❤️ಸುಂದರ ಬೆಳದಿಂಗಳ ತಂಪಿನಲಿ
ನಿನ ನೆನೆಯುತಾ ತಂಗಾಳಿ ಸಂತೆಯಲಿ
ಒಂದಿರುಳ ಕನಸಲಿ ನೆನೆಸಿ ಕೊಂಡೆ
ಆ ನನ್ನ ನಿನ್ನ ಮೊದಲ ಪರಿಚಯದ ನೆನಪ❤️
❤️ನೀ ನಂದು ಬಂದಿದ್ದೆ ನಮ್ಮತ್ತೆ ಮನೆಗೆ
ಹೋಳಿ ಹುಣ್ಣಿಮೆಯ ಕಾಮನ ಹಬ್ಬದಲ್ಲಿ
ಎಲ್ಲರೂ ಬಣ್ಣದೋಕುಳಿಯನು ಎರಚಾಡುತ್ತಿದ್ದಾಗ
ನೀ ನನಗೆ ಬಣ್ಣ ಬಳಿದೆ ನನ್ನೊಲವಿನ ಎದೆಯ ಮೇಲೆ❤️
❤️ನಮ್ಮಮ್ಮನ ಪುಸಲಾಯಿಸಿ ಕರೆ ಕೊಟ್ಟೆ ನಿನಗೆ
ನೀ ಮನೆಗೆ ಕಾಲಿಟ್ಟೆ ಘಲ್ ಎಂಬ ಗೆಜ್ಜೆ ನಾದದೊಂದಿಗೆ
ನನ್ನೆದೆಯು ಬಡಿದು ಕೊಂಡಿತು ರೋಮಾಂಚನದಿಂದ
ನಾ ಸೋತೆ ನಿನ್ನ ಆ ಕುಡಿ ನೋಟ ನೋಟಕೆ❤️
❤️ನಮ್ಮ ಮನೆಯಲ್ಲಿ ವಿಷಯ ತಿಳಿಸಿದೆ
ನಮ್ಮಿಬ್ಬರ ಪ್ರೇಮ ಅರುಹಿದೆ ಸೂಕ್ಷ್ಮ ವಾಗಿ ಅಮ್ಮನಿಗೆ
ಅದಕ್ಕವರು ಅಸ್ತು ಎಂದು ಗ್ರೀನ್ ಸಿಗ್ನಲ್ ಕೊಟ್ಟಾಯ್ತು
ನೀನೀಗ ನನ್ನ ಮನೆಯೊಡತಿ ಸರ್ವಸ್ವ ನಿನದೆ ಎಂದು ಹೃದಯ ಸಿಂಹಾಸನಕ್ಕೇರಿದೆ❤️
✍️ *ಮಳೆಬಿಲ್ಲು* ಸಾಹಿತಿ ಲೀಲಾ ಗುರುರಾಜ್, ತುಮಕೂರು 🙏🥰🌹❤️.