Breaking News
Home / ಬೆಳಗಾವಿ (page 8)

ಬೆಳಗಾವಿ

ಸತೀಶ ಶುಗರ್ಸ್ ಹಾಗೂ ಪ್ರಭಾ ಶುಗರ್ಸ್ ನೆರವಿನ ರಸ್ತೆಗಳ ಕಾಮಗಾರಿಗೆ ಚಾಲನೆ

ಮೂಡಲಗಿ: ಸತೀಶ ಶುಗರ್ಸ್ ಹಾಗೂ ಪ್ರಭಾ ಶುಗರ್ಸ್ ನೆರವಿನ ರಸ್ತೆಗಳ ಕಾಮಗಾರಿಗೆ ಇಲ್ಲಿಗೆ ಸಮೀಪದ ಗುಜನಟ್ಟಿ ಗ್ರಾಮದಲ್ಲಿ ಯುವ ಮುಖಂಡ ನಾಗಪ್ಪ ಶೇಖರಗೋಳ ಮತ್ತು ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ ಅವರು ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿ ರಸ್ತೆಗಳ ಸುಧಾರಣೆಗೆ ಗುದ್ದಲಿ ಪೂಜೆಯನ್ನು ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಂಗಪ್ಪ ಕುರಬೇಟ, ಸಾಬಪ್ಪ ಬಂಡ್ರೋಳಿ, ಬಸು ಬಂಡ್ರೋಳಿ, ಗಂಗಪ್ಪ ಬಂಡ್ರೋಳ್ಳಿ ಮುಂತಾದವರು ಉಪಸ್ಥಿತರಿದ್ದರು

Read More »

ಐವರು ಅಂತರಾಜ್ಯ ಅಪಹರಣಕಾರರ ಬಂಧನ

ಚಿಕ್ಕೋಡಿ : ಹಣಕ್ಕಾಗಿ ಸುಪಾರಿ ಪಡೆದು ಜನರನ್ನು ಅಪಹರಿಸುತ್ತಿದ್ದ ಐವರು ಅಂತರಾಜ್ಯ ಅಪಹರಣಕಾರರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾರ್ಚ್ 15 ರಂದು ಶಬ್ಬೀರ್ ಬಾಬಾಲಾಲ್ ಮಕಾಂದಾರ (54) ಅವರು ನಿಪ್ಪಾಣಿ ಬಳಿಯ ಕೊಗನೊಳ್ಳಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಇಚಲಕರಂಜಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ಆರೋಪಿಗಳು ಬಲವಂತವಾಗಿ ಮಗನ ಮುಂದೆಯೇ ಶಬ್ಬೀರ್ ಮಕಾಂದಾರನನ್ನು ತಮ್ಮ ಇನ್ನೋವಾ …

Read More »

ಸಂಕೇಶ್ವರ ಸಂತೆಗೆ ಬ್ರೇಕ್‌ ಹಾಕಿದ ಕೊರೊನಾ ಭೀತಿ

ಕೊರೊನಾ ಭೀತಿ ಇಲ್ಲಿನ ಶುಕ್ರವಾರದ ಸಂತೆಯನ್ನು ಬಾಧಿಸಿದೆ. ಸಂಕೇಶ್ವರ ನಗರದ ಪುರಸಭೆಯವರು ಸಂತೆ ಬಂದ್‌ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಸಂಕೇಶ್ವರ ಪುರಸಭೆಯ ಮುಖ್ಯಾಧಿಕಾರಿ ಜಗದೀಶ್ ಈಟಿ ಮಾತನಾಡಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 100 ಜನಕ್ಕಿಂತ ಹೆಚ್ಚು ಸಭೆ ,ಸಮಾರಂಭ ಅಥವಾ ಇನೀತರ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇದಿಸಿರುತ್ತಾರೆ ಆದ ಕಾರಣ ಸಂಕೇಶ್ವರದಲ್ಲಿ ಶುಕ್ರವಾರ ನಡೆಯುವ ಸಂತೆಯನ್ನು ಬಂದ್‌ ಮಾಡಲಾಗಿದೆ. ಇದರಿಂದ …

Read More »

ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ ನೇತೃತ್ವದಲ್ಲಿ ಹಾಲಿಗೆ ಕಲಬೆರಕೆ ಮಿಶ್ರಣ ಮಾಡುವವರ ಮೇಲೆ ದಾಳಿ

ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಿಂಗಪ್ಪ ಹಣಮಂತ ದಡ್ಡಗೋಳ ಎನ್ನುವ ಮಾಲೀಕ ಹಾಗೂ ನಿಂಗಪ್ಪ ಯಲ್ಲಪ್ಪ ಸಂಕನ್ನವರ ಎಂಬ ವ್ಯಕ್ತಿಗಳು, ರೈತರಿಂದ ಸಂಗ್ರಹಿಸಿದ ಹಾಲಿಗೆ ಕಲಬೆರಕೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಹಾಗೂ ಸಿಬ್ಬಂಧಿ ಮತ್ತು ಗೋಕಾಕ ಆಹಾರ ಇಲಾಖೆಯ ಅಧಿಕಾರಿ ಲೋಕಶ್ ಗಾನೂರ್ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಯಲ್ಲಿ 6 ಕೆಜಿ ಯೂರಿಯಾ, …

Read More »

ಆರ್ಥಿಕ ಗಣತಿಗೆ ಜನರು ಸ್ಪಷ್ಟ ಮಾಹಿತಿ ನೀಡಿ ಸಹಕರಿಸಿ : ಪಿಡಿಓ ನೇರ್ಲಿ

ಹುಕ್ಕೇರಿ : ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಆರ್ಥಿಕ ಗಣತಿ ಜಿಲ್ಲಾಧಿಕಾರಿ ಅವರ ಆದೇಶದಂತೆ ನಡೆಸುತ್ತಿದ್ದು, ಜನರು ಯಾವುದೇ ಆತಂಕ, ಗೊಂದಲಗಳಿಗೆ ಒಳಗಾಗದೇ ನಿಮ್ಮ ಮನೆ ಬಾಗಿಲಿಗೆ ಬಂದ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಪಿಡಿಓ ಪಿ.ಆರ್.ನೇರ್ಲಿ ತಿಳಿಸಿದರು. ಅವರು ಸಮೀಪದ ಸೋಲಾಪುರ ಗ್ರಾಮದಲ್ಲಿ 7ನೇ ಆರ್ಥಿಕ ಗಣತಿ ಕಾರ್ಯಕ್ರಮಕ್ಕೆ ನಡೆಯುತ್ತಿದ್ದು ಈ ಗಣತಿಯು ಪ್ರತಿ 6 ವರ್ಷಕ್ಕೊಮ್ಮೆ ನಡೆಯುತ್ತಿದ್ದು …

Read More »

ಹಾಸ್ಪಿಟಲ್ ಗೆ ಹೋಗಿ ಬರುವುದಾಗಿ ಹೇಳಿ ಮರಳಿ ಬಾರದೆ ಮಹಿಳೆ ಕಾಣೆ

ಮೂಡಲಗಿ : ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿಯಾದ ಬಾಳುವ ಪ್ರಕಾಶ್ ನಾಯಕ್ ಅವರು ಕಾಣೆಯಾಗಿದ್ದು ಈ ಕುರಿತು ಮೊದಲಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 13 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮದ ನಾಯಿಕರು ತೋಟದ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಕಾಣೆಯಾದ ಮಹಿಳೆಯ ಭಾವ( ಗಂಡನ ಅಣ್ಣ) ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಳವ್ವಾ  ಪ್ರಕಾಶ …

Read More »

ಪಾಪು ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

ಗೋಕಾಕ: ಕನ್ನಡದ ಅಸ್ಮಿತೆ, ಕನ್ನಡ ಏಕೀಕರಣದ ರೂವಾರಿ,ಮೇರು ಪತ್ರಕರ್ತ -ಸಾಹಿತಿ, ಶತಾಯುಷಿ, ನಾಡೋಜ ಡಾ.ಪಾಟೀಲ್ ಪುಟ್ಟಪ್ಪ (ಪಾಪು) ನವರ ನಿಧನಕ್ಕೆ ಕೆಎಮ್ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ನೆಲ- ಜಲ, ಭಾಷೆ, ಕರ್ನಾಟಕ ಏಕೀಕರಣ, ಗೋಕಾಕ ವರದಿ ಜಾರಿಗೆಗಾಗಿ ತಮ್ಮ ಇಡೀ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಕನ್ನಡ ನಾಡಿನ ಸಂಸ್ಕೃತಿಗೆ ಸಾಕಷ್ಟು ಮೆರಗು ನೀಡಿದ ಪಾಟೀಲ್ ಪುಟ್ಟಪ್ಪ ಅವರ ಸಾಧನೆ ಅವಿಸ್ಮರಣಿಯವಾಗಿದೆ. ಇಂತಹ …

Read More »

ಗ್ರಾಮೀಣ ಕ್ಷೇತ್ರದಲ್ಲಿ ಇನ್ನಷ್ಟು ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಓಟ ಮುಂದುವರಿದಿದ್ದು, ನಿಲಜಿ ಮತ್ತು ಖನಗಾಂವ್ ಬಿಕೆ ಗ್ರಾಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು. ನಿಲಜಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಆರಂಭಿಸಲಾಯಿತು. ಇದು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿತ್ತು. ಡಾಂಬರೀಕರಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿತು. ಖನಗಾಂವ್ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ …

Read More »

ಕೋವಿಡ್-19, ಏಡ್ಸ್ ಮತ್ತು ಟಿಬಿ ಕುರಿತು ಜಾಗೃತಿ ಆರೋಗ್ಯದ ನಿಯಮಗಳನ್ನು ಪಾಲಿಸಿ ಕೊರೊನಾದಿಂದ ಮುಕ್ತರಾಗಿ

ಮೂಡಲಗಿ: ಕೊರೊನಾ ವೈರಸ್ ಬಗ್ಗೆ ಭಯ ಬೇಡ ಆದರೆ ಮುಂಜಾಗೃತೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯದ ನಿಯಮಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ರಾಯಬಾಗದ ಸಮುದಾಯ ಆರೋಗ್ಯ ಸಮನ್ವಯಾಧಿಕಾರಿ ಝಾಕೀರ ಹುಸೇನ್ ನಧಾಪ ಹೇಳಿದರು. ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತç ವಿಭಾಗ, ಐಕ್ಯೂಎಸಿ, ಸಮುದಾಯ ಆರೋಗ್ಯ ಕೇಂದ್ರ, ವೈಆರ್‌ಸಿ ಘಟಕ, ಎನ್‌ಎಸ್‌ಎಸ್, ರೆಡ್‌ರಿಬ್ಬನ್ ಮತ್ತು ಆರೋಗ್ಯ ಘಕಟಗಳ ಆಶ್ರಯದಲ್ಲಿ ಆಯೋಜಿಸಿದ ಕೋವಿಡ್-19, ಎಚ್‌ಐವಿ ಏಡ್ಸ್ ಮತ್ತು …

Read More »

ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ

ಮೂಡಲಗಿ : ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಾಮಾನ್ಯವಾಗಿ ಕೆಮ್ಮು,ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕೆತ್ಸೆ ಪಡೆಯಬೇಕು. ಎಂದು ನ್ಯಾಯವಾದಿ ಕೆ.ಎಲ್ ಹುಣಶ್ಯಾಳ ಹೇಳಿದರು. ಅವರು ದಿವಾಣ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಕೊರೊನಾ ಸಂಕ್ರಾಮಿಕ ರೋಗ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ …

Read More »