Breaking News

ಹುಣಶ್ಯಾಳ ಪಿಜಿ : ನಿಜಗುಣ ದೇವರ ಷಷ್ಠಬ್ಧಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

Spread the love

ಮೂಡಲಗಿ : ಎಲ್ಲರನ್ನು ಪ್ರೀತಿಸು. ಪ್ರೀತಿಯೇ ದೇವರು ಎಂಬ ತತ್ವವನ್ನು ಸಾರುತ್ತ, ಪಾದರಸದಂತೆ ಸದಾ ಓಡಾಡಿ ನಗುಮುಖದಿಂದಲೇ ತಮ್ಮ ಆತ್ಮೀಯ ವಲಯವೊಂದನ್ನು ಸೃಷ್ಟಿಸಿ ಹುಣಶ್ಯಾಳ ಪಿಜಿ ಕೀರ್ತಿಯನ್ನು ಎಲ್ಲೆಡೆ ಪಸರಿಸಿರುವ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮವನ್ನು ಅತೀ ವಿಜ್ರಂಭನೆಯಿಂದ ಆಚರಿಸಲು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.
ರವಿವಾರದಂದು ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಜನೇವರಿ ತಿಂಗಳಲ್ಲಿ ನಿಜಗುಣ ದೇವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರಿಗೆ ಭಕ್ತರಿಂದ ಗೌರವಾರ್ಪಣೆ ಮಾಡುವುದನ್ನು ಗೊತ್ತುಪಡಿಸಲಾಗಿದೆ.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹುಣಶ್ಯಾಳ ಪಿಜಿ ಗ್ರಾಮವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಮಾರ್ಪಡಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ, ಆಧ್ಯಾತ್ಮಿಕ ಸಂಘಟನೆಯನ್ನು ನಿರಂತರವಾಗಿ ಮಾಡುತ್ತಿರುವ ನಿಜಗುಣ ದೇವರಿಗೆ ನಾವೆಲ್ಲರೂ ಗೌರವ ಅರ್ಪಣೆ ಮಾಡಬೇಕಾಗಿದೆ. ವಿವಿಧ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಹಣವನ್ನು ಭಕ್ತರ ಮೂಲಕ ಸಂಗ್ರಹಿಸಲು ನಿರ್ಧರಿಸಲಾಗಿದ್ದು, ನಾನೂ ಕೂಡ ಷಷ್ಠಬ್ಧಿ ಸಂಭ್ರಮಕ್ಕೆ ಎಲ್ಲ ರೀತಿಯಿಂದಲೂ ತನು-ಮನ-ಧನದಿಂದ ಸಹಾಯ ಮಾಡುತ್ತೇನೆ. ಸ್ವಾಮೀಜಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ವಂತಿಗೆಯನ್ನು ಸಂಗ್ರಹಿಸಬೇಕು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗೋಕಾಕದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸೇರಿದಂತೆ ಅನೇಕರು ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಬಾಲಚಂದ್ರ ಅವರಿಂದಲೇ ಈ ಷಷ್ಠಬ್ಧಿ ಸಮಾರಂಭವನ್ನು ಯಶಸ್ಸುಗೊಳಿಸಲು ಸಾಧ್ಯವಾಗುತ್ತದೆ. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು, ಸಾಹಿತಿ-ಲೇಖಕರು, ಪ್ರಗತಿಪರ ಚಿಂತಕರು ಆಗಮಿಸಲಿದ್ದು ಅವರುಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕೆ ಬೇಕಾಗುವ ಆರ್ಥಿಕ ವ್ಯವಸ್ಥೆಯನ್ನು ಶಾಸಕರು ಮಾಡುವಂತೆ ಶ್ರೀಗಳು ಅಪ್ಪಣೆ ಮಾಡಿದರು.
ಮುಖಂಡ ಅಶೋಕ ಪೂಜಾರಿ ಮಾತನಾಡಿ, ಶೂನ್ಯದಿಂದ ಎಲ್ಲವನ್ನು ಸೃಷ್ಠಿ ಮಾಡುವ ಶಕ್ತಿಯನ್ನು ನಿಜಗುಣ ದೇವರಿಗೆ ಆ ದೇವರು ನೀಡಿದ್ದಾನೆ. ಎಲ್ಲ ಕ್ಷೇತ್ರಗಳಲ್ಲಿ ಶ್ರೀಗಳ ಪಾತ್ರ ಮುಖ್ಯವಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ನಾವು ನೀವೆಲ್ಲರೂ ಹಗಲಿರುಳು ದುಡಿಯೋಣ. ಶ್ರೀಗಳ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿ ಊರುಗಳಿಗೆ ಭೇಟಿ ಕೊಟ್ಟು ದೇಣಿಗೆಯನ್ನು ಸಂಗ್ರಹಿಸೋಣ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈ ಕಾರ್ಯಕ್ರಮದ ಉಸ್ತುವಾರಿ ನೀಡಿದರೆ ಮಾತ್ರ ಇಡೀ ಮೂರು ದಿನಗಳ ಸಮಾರಂಭವು ಅತ್ಯಂತ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಲ್ಲಾಪೂರದ ಚಿದಾನಂದ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಮುರುಘರಾಜೇಂದ್ರಶಿವಾಚಾರ್ಯ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು ಅವರು ಈ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮೀತಿಗಳನ್ನು ರಚನೆ ಮಾಡುವಂತೆ ಸಲಹೆ ಮಾಡಿದರು.
ನಿಜಗುಣ ದೇವರ ಷಷ್ಠಬ್ಧಿ ಸಮಾರಂಭದ ಸ್ವಾಗತ ಸಮೀತಿ ಗೌರವಾಧ್ಯಕ್ಷರನ್ನಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಧ್ಯಕ್ಷರನ್ನಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಕಟಿಸಿದರು.
ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ, ಬಸಗೌಡ ಪಾಟೀಲ(ಮೆಳವಂಕಿ), ವಿಠ್ಠಲ ಪಾಟೀಲ, ರಾಜು ಬೈರುಗೋಳ, ಶಂಕರ ಬಿಲಕುಂದಿ, ಎಂ.ಎಂ. ಪಾಟೀಲ, ಅಪ್ಪಯ್ಯ ಬಡ್ನಿಂಗಗೋಳ, ಎಂ.ಆರ್. ಭೋವಿ, ವಿಠ್ಠಲ ಸವದತ್ತಿ, ಮುತ್ತೆಪ್ಪ ಕುಳ್ಳೂರ, ಶಿವಾನಂದ ಲೋಕನ್ನವರ, ಸುಭಾಸ ಕುರಬೇಟ, ಶಿದ್ಲಿಂಗ ಕಂಬಳಿ, ಸೇರಿದಂತೆ ಅನೇಕರು ತಮ್ಮ ಸಲಹೆಗಳನ್ನು ನೀಡಿದರು. ಬೆಳಗಲಿಯ ಸಿದ್ರಾಮ ಸ್ವಾಮಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಿತ್ತೂರ ರಾಣಿ ಚನ್ನಮ್ಮಾ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *