Breaking News
Home / ಕವನ / “ಮಧುರವೀ ಸ್ನೇಹ”

“ಮಧುರವೀ ಸ್ನೇಹ”

Spread the love

“ಮಧುರವೀ ಸ್ನೇಹ””

ಸ್ನೇಹದ ಸವಿನೆನಪುಗಳು ಸುಂದರ
ಮೊಗೆದಷ್ಟು ಅದು ತುಂಬುವ ಸಾಗರ

ಬಾಲ್ಯದ ನೆನಪ ಬುತ್ತಿಯ ಬಿಚ್ಚೋಣ
ಬನ್ನಿ ಸ್ನೇಹ ಸುಧೆಯ ಹಂಚಿ ನಲಿಯೋಣ

ಇರಬೇಕು ಬಾಳಲಿ ಮಧುರ ಗೆಳೆತನವೊಂದು
ಮರುಭೂಮಿಯಲಿ ಅದುವೇ ಅಮೃತಬಿಂದು

ಗೆಳೆತನವು ಆ ದೈವ ತಂದ ವರದಾನ
ಸನ್ಮಿತ್ರರೊಳಗೆ ನೀ ತೋರದಿರು ಬಿಗುಮಾನ

ಸ್ನೇಹದ ಕಡಲಲಿ ಮಿಂದೇಳಲಿ ಮನ
ಸ್ನೇಹ ಸುಮ ಸೌಗಂಧ ಬೀರಲಿ ಅನುದಿನ

ಪ್ರತಿ ಹೃದಯಕೂ ಸ್ನೇಹ ಸೇತುವೆ ಕಟ್ಟೋಣ
ನಂಬಿಕೆಯ ಅಡಿಪಾಯದ ಮೇಲೆ ನಡೆಯೋಣ

ಪ್ರೀತಿ ಮಧುರ ಸುಂದರ ಸ್ನೇಹ ಅಮರ
ಕಷ್ಟ-ಸುಖಗಳ ಹಂಚಿ ನಡೆವ ಸ್ನೇಹವು ಸಾಗರ

ಮಧುಮಾಲತಿ ರುದ್ರೇಶ್ ಬೇಲೂರು
💐💐🤝🤝


Spread the love

About Ad9 Haberleri

Check Also

ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ

Spread the love ಭಾರತದ ಕುವರಿ ಈ ಪೋರಿ ತನ್ನಯ ಜಾಣ್ಮೆಯಲ್ಲೇ ಎದ್ದ ಕುಮಾರಿ ಎಲ್ಲದರಲ್ಲೂ ಮೊದಲಿಗಳೂರಿ ಅವಳೇ ನಮ್ಮ …

Leave a Reply

Your email address will not be published. Required fields are marked *