ಹತ್
ಬರುಡು ವೃಕ್ಷವು ವನದ ಮಧ್ಯದಿ
ಸೊರಗಿನಿಂದಿದೆ ಹಸುರು ಕಾಣದೆ
ಬೆರೆತು ಬಾನುವು ಕರುಣೆತೋರಿದೆ ತನ್ನ ನೆರಳನ್ನು!
ಸೆರಗಿನಂತೆಯೆ ಮರಕೆಹಾಸಿದೆ
ಬೆರಗು ಮೂಡಿದೆ ಕಂಡ ಮಂದಿಗೆ
ಮರವು ಧವಳದಿ ಚೆಂದಗಾಣುತ ಹತ್ತಿಮರದಂತೆ!!
ಬಾನು ಭವಿಯ ಸೊಬಗಕೂಟವು
ತಾನು ನಲ್ಲೆಗೆ ಸೊಗಸನೀಡಿತು
ಕಾನು ಸುಂದರ ಕಾಣುವಂತೆಯೆ ಮಾಡಿ ಚೆಂದದಲಿ!
ಏನು ಬಣ್ಣವು ಶಿವನ ಲೀಲೆಯು
ಬಾನ ನೀಲಿಯವರ್ಣ ಸಂಗಡ
ಸನಿಹಹಸುರಿನ ಧರೆಯು ಬೆರೆಯುತ ಕಣ್ಗೆ ಕುಕ್ಕುತಲಿ!!
ಕಲೆಯ ಬಲೆಯನು ಬೀಸಿನಿಂದನು
ಚೆಲುವ ಮನಜಗೆ ಧಾರೆಯೆರೆದಿಹ
ತಲೆಯನೋಡಿಸಿ ಚಿತ್ರಗಾರನು ಬಣ್ಣ ತುಂಬಿರಲು!
ಒಲವಿನುಡುಗೊರೆ ಕೊಟ್ಟುಹರಸಿದ
ಬೆಲೆಯಬಾಳುವ ಸೃಷ್ಟಿ ಕೊಡುಗೆಯ
ಹಲವು ದಿನಗಳಲೆಕ್ಕಹಾಕುತ ಹರನು ಕರುಣಿಸಿದ!!
ಧರಣೀಪ್ರಿಯೆ
ದಾವಣಗೆರೆ