ಗೋಕಾಕ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಹಿಂದೆ ಇರುವವರನ್ನು ಪತ್ತೆಹಚ್ಚಿ ಕೂಡಲೇ ಬಂಧಿಸುವಂತೆ ಆಗ್ರಹಿಸಿ ರಮೇಶ ಜಾರಕಿಹೊಳಿ ಅಭಿಮಾನಿಗಳು ರವಿವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮುಖಂಡ ಭೀಮಶಿ ಭರಮಣ್ಣವರ ಮಾತನಾಡಿ, ಸಾಹುಕಾರ್ ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಿರುವವನು ಮಹಾನಾಯಕ ಅಲ್ಲ ಅವನು ಕಳನಾಯಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಮೇಶ ಜಾರಕಿಹೊಳಿ ಅವರು ದೂರು ದಾಖಲಿಸಿದ ಅರ್ಧ ಗಂಟೆಯಲ್ಲಿ ಸಿಡಿಯಲ್ಲಿರುವ ಯುವತಿ ಎನ್ನಲಾದ ನಕಲಿ ವಿಡಿಯೋ ಮಾಡಿ ಮಾಜಿ ಸಚಿವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಕಳನಾಯಕ ಯಾರೇಂಬುವದು ಎಲ್ಲರಿಗೂ ತಿಳಿದ ವಿಷಯ. ಯಾಕೆಂದರೆ ಕುಂಬಳಕಾಯಿ ಕಳ್ಳ ಎಂದರೆ ಬೆನ್ನು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದರು.
ರಾಜೇಶ್ವರಿ ಒಡೇಯರ ಮಾತನಾಡಿ, ಸಂತೃಸ್ತ ಯುವತಿ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗುತ್ತಿದೆ ಆದರೆ ಅವಳು ಸಂತ್ರಸ್ತ ಯುವತಿ ಅಲ್ಲವೇ ಅಲ್ಲ. ಇವಳ ಜೊತೆಗೆ ಇರುವ ಟೀಮ್ ಬೆನ್ನು ಮುಟ್ಟಿಕೊಳ್ಳುತ್ತಿರುವ ಕಳನಾಯಕನಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ನಕಲಿ ಸಿಡಿ ಸೃಷ್ಟಿಸಿ, ರಮೇಶ ಜಾರಕಿಹೊಳಿ ಅವರ ತೆಜೋವಧೆ ಮಾಡಿದೆ ಎಂದು ಆರೋಪಿಸಿದರು.
ಶ್ರೀದೇವಿ ತಡಕೋಡ ಮಾತನಾಡಿ, ರಮೇಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಕಾಣದ ಕೈಗಳು ವ್ಯವಸ್ಥಿತ ಪಿತೂರಿ ನಡೆಸಿ ಅವರ ತೇಜೋವಧೆ ಮಾಡಿ ಅವರ ಹೆಸರಿಗೆ ಕಳಂಕ ತರುವ ಕಾರ್ಯಮಾಡಿದ್ದು, ಸರಕಾರದಿಂದ ರಚನೆಯಾದ ಎಸ್‍ಐಟಿ ತಂಡದವರು ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಬಂಧಿಸಿ ಪ್ರಕರಣದ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ತೋರಿಸಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುಂಚೆ ಅರ್ಧ ಗಂಟೆಗೂ ಹೆಚ್ಚು ಕಾಲ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಪೆÇಲೀಸ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಬಾಕ್ಸ:
“ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ಮಾಡಿದ ಅಪರಾಧಿಗಳು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಅಭಿಮಾನಿಗಳಿಗೆ ಪೋಲಿಸರು ಹಲವು ಮುಖಂಡರನ್ನು ಕರೇದು ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡದಂತೆ ಸೂಚನೆ ನೀಡಿ, ಪ್ರತಿಭಟನೆಯನ್ನು ಹತ್ತಿಕ್ಕೂವ ಕೇಲಸ ಮಾಡುತ್ತಿದ್ದಾರೆ ಎಂದು ಪತ್ರಕರ್ತರÀ ಮುಂದೆ ದೂರಿದರು.”
ಈ ಸಂದರ್ಭದಲ್ಲಿ ಮುಖಂಡರುಗಳಾದ ಸುರೇಶ ಸನದಿ, ಹನುಮಂತ ದುರ್ಗನ್ನವರ, ಕಿರಣ ಡಮಾಮಗರ, ಶಫಿ ಜಮಾದಾರ, ಜಾವೇದ ಗೋಕಾಕ, ಅಜರ ಮುಜಾವರ, ಜ್ಯೋತಿ ಕೋಲಾರ, ಬಸವರಾಜ ಹಿರೇಮಠ, ಅಡಿವೇಶ ಮಜ್ಜಗಿ, ಮುತ್ತು ಜಮಖಂಡಿ, ಕೃಷ್ಣಾ ಖಾನಪ್ಪನವರ, ಅನಿಲ ತುರಾಯಿದಾರ, ವಿರೇಂದ್ರ ಏಕ್ಕೇರಿಮಠ, ಸುರೇಶ ಇಳಿಗೇರ, ಪುನೀತ ಗಾಣ ಗೇರ, ತಳದಪ್ಪ ಅಮ್ಮಣಗಿ. ರವಿ ಕಡಕೋಳ, ಮಂಜು ಪ್ರಭುನಟ್ಟಿ, ಕುಸುಮಾ ಖನಗಾಂವಿ, ಸಂತೋಷ ಕಟ್ಟಿಕಾರ, ಹನಮಂತ ಯಡ್ರಾಂವಿ, ವಿಶಾಲ ಪಟಗುಂದಿ, ಮಲ್ಲಿಕಜಾನ ತಳವಾರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
Check Also
ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?
Spread the love ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …