ಬೆಸುಗೆ
**********
ಮೊಲ್ಲೆ ಹೂವನು ಮುಡಿಸಿ ಕೊಂಡಳು
ನಲ್ಲೆ ನಾಚುತ ಪತಿಯ ಕರದಲಿ
ನಲ್ಲನೊಲವಿನ ಬಯಕೆ ಮನದಲಿ ಕಾಡಿ ಕೇಳಿರಲು!
ಮೆಲ್ಲ ನಗೆಯನು ಸೂಸಿ ನಿಂದಳು
ನಲ್ಲೇ ಬಿಡುತಲಿ ಸೆಳೆದು ಕಣ್ಣಲಿ
ನೀರೇ ಘಮ್ಮೆನುತಲಿವೆ ಮಲ್ಲಿಗೆ ನಲ್ಲನೆಂದಿರಲು!!
ಹೊಸತು ಬಾಳಲಿ ಕನಸಬೆಸೆದರು
ಹೊಸೆದುಭಾವನೆಯನ್ನು ಮಿಲನಕೆ
ಬೆಸೆದ ಮನಗಳು ಹವಣಿಸುತಲಿವೆ ರಸದ ಘಳಿಗೆಯನು!
ತುಸುವೆ ಲಜ್ಜೆಯು ಮೊಗದಿ ಕಳವಳ
ಹುಸಿಯ ನಗೆಯನು ನಕ್ಕರಿಬ್ಬರು
ಹೊಸದೆ ಜೀವವ ಸೃಷ್ಟಿಗೈಯಲು ಶುಭದ ರಾತ್ರಿಯಲಿ!!
ಹೂವ ಮುಡಿಯಲು ಹೆಣ್ಣು ಚೆಂದವು
ಹೂವಿನಂದಕೆ ಮನವು ಸೋಲಲು
ಭಾವಗಳೆಸೆದು ಬಂಧ ಬೆಸೆವುದು ದುಂಡು ಮಲ್ಲಿಗೆಯು!
ಹೂವು ಸೃಷ್ಟಿಯ ಸೊಬಗ ಹೆಚ್ಚಿಸಿ
ಜೀವನವುಪಾವನವು ಜಗದಲಿ
ದೇವ ಪೂಜೆಯ ಪಾದಕೇರಿತು ಹೂವು ಧನ್ಯವಾಗಿರಲು!!
ಧರಣೀಪ್ರಿಯೆ
ದಾವಣಗೆರೆ