Breaking News
Home / ರಾಜ್ಯ>ಬೆಳಗಾವಿ / ಕೊರೋನಾ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ವಹಿಸಿ ಹೋಳಿ ಆಚರಿಸಿ : ಸಿಪಿಐ ಸತೀಶ ಕಣಮೇಶ್ವರ ಹೋಳಿ ಹಬ್ಬಕ್ಕೂ ಬಿಡದ ಕೊರೋನಾ ಕಂಟಕ

ಕೊರೋನಾ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ವಹಿಸಿ ಹೋಳಿ ಆಚರಿಸಿ : ಸಿಪಿಐ ಸತೀಶ ಕಣಮೇಶ್ವರ ಹೋಳಿ ಹಬ್ಬಕ್ಕೂ ಬಿಡದ ಕೊರೋನಾ ಕಂಟಕ

Spread the love

ಮೂಡಲಗಿ: ಕೋವಿಡ್-19 ಎರಡನೇ ಅಲೆ ಅತ್ಯಂತ ಭಯಂಕರವಾಗಿರುವುವ ಹಿನ್ನೆಲೆಯಲ್ಲಿ ಹೋಳಿಹಬ್ಬವನ್ನು ಸರಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಅನುಸರಸಿ ಶಾಂತಯುತವಾಗಿ ಆಚರಿಸುಂತೆ ಸಿಪಿಐ ಸತೀಶ ಕಣ ಮೇಶ್ವರ ಹೇಳಿದರು.
ಬುಧವಾರದಂದು ಪಟ್ಟಣದ ಪೋಲಿಸ ಠಾಣೆಯಲ್ಲಿ ಆಯೋಜಿಸಿದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಎರಡನೇ ಬಾರಿಗೆ ಬರುವ ರೋಗಗಳು ಭಯಂಕರ ಸ್ವರೂಪ ತಾಳಿದ ಉದಾಹರಣೆಗಳು ಸಾಕಷ್ಟಿವೆ ಸದ್ಯ ರೂಪಾಂತರ ಹೊಂದಿದ ಕೊರೋನಾದ ಎರಡನೇ ಅಲೆ ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಎಚ್ಚರವಹಿಸುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.
ಪ್ರತಿಯೋಬ್ಬರು ಕಡ್ಡಾಯವಾಗಿ ಮಾಸ್ಕ ಧರಿಸಿ ಸ್ಯಾನಿಟೈಜರ ಉಪಯೋಗಿಸಿ ಸಾಮಾಜಿಕ ಅಂತರ ಪಾಲಿಸಿ ಸುರಕ್ಷಿತರಾಗಿರಿ ಎಂದು ಹೇಳಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಸರಳ ರೀತಿಯಲ್ಲಿ ಹೋಳಿ ಹಬ್ಬ ಅಚರಿಸಬೇಕೆಂದರು.
ಪಿಎಸ್‍ಐ ಎಚ್ ವಾಯ್ ಬಾಲದಂಡಿ ಮಾತನಾಡಿ, ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕೊರೋನಾ ಪ್ರಕರಣಗಳು ಕಂಡು ಬರುತ್ತಿರುವುದರಿಂದ ನಮ್ಮ ಬೆಳಗಾವಿ ಜಿಲ್ಲೆಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಚೆಕ್ಕ ಪೋಸ್ಟಗಳಲ್ಲಿ ತೀವೃ ನಿಘಾ ವಹಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ನೆರೆಯ ಮಹಾರಾಷ್ಟ್ರಕ್ಕೆ ಹೋಗುವುದು ಕಡಿಮೆ ಮಾಡಬೇಕು ಹಾಗೂ ಸಭೆ, ಸಮಾರಂಭಗಳು, ಜಾತ್ರೆಗಳಲ್ಲಿ ಹೆಚ್ಚಿನ ಜನಸಂಖ್ಯೆ ಸೇರದಂತೆ ನೋಡಿಕೊಳ್ಳಲು ನಮ್ಮ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಹೇಳಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ಕಳೆದ ಒಂದು ವರ್ಷದಿಂದ ಸಾಕಷ್ಟು ನೋವು ನಲಿವುಗಳನ್ನು ಅನುಭವಿಸಿದ ನಾವು ಮತ್ತೇ ಜೀವನದಲ್ಲಿ ಸಂತೋಷ, ನೇಮ್ಮದಿ, ಹಬ್ಬ ಹರಿದಿನದ ಸಂಭ್ರಮದಲ್ಲಿ ತೋಡಗಿಕೊಳ್ಳುವ ಸಂದರ್ಭದಲ್ಲಿ ಕೊರೋನಾ ಎರಡನೇ ಅಲೆಯಿಂದ ಮತ್ತೇ ಕಂಟಕ ಎದುರಾಗಿದೆ ಆದರಿಂದ ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರು ಕೋರೋನಾ ಎರಡನೇ ಅಲೆ ಬಗ್ಗೆ ಜಾಗ್ರತಿ ಮೂಡಿಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ಸದಸ್ಯರಾದ ಸಂತೋಷ ಸೋನವಾಲ್ಕರ, ಹುಸೇನಸಾಬ ಶೇಖ, ಆನಂದ ಟಪಾಲದಾರ, ಆದಮ್ ತಾಂಬೋಳಿ, ಶಿವಾನಂದ ಸಣ್ಣಕ್ಕಿ, ಮಾಜಿ ಸದಸ್ಯ ಈರಪ್ಪ ಬನ್ನೂರ, ವಿಲಾಸ ಸಣ್ಣಕ್ಕಿ, ಶಾಬೂ ಸಣ್ಣಕ್ಕಿ, ಶಿವಲಿಂಗ ಹಾದಿಮನಿ, ಅನ್ವರ ನದಾಫ್, ಇಮಾಮಹುಸೇನ ಮುಲ್ಲಾ, ಮಲೀಕ ಕಳ್ಳಿಮನಿ ಹಾಗೂ ಅನೇಕ ಮುಖಂಡರು ಇದ್ದರು.

 


Spread the love

About Ad9 Haberleri

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …