ಗೋಕಾಕ : ದಿ.ಗೋಕಾಕ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಜಾರಕಿಹೊಳಿ ಸಹೋದರರ ನೇತೃತ್ವದ ಗುಂಪಿನ ಮಸಗುಪ್ಪಿಯ ಅಪ್ಪಯ್ಯಾ ನಿಂಗಪ್ಪ ಬಡನಿಂಗಗೋಳ ಮತ್ತು ಉಪಾಧ್ಯಕ್ಷರಾಗಿ ರಾಜಾಪೂರದ ರಾಜು ಸತ್ತೆಪ್ಪ ಬೈರುಗೋಳ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಗುರುವಾರದಂದು ಇಲ್ಲಿನ ಬ್ಯಾಂಕಿನ ಸಭಾಗೃಹದಲ್ಲಿ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಈ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಅವರು ಪ್ರಕಟಿಸಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ವಿಪ ಸದಸ್ಯ ಲಖನ್ ಜಾರಕಿಹೊಳಿ ಅವರ ಮಾರ್ಗದರ್ಶನ ಹಾಗೂ ರೈತರ ಸಹಕಾರದಿಂದ ಪಿಎಲ್‍ಡಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಅಪ್ಪಯ್ಯಾ ಬಡನಿಂಗಗೋಳ ಹಾಗೂ ಉಪಾಧ್ಯಕ್ಷ ರಾಜು ಬೈರುಗೋಳ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಳೆದ ದಿ 24 ರಂದು ನಡೆದ ಪಿಎಲ್‍ಡಿ ಬ್ಯಾಂಕಿನ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ 2023 ರಿಂದ 2028 ರವರೆಗೆ ಎಲ್ಲ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ನಂತರ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ನಮ್ಮ ಕುಟುಂಬದ ಸಮರ್ಥ ಮಾರ್ಗದರ್ಶನದಲ್ಲಿ ಪಿಎಲ್‍ಡಿ ಬ್ಯಾಂಕು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ರೈತರು ನಮ್ಮ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಮಾಜಿ ಉಪಾಧ್ಯಕ್ಷ ಟಿ.ಆರ್. ಕಾಗಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲಕ್ಕಪ್ಪ ಲೋಕುರಿ, ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ರಂಗಪ್ಪ ಇಟ್ಟನ್ನವರ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮುಖಂಡರಾದ ವಿಠ್ಠಲ ಪಾಟೀಲ, ಬಸವರಾಜ ಪಂಡ್ರೊಳ್ಳಿ, ಹಣಮಂತ ತೇರದಾಳ, ಚಂದ್ರು ಬೆಳಗಲಿ, ಭೂತಪ್ಪ ಗೋಡೇರ, ಮಹಾದೇವಪ್ಪ ಪತ್ತಾರ, ಸುಭಾಸ ಕುರಬೇಟ, ಪರಸಪ್ಪ ಬಬಲಿ, ಸುಭಾಸ ವಂಟಗೋಡಿ, ಲಕ್ಷ್ಮಣ ಮಸಗುಪ್ಪಿ, ನಾಗಪ್ಪ ಮಂಗಿ, ಈರಪ್ಪ ಬೀರನಗಡ್ಡಿ, ರಾಜು ಬಳಿಗಾರ, ಬ್ಯಾಂಕಿನ ವ್ಯವಸ್ಥಾಪಕ ಸಂದೀಪ ಪತ್ರಾವಳಿ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಿಎಲ್‍ಡಿ ಬ್ಯಾಂಕಿಗೆ ಆಯ್ಕೆಯಾದವರು : ಗೋಕಾಕ ಸಾಲಗಾರ ಮಹಿಳಾ ಕ್ಷೇತ್ರದಿಂದ ಲಕ್ಷ್ಮೀ ಕರೆಪ್ಪ ದಳವಾಯಿ, ಮಮದಾಪೂರ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಹಣಮಂತ ದುಂಡಪ್ಪ ಅಮ್ಮಿನಬಾಂವಿ, ಮಕ್ಕಳಗೇರಿ ಸಾಲಗಾರ ಹಿಂದುಳಿದ ವರ್ಗದಿಂದ ಪ್ರಕಾಶ ಲಕ್ಷ್ಮಪ್ಪ ತೋಳಿನವರ, ಖನಗಾಂವ ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಫಕೀರಪ್ಪ ದುರ್ಗಪ್ಪ ಪೂಜೇರಿ, ಅರಭಾವಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಶಿವಮೂರ್ತಿ ಲಕ್ಕಪ್ಪ ಹುಕ್ಕೇರಿ, ರಾಜಾಪೂರ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ರಾಜು ಸತ್ತೆಪ್ಪ ಬೈರುಗೋಳ, ಮಸಗುಪ್ಪಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಲಗಮಪ್ಪ ಬನಪ್ಪ ಬೀರನಗಡ್ಡಿ, ಮೂಡಲಗಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬಸವರಾಜ ವಿಠ್ಠಪ್ಪ ಬಡಗನ್ನವರ, ಕೌಜಲಗಿ ಸಾಲಗಾರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಅಶೋಕ ವಸಂತ ಉದ್ದಪ್ಪನವರ, ಮೆಳವಂಕಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸಿದ್ದಪ್ಪ ದೊಡ್ಡಯಲ್ಲಪ್ಪ ಹಂಜಿ, ಕುಲಗೋಡ ಸಾಲಗಾರ ಮಹಿಳಾ ಕ್ಷೇತ್ರದಿಂದ ಶಕುಂತಲಾ ಶ್ರೀಕಾಂತ ವಂಟಗೋಡಿ, ಯಾದವಾಡ ಸಾಲಗಾರ ಹಿಂದುಳಿದ ವರ್ಗದಿಂದ ಧರೆಪ್ಪ ಬಸಪ್ಪ ಮುಧೋಳ, ಅಂಕಲಗಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಶಂಕರ ಚಂದ್ರಪ್ಪ ಭೂಸನ್ನವರ, ಮದವಾಲ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬಸವಂತಪ್ಪ ಅಪ್ಪಣ್ಣಾ ಹೊಸೂರ ಮತ್ತು ಬಿನ್ ಸಾಲಗಾರ ಕ್ಷೇತ್ರದಿಂದ ಅಪ್ಪಯ್ಯಾ ನಿಂಗಪ್ಪ ಬಡನಿಂಗಗೋಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.