ಕೂಸು ಕಂದಮ್ಮನ ಎರಡನೇ ಮಡಿಲು
ನಿದಿರಮ್ಮನ ಠಾವಿರುವ ಸ್ಥಳವು
ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು
ಅದರ ವಾಸಸ್ಥಾನದ ಕೂಗೆ ಜೋಜೋ ಲಾಲಿ ಮಡಿಲು
ಚನ್ನಪಟ್ಟಣದ ಮರದ ತೊಟ್ಟಿಲು
ಹಾಲುಗಲ್ಲದ ಕಂದಮ್ಮಗಳ ಚಂದದ ಮಡಿಲು
ಅಮ್ಮನ ನಂತರದ ಸ್ಥಾನ ನೀನೇ ಅಲ್ಲವೇ
ನಿನ್ನ ತೂಗಿಸಿ ನಿದ್ದೆಗೆ ಜಾರಿಸು ವರಲ್ಲವೇ
ಮಹಾಸತಿ ಅನುಸೂಯ ತ್ರಿಮೂರ್ತಿ ಗಳನ್ನು ಅಲ್ಲವೇ
ಯಶೋದೆ ಕೃಷ್ಣನನ್ನು ನಿನ್ನಲ್ಲಿ ತೂಗಿಸಿ ಮಲಗಿಸಲಿಲ್ಲವೇ
ತೊಟ್ಟಿಲಿರುವ ಮನೆ ಕಂದನ ಕಳೆಯಲ್ಲವೇ
ಮಗುವಿನ ನಗು ಅಳುವಿನ ಸಮ್ಮಿಲನ ವಲ್ಲವೇ
ಏನೇ ಆದರೂ ನೀನು ಚಮತ್ಕಾರಿ ಮಾಯಾವಿ ಅಲ್ಲವೇ
ನಿನ್ನೊಳಗೆ ದೇವಾನು ದೇವತೆಗಳಲ್ಲರೂ ನಿನ್ನಲ್ಲಿಮಲಗಿ ಮಲಗಿ ನಿದಿರಮ್ಮನ ಕಳಿಸಿದೆಯಲ್ಲವೇ
✍️ *ಮಳೆಬಿಲ್ಲು* ಸಾಹಿತಿ ಲೀಲಾ ಗುರುರಾಜ್, ತುಮಕೂರು 🙏🥰🌹❤️