ಕೊರೋನಾ ನಿಯಂತ್ರಣ ಸಂಬಂಧ ವಿವಿಧ ಗ್ರಾಮಗಳಿಗೆ ಟೀಂ ಎನ್ಎಸ್ಎಫ್ ಭೇಟಿ. ಮೂಡಲಗಿ: ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ಹಿಮ್ಮೆಟ್ಟಿಸಲು ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅಗತ್ಯವಿರುವ ಎಲ್ಲ ಬೀಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯತಿಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಿಸಲಾಗುತ್ತದೆ ಎಂದು ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅರಭಾವಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, …
Read More »ಶಿಥಿಲೀಕರಣಗೊಂಡಿದ್ದ ಆರೋಗ್ಯ ಇಲಾಖೆಯ ವಸತಿ ಗೃಹಗಳಿಗೆ ಕಾಯಕಲ್ಪ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ರೋಗಿಗಳ ಅನುಕೂಲಕ್ಕಾಗಿ ಸ್ವಂತ ಹಣ ನೀಡಿ ದುರಸ್ತಿ ಮಾಡಿಸಿ ನವೀಕರಣಗೊಳಿಸಿದ ಮಾದರಿ ಶಾಸಕ. ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾಳಜಿಗೆ ಷಹಬಾಷ ಎಂದ ಮೂಡಲಗಿ ಜನ ಮೂಡಲಗಿ : ಕೋವಿಡ್ ಎರಡನೇ ಅಲೆ ಸಾಕಷ್ಟು ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣ ಸಿರುವ ಅರಬಾವಿ ಕ್ಷೇತ್ರದ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿ ಮೂಡಲಗಿಯಲ್ಲಿ ಸೋಂಕಿತರಿಗಾಗಿ ಮತ್ತು …
Read More »ಭದ್ರತಾ ಪಡೆಗಳ ಪ್ರಥಸಂಚಲ : ವಿನಾಕಾರಣ ಹೊರೆಗೆ ಬಂದರೆ ಕಠಿಣ ಕ್ರಮ ತಹಶೀಲ್ದಾರ ಭಸ್ಮೆ
ಮೂಡಲಗಿ: ಜಿಲ್ಲಾದ್ಯಾಂತ 22ರಿಂದ 24ರ ವರೆಗೂ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೋಷಣೆ ಹಿನ್ನೆಲೆ ಭದ್ರತಾ ಬಗ್ಗೆ ಸಾರ್ವಜನಿಕರಿಗೆ ಮನೆ ಬಿಟ್ಟು ಹೊರಗೆ ಬರದಂತೆ ಪಥಸಂಚಲನ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಹೇಳಿದರು. ಬುಧುವಾರದಂದು ತಹಶೀಲ್ದಾರ ಕಚೇರಿ ಹಾಗೂ ಪೊಲೀಸ್ ಇಲಾಖೆಯ ಸಯೋಗದಲ್ಲಿ ಜರುಗಿದ ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಪಥಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿನಾಕಾರಣ ಸಾರ್ವಜನಿಕರು …
Read More »ತಹಶೀಲ್ದಾರ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಆಚರಣೆ
ಮೂಡಲಗಿ : ಜಗತ್ತಿನ ಉದ್ಧಾರಕ್ಕಾಗಿ ಗಂಗಾ ಮಾತೆಯನ್ನೇ ಭೂಮಿಗೆ ತಂದ, ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗಯನ್ನೇ ಧರೆಗಿಳಿಸಿದ ಯೋಗಿ ಭರೀರಥರ ತತ್ವಾದರ್ಶಗಳು ಎಂದಿಗೂ ಪ್ರಸ್ತುತವಾಗಿವೆ ಎಂದು ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ ಹೇಳಿದರು. ತಹಶೀಲ್ದಾರ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಪ್ರಯುಕ್ತ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿ ಮಾತನಾಡಿದರು. ಸಮಾಜ ಮುಖಂಡರಾದ ಮುಖಂಡರಾದ ಭಗವಂತ ಉಪ್ಪಾರ ಹಾಗೂ ಹಣಮಂತ ಕಂಕಣವಾಡಿ ಅವರು ಕೊರೋನಾ …
Read More »ಜಾತಿಭೇದ ಮೆಟ್ಟಿನಿಂತ ಮಹಾನ್ ಸಂತ
ಜಾತಿಭೇದ ಮೆಟ್ಟಿನಿಂತ ಮಹಾನ್ ಸಂತ ಪರೋಪಕಾರ ಗೈಯುವ ಧೀಮಂತ ಅಬಲರಲ್ಲಿ ಆತ್ಮಸ್ಥೈರ್ಯ ತುಂಬಿದ ಮಹಾ0ತ ಇವರೇ ಶ್ರೀ ಮಹಾಮಹಿಮ ಬಸವಣ್ಣ ಶರಣರ ಪಡೆಯ ಸಂಘಟನಾ ಶಿಲ್ಪಿ ಸಾತ್ವಿಕ ಸಮಾಜದ ಸಮಾಜ ಶಿಲ್ಪಿ ಸರಳ ಶಬ್ದ ಸೋಪಾನ ಕಟ್ಟಿದ ವಚನ ಶಿಲ್ಪಿ ಇವರೇ ಶ್ರೀ ಮಹಾ ಮಹಿಮ ಬಸವಣ್ಣ ಸಂಪ್ರದಾಯಗಳನ್ನು ಮೆಟ್ಟಿನಿಂತ ವೈಚಾರಿಕ ಕ್ರಾಂತಿಕಾರಿ ಪುರಾಣ ಕಥೆಗಳನ್ನು ಪ್ರಶ್ನಿಸಿದ ಭಕ್ತಿ ಭಂಡಾರಿ ಭಾವ ಬಂಧನಗಳ ಬಿಡಿಸುವ ಭವರೋಗ ಪರಿಹಾರಿ ಇವರೇ ಶ್ರೀ …
Read More »ಸಿಪಿಐ ವೆಂಕಟೇಶ್ ಮುರನಾಳ ಸರ್ವಧಿಕಾರಿ ಧೋರಣೆ ಖಂಡಿಸಿ ಮನವಿ
ಮೂಡಲಗಿ : ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ ಮುರನಾಳ ಅವರು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದಾಗ ಪತ್ರಕರ್ತನು ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿಯು ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಖಂಡನೀಯವಾಗಿದೆ ಎಂದು ಮಾಜಿ ಪ್ರೆಸ್ ಕ್ಲಬ್ ಅಧ್ಯಕ್ಷ ವ್ಹಿ ಎಚ್ ಬಾಲರಡ್ಡಿ ಹೇಳಿದರು. ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪೋಲಿಸ್ …
Read More »ಹಬ್ಬಕ್ಕಿಂತ ಜೀವ ಮುಖ್ಯ : ಪಿ ಎಸ್ಐನಾಗರಾಜ ಖಿಲಾರೆ
ಕೊಣ್ಣೂರ : ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನಾ ಅಬ್ಬರವು ಹೆಚ್ಚಾಗುತ್ತ ದಿನದಿನಕ್ಕೂ ಸಾವು ಸಂಭವವಿಸುತ್ತಲಿವೆ.ಅದನ್ನು ತಡೆಯುವುದಕ್ಕೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಅತ್ಯಾವಶ್ಯವಾಗಿದ್ದು ಮುಸ್ಲಿಂ ಭಾಂದವರ ಪವಿತ್ರ ಹಬ್ಬವಾದ ರಮಜಾನನ್ನು ಮನೆಯಲ್ಲಿಯೆ ಆಚರಿಸಲು ಗೋಕಾಕ ಗ್ರಾಮೀಣ ಪಿ ಎಸ ಐನಾಗರಾಜ ಖಿಲಾರೆಯವರು ಕೊಣ್ಣೂರಲ್ಲಿನ ಜಾಮಿಯಾ ಮಸಿದಿಯಲ್ಲಿ ಕರೆದ ರಮಜಾನ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮುಸ್ಲಿಂ ಭಾಂದವರಿಗೆ ತಿಳಿಸಿದರು. ರಂಜಾನ ತಿಂಗಳು ಮುಸ್ಲಿಮರಿಗೆ ಅತ್ಯಂತ ಪವಿತ್ರ ಮಾಸ. …
Read More »ಕೋವಿಡ್ ಹೊಸ ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಾನೂನು ಕ್ರಮ ಖಚಿತ..14 ದಿನ ಎಚ್ಚರವಾಗಿ ಇರ್ರಿ..ಎಸ್‍ಪಿ ಲಕ್ಷ್ಮಣ ನಿಂಬರಗಿ
ಬೆಳಗಾವಿ: ನಾಳೆಯಿಂದ ಮೇ 24ವರೆಗೂ ಲಾಕ್‍ಡೌನ್‍ಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಕೋವಿಡ್ ಗೈಡ್‍ಲೈನ್ಸ್ ಯಾರಾದ್ರೂ ಉಲ್ಲಂಘಿಸಿದ್ರೆ ಕಾನೂನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ರವಿವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯವರು ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ …
Read More »ಅಧಿಕಾರಿಯೊಳಗೆ ಮತ್ತೊಬ್ಬ ಅಧಿಕಾರಿ
ಮೂಡಲಗಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಆಗಿ ಬಂದಿದ್ದು, ತಹಶೀಲ್ದಾರ ಮೋಹನಕುಮಾರ ಭಸ್ಮೆಯವರಿಗೆ ಮೂಡಲಗಿ ಯಾವ ಋಣಾನುಬಂಧವೂ ಗೊತ್ತಿಲ್ಲ ಆದರೆ ಈ ಕೊರೋನಾ ಎರಡನೇ ಅಲೆ ಮುನ್ಸೂಚನೆಯಿಂದಲೂ ಆ ಭಗವಂತ ಅವರನ್ನು ಇಲ್ಲಿಗೆ ಕಳಿಸಿದ್ದಾನೆ ಎಂಬ ಭಾವನೆ ಮೂಡುತ್ತದೆ. ಮೋಹನಕುಮಾರ ಭಸ್ಮೆ ಅವರು ಬರೀ ತಹಶೀಲ್ದಾರ ಅಷ್ಟೇ ಅಲ್ಲ, ಅವರೊಳಗೆ ಇನ್ನೊಬ್ಬ ಅಧಿಕಾರಿ ಇದ್ದಾನೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ಭಸ್ಮೆ ಅವರು ಮೂಲತ …
Read More »3 ತಿಂಗಳ ವೇತನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ಘೋಷಿಸಿದ ಶಾಸಕ ಗಣೇಶ ಹುಕ್ಕೇರಿ
ಕಾರ್ಮಿಕರ ದಿನಾಚರಣೆ ವಿಶೇಷವಾಗಿ ಕೋವಿಡ್ ವಾರಿಯರ್ ಗಳಿಗೆ ನೆರವು ಚಿಕ್ಕೋಡಿ: ಕಾರ್ಮಿಕರ ದಿನಾಚರಣೆಯಂದು ಕೋವಿಡ್ ವಾರಿಯರ್ ಗಳಿಗೆ ಶಾಸಕ ಗಣೇಶ್ ಹುಕ್ಕೇರಿಯವರಿಂದ ಸಿಹಿ ಸುದ್ದಿ ಸಿಕ್ಕಿದೆ. ತನ್ನ ಮೂರು ತಿಂಗಳ ಸಂಬಳವನ್ನು ತಮ್ಮ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ನೀಡಲು ಶಾಸಕ ಗಣೇಶ ಹುಕ್ಕೇರಿ ಮುಂದಾಗಿದ್ದಾರೆ. ಗಣೇಶ್ ಹುಕ್ಕೇರಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ತನ್ನ ಕ್ಷೇತ್ರದ ಕೊರೋನಾ ಮುಂಚೂಣಿ ಕಾರ್ಯಕರ್ತರಾದ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ಸಂಬಳವವನ್ನು ನೀಡಲು ತೀರ್ಮಾನಿಸಿದ್ದಾರೆ. …
Read More »