*ಮೂಡಲಗಿ*- ಗೋಕಾವಿ ನೆಲದ ಪಂಚ- ಪೀಠಗಳಲ್ಲಿ ಒಂದಾಗಿರುವ ತಾಲ್ಲೂಕಿನ ಅರಭಾವಿ ದುರದುಂಡೀಶ್ವರ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು (೭೫) ರವಿವಾರ ರಾತ್ರಿ ಲಿಂಗೈಕ್ಯೆರಾಗಿದ್ದಾರೆ. ಪರಮ ಪೂಜ್ಯರ ಅಗಲಿಕೆಗೆ ಶಾಸಕರೂ ಆಗಿರುವ ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಅರಭಾವಿ ಭಾಗದಲ್ಲಿ ಭಕ್ತರ ಪಾಲಿನ ದೇವರು ಆಗಿದ್ದ ಸದಾ ಸೌಮ್ಯ ಹಾಗೂ ಶಾಂತ ಸ್ವಭಾವದ ಸಾಕಾರ ಮೂರ್ತಿಯಾಗಿದ್ದ ಪೂಜ್ಯರ ಅಗಲಿಕೆಯಿಂದ ನಮ್ಮ ನಾಡಿಗೆ ಅಪಾರ …
Read More »ಹುಣಶ್ಯಾಳ ಪಿಜಿ : ನಿಜಗುಣ ದೇವರ ಷಷ್ಠಬ್ಧಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ
ಮೂಡಲಗಿ : ಎಲ್ಲರನ್ನು ಪ್ರೀತಿಸು. ಪ್ರೀತಿಯೇ ದೇವರು ಎಂಬ ತತ್ವವನ್ನು ಸಾರುತ್ತ, ಪಾದರಸದಂತೆ ಸದಾ ಓಡಾಡಿ ನಗುಮುಖದಿಂದಲೇ ತಮ್ಮ ಆತ್ಮೀಯ ವಲಯವೊಂದನ್ನು ಸೃಷ್ಟಿಸಿ ಹುಣಶ್ಯಾಳ ಪಿಜಿ ಕೀರ್ತಿಯನ್ನು ಎಲ್ಲೆಡೆ ಪಸರಿಸಿರುವ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮವನ್ನು ಅತೀ ವಿಜ್ರಂಭನೆಯಿಂದ ಆಚರಿಸಲು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ರವಿವಾರದಂದು ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು …
Read More »ಮಹಿಳಾ ಮೀಸಲಾತಿಯಿಂದ ಮಹಿಳೆಯರದ್ದೇ ಪಾರುಪತ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಈಗಾಗಲೇ ಮಹಿಳಾ ಮೀಸಲಾತಿಯು ಜಾರಿಯಾಗಿರುವುದರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ದೊರೆತಂತಾಗಿದೆ. ಮುಂದಿನ ವರ್ಷಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ರಾಜಕೀಯ ಸ್ಥಾನಮಾನ ಪಡೆಯಲಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಎನ್‍ಆರ್‍ಎಂಎಲ್ ಯೋಜನೆಯಡಿ 18 ಲಕ್ಷ ರೂ. ವೆಚ್ಚದ ಮಹಿಳಾ ಸಂಘಗಳ ಚಟುವಟಿಕೆಗಳಿಗಾಗಿ ನಿರ್ಮಾಣವಾಗಲಿರುವ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ …
Read More »ತಿಂಗಳೊಳಗೆ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ
*ರಾಮೇಶ್ವರ ಏತ ನೀರಾವರಿ ಯೋಜನೆಯ ವೆಂಕಟಾಪೂರ ಮುಖ್ಯ ಕಾಲುವೆಯನ್ನು ಪರಿಶೀಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ* : ರಾಮೇಶ್ವರ ಏತ ನೀರಾವರಿ ಯೋಜನೆಯಡಿ ಇದುವರೆಗೂ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ತಮ್ಮ ಜಮೀನುಗಳಿಗೆ ನೀರು ಪೂರೈಸಲು ಹೊಸ ಚೇಂಬರ್ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು …
Read More »ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
*ಮೂಡಲಗಿ :* ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ ಇರುತ್ತದೆ. ಧೈರ್ಯದಿಂದ ಜೀವನವನ್ನು ಸಾಗಿಸಬೇಕೇ ಹೊರತು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಸಾಲದ ಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾದ 4 ರೈತ ಕುಟುಂಬಗಳ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಧನಾದೇಶ ಪತ್ರಗಳನ್ನು …
Read More »ಶಿವಬೋಧಂಗ ಸೊಸಾಯಟಿಗೆ 5.10 ಕೋಟಿ ರೂ ಲಾಭ-ಪುಲಕೇಶ ಸೋನವಾಲಕರ
ಮೂಡಲಗಿ: ಸಹಕಾರಿ ನಗರ ಎಂದೇ ಖ್ಯಾತಿಯ ಮೂಡಲಗಿ ಪಟ್ಟಣದ ಶ್ರೀ ಶಿವಬೋಧಂಗ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಟಿಯು 18ನೇ ಶಾಖೆಗಳನ್ನು ಹೊಂದಿ ಕಳೆದ ಮಾರ್ಚ ಅಂತ್ಯಕ್ಕೆ 5.10 ಕೋಟಿ ರೂ ಲಾಭ ಗಳಿಸಿ, ಶೇರುದಾರರಿಗೆ ಶೇ.16 ಲಾಭಾಂಶ ವಿತರಿಸಿ ಪ್ರಗತಿ ಪಥತದ್ತ ದಾಪುಗಾಲು ಹಾಕುತ್ತಿದೆ ಎಂದು ಸೊಸಾಯಟಿಯ ಉಪಾಧ್ಯಕ್ಷ ಪುಲಕೇಶ ಸೋನವಾಲಕರ ಹೇಳಿದರು. ಅವರು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಮೂಡಲಗಿ ಶ್ರೀ ಶಿವಬೋಧಂಗ ಅರ್ಬನ್ …
Read More »20 ರಂದು ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ
ಮೂಡಲಗಿ ಸೆ.19 : ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ 2023-24ನೇ ಸಾಲಿನ ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ದಿನಾಂಕ 20ನೇ ಸೆಪ್ಟೆಂಬರ 2023 ರಂದು ಮೂಡಲಗಿ ತಾಲೂಕಿನ ಮೂಡಲಗಿ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ. ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ದಿ.20ರಂದು ಬೆಳಿಗ್ಗೆ 9.00 ಗಂಟೆಗೆ ಹಾಜರಿದ್ದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ. ಸ್ಪರ್ಧೆಗಳ ವಿವರ ಅಥ್ಲೆಟಿಕ್ಸ್ (ಪುಷರಿಗಾಗಿ) …
Read More »ಐರನ್ ಮ್ಯಾನ್ ಪ್ರಶಸ್ತಿಪಡೆದ ಸಿಪಿಐ ಶ್ರೀಶೈಲ್ ಬ್ಯಾಕೂಡ ಅವರಿಗೆ ಸನ್ಮಾನ
ಮೂಡಲಗಿ : ಸಮಾಜದಲ್ಲಿ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯವಾಗುವದು. ಆರೋಗ್ಯ ಕಡೆ ನಿಷ್ಕಾಳಜಿ ಹೊಂದಿ ಮಾನಸಿಕ, ದೈಹಿಕ ವಿವಿಧ ಕಸರತ್ತುಗಳನ್ನು ಮರೆತಾಗ ಜೀವನದಲ್ಲಿ ದೊಡ್ಡ ಮಟ್ಟದ ದಂಡ ಕಟ್ಟುವ ಅನಿವಾರ್ಯತೆಯಾಗುವದು ಎಂದು ಅಂತರಾಷ್ಟ್ರೀಯ ಐರನ್ ಮ್ಯಾನ್ ಪ್ರಶಸ್ತಿ ವಿಜೇತ ಸಿಪಿಐ ಶ್ರೀಶೈಲ್ ಬ್ಯಾಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಸಾಧಕರ ಸನ್ಮಾನ ಹಾಗೂ ಐರನ್ ಮ್ಯಾನ್ ಪ್ರಶಸ್ತಿಪಡೆದ ಪ್ರಯುಕ್ತ ಸನ್ಮಾನ ಸ್ವೀಕರಸಿ …
Read More »ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ವೇಳೆ ಗೈರಾದ ಅಧಿಕಾರಿಗಳು
ಮೂಡಲಗಿ : ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ, ತಾಲೂಕು ಆಡಳಿತ, ತಾಲೂಕ ಪಂಚಾಯತ ಮೂಡಲಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ವೇಳೆ ತಾಲೂಕು ಮಟ್ಟದ ಹಲವಾರು ಅಧಿಕಾರಿಗಳು ಗೈರಾಗಿದ್ದಾರೆ. ದಲಿತರ ಕುಂದುಕೊರತೆ ಸಭೆಯಲ್ಲಿ ಕೂಡ ಅನೇಕ ತಾಲ್ಲೂಕು ಮಟ್ಟದ ಅಧಿಕಾರಿಗಳು ಬರದೆ ಕೇವಲ ಹೆಸರಿಗಷ್ಟೇ, ತಮ್ಮ ಕೆಳ ಸಿಬ್ಬಂದಿಯನ್ನು ಕಳುಹಿಸಿ ಕುಂದು ಕೊರತೆಗಳ ಸಭೆಗೆ ಹಾಜರಾಗಲು ಹೇಳಿರುತ್ತಾರೆ. ಪ್ರಜೆಗಳಿಂದ ಪ್ರಜೆಗಳಿಗಾಗಿ …
Read More »ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ
ಮೂಡಲಗಿ : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಭಾರತದ ಸಂವಿಧಾನ, ದೇಶದ ಪ್ರತಿಯೊಬ್ಬ ನಾಗರೀಕನಿಗೆ ಪವಿತ್ರ ಗ್ರಂಥವಿದ್ದಂತೆ ಎಂದು ತಹಶೀಲ್ದಾರ್ ಶಿವಾನಂದ ಬಬಲಿ ಅಭಿಪ್ರಾಯಪಟ್ಟರು. ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಮೂಡಲಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರಿಂದ ರಚಿತ ಭಾರತದ ಸಂವಿಧಾನ ಅಡಿಯಲ್ಲಿ ಪ್ರತಿಯೊಬ್ಬರಿಗೂ …
Read More »