Breaking News
Home / ಮೂಡಲಗಿ / ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

Spread the love


ಮೂಡಲಗಿ : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಭಾರತದ ಸಂವಿಧಾನ, ದೇಶದ ಪ್ರತಿಯೊಬ್ಬ ನಾಗರೀಕನಿಗೆ ಪವಿತ್ರ ಗ್ರಂಥವಿದ್ದಂತೆ ಎಂದು ತಹಶೀಲ್ದಾರ್ ಶಿವಾನಂದ ಬಬಲಿ ಅಭಿಪ್ರಾಯಪಟ್ಟರು.
ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಮೂಡಲಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರಿಂದ ರಚಿತ ಭಾರತದ ಸಂವಿಧಾನ ಅಡಿಯಲ್ಲಿ ಪ್ರತಿಯೊಬ್ಬರಿಗೂ ಜಾತಿ, ಭೇಧ ವಿಲ್ಲದೆ ಸಮಾನ ಹಕ್ಕು ದೊರೆತಂತಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ್ ಮಣ್ಣಿಕೇರಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಸಂವಿಧಾನದ ಮಹತ್ವವನ್ನು, ಪ್ರತಿ ನಾಗರೀಕರನು ಅರ್ಥ ಮಾಡಿಕೊಂಡು ಬಡವ, ಶ್ರೀಮಂತ, ಜಾತಿ, ಬೇಧವಿಲ್ಲದೆ ತಮ್ಮ ಹಕ್ಕು ಗಳನ್ನು ಪಡೆದುಕೊಂಡು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದು ದೇಶವನ್ನು ಪ್ರಗತಿ ಪಥದತ್ತ ಸಾಗುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಶಿಕ್ಷಕರಾದ ಗುದ್ದಲಿ ಹಾಗೂ ಅನೇಕ ದಲಿತ ಮುಖಂಡರು ಮಾತನಾಡಿ, ಭಾರತ ಸಂವಿಧಾನದ ಪೀಠಿಕೆ ಜಾಗತಿಕ ವಾಚನ ಮಾಡಲಾಯಿತು.
ಈ ಸಂಧರ್ಭದಲ್ಲಿ ತಾಲೂಕಾ ಪಂಚಾಯತ್ ಅಧಿಕಾರಿ ಎಫ್.ಜಿ.ಚಿಣ್ಣನವರ್, ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಎಸ್.ಕೆ.ಆಸಂಗಿ, ಸಮಾಜ ಕಲ್ಯಾಣ ಅಧಿಕಾರಿ ಆರ್.ವಿ.ತಳವಾರ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಸೇರಿದಂತೆ ಮುಖಂಡರಾದ ರಮೇಶ್ ಸಣ್ಣಕ್ಕಿ, ಸತ್ಯಜೀತ್ ಕರಮಡಿ, ಎಂ.ಅಜ್ಜನಕಟ್ಟಿ, ಸಾಬು ಸಣ್ಣಕ್ಕಿ, ಅಶೋಕ್ ಸಿದ್ಲಿಂಗಪ್ಪಗೋಳ್ ಹಾಗೂ ಕಚೇರಿಯ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡ ವಸತಿ ಗೃಹದ ವಾರ್ಡನ್ ವಾಯ್.ಬಿ.ಭಜಂತ್ರಿ ನಿರೂಪಿಸಿ ವಂದಿಸಿದರು.

 


Spread the love

About Ad9 Haberleri

Check Also

ಮೃತಪಟ್ಟ ಮಾಲಧಾರಿಗಳಿಗೆ ಸರ್ಕಾರದಿಂದ 5 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಲು ಅಗ್ರಹಿಸಿ ಮೂಡಲಗಿ ಅಯ್ಯಪ್ಪ ಸ್ವಾಮಿ ಮಾಲಾದರಿಗಳಿಂದ ಮನವಿ

Spread the love ಮೂಡಲಗಿ : ಹುಬ್ಬಳ್ಳಿ ನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿರುವ ಹಿನ್ನೆಲೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ …

Leave a Reply

Your email address will not be published. Required fields are marked *