳು
ಕನಸಿಗೂ ಬಣ್ಣದ  ಕೊರತೆ ನೀನಿಲ್ಲದೇ

ಕಣ್ಣೆವೆಗಳು ಮುನಿಸಾಗಿವೆ ನಿಶೆಯೊಡನೆ
ಪ್ರಣತಿಗೂ ತೈಲದ ಕೊರತೆ ನೀನಿಲ್ಲದೇ

ತಿರುವುಗಳ ಹಾಜರಿಯ ಭಯದಲ್ಲಿದೆ ಬಾಳು
ಹೆಜ್ಜೆಗೂ ಧೈರ್ಯದ ಕೊರತೆ ನೀನಿಲ್ಲದೇ

ಒಲವ ಹೊರತು ತಪಸ್ಯಾಳಿಗೆ ಸಂಭ್ರಮವೆಲ್ಲಿ
ಬದುಕಿಗೂ ಅರ್ಥದ ಕೊರತೆ  ನೀನಿಲ್ಲದೇ

ವತ್ಸಲಾ ಶ್ರೀಶ ಕೊಡಗು


Spread the love

About Ad9 News

Check Also

ತೊಟ್ಟಿಲು

Spread the love ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು …